ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಿಎಂ ಸಿದ್ದರಾಮಯ್ಯ ಅವರು ಇಂದು 2025-26ನೇ ಸಾಲಿನ ಮುಂಗಡ ಪತ್ರವನ್ನು ಮಂಡನೆ ಮಾಡಿದರು. ಈ ವೇಳೆ ಭರಪೂರ ಘೋಷಣೆಗಳನ್ನು ಮಾಡಿದ್ದಾರೆ.
ಸಿದ್ದರಾಮಯ್ಯರ ಪ್ರಮುಖ 20 ಘೋಷಣೆಗಳು
- ಬೆಂಗಳೂರಿನ ನಂದಿನಿ ಲೇಔಟ್ನಲ್ಲಿ ಮಲ್ಟಿ ಸ್ಕ್ರೀನ್ ಸಮುಚ್ಛಯ
- ಮಲ್ಟಿಪ್ಲೆಕ್ಸ್ ಸೇರಿ ಎಲ್ಲಾ ಚಿತ್ರಮಂದಿರಗಳಲ್ಲಿ ಪ್ರತಿ ಪ್ರದರ್ಶನಕ್ಕೆ ₹200
- ಬೆಂಗಳೂರು ಮೂಲ ಸೌಕರ್ಯ ಅಭಿವೃದ್ಧಿ ₹7,000 ಕೋಟಿ ಅನುದಾನ
- ಬೆಂಗಳೂರಲ್ಲಿ ಉತ್ತರ-ದಕ್ಷಿಣ, ಪೂರ್ವ-ಪಶ್ಚಿಮ ಟನಲ್ ಕಾರಿಡಾರ್
- ಬೆಂಗಳೂರಲ್ಲಿ ಟನಲ್ ಕಾರಿಡಾರ್‌ಗೆ ₹19,000 ಕೋಟಿ ಅನುದಾನ
- ಅಬಕಾರಿ ಇಲಾಖೆಗೆ ಪ್ರಸಕ್ತ ಸಾಲಿನಲ್ಲಿ ₹40,000 ತೆರಿಗೆ ಸಂಗ್ರಹ ಗುರಿ]
- ಪುತ್ತೂರಿನಲ್ಲಿ ಹೊಸ ವೈದ್ಯಕೀಯ ಕಾಲೇಜು ಸ್ಥಾಪನೆ
- ಶಾಲಾ ಮಕ್ಕಳಿಗೆ 6 ದಿನ ಮೊಟ್ಟೆ, ಬಾಳೆ ಹಣ್ಣು ವಿತರಣೆಗೆ ₹1,500 ಕೋಟಿ
- ಆಶಾ ಕಾರ್ಯಕರ್ತೆಯರ ಸಹಾಯಧನ 1000 ರೂಪಾಯಿ ಏರಿಕೆ
- ಅಂಗನವಾಡಿ ಸಹಾಯಕಿಯರಿಗೆ ₹750 ಸಹಾಯಧನ ಹೆಚ್ಚಳ
- ಕೊಡಗಿನ ವಿರಾಜಪೇಟೆಯಲ್ಲಿ 400 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆ
- ಚಿಂತಾಮಣಿ ತಾಲೂಕಿನಲ್ಲಿ 150 ಕೋಟಿ ವೆಚ್ಚದಲ್ಲಿ VTU ಘಟಕ ಕಾಲೇಜು
- ಬಾಣಂತಿ ಮರಣ ಪ್ರಮಾಣ ಶೂನ್ಯಕ್ಕಿಳಿಸಲು 320 ಕೋಟಿ ಅನುದಾನ
- ನೋಂದಾಯಿತ ಕಾರ್ಮಿಕರ ಮರಣ ಪರಿಹಾರ ₹75,000ದಿಂದ ₹1.5 ಲಕ್ಷಕ್ಕೇರಿಕೆ
- ಪತ್ರಕರ್ತರಿಗೆ ಮಾಸಾಶನ 12,000 ದಿಂದ 15,000ಕ್ಕೆ ಏರಿಕೆ
- ಕೆಲಸದ ಸ್ಥಳದಲ್ಲೇ ಮೃತಪಟ್ಟರೆ ಕುಟುಂಬಸ್ಥರಿಗೆ ಪರಿಹಾರ ₹5 ರಿಂದ ₹8 ಲಕ್ಷಕ್ಕೇರಿಕೆ
- ಸ್ವ ಸಹಾಯ ಗುಂಪು ಮಹಿಳೆಯರಿಗೆ ಅಕ್ಕ ಕೋ-ಆಪರೇಟಿವ್ ಸೊಸೈಟಿ ಸ್ಥಾಪನೆ
- ಗೃಹ ಲಕ್ಷ್ಮಿ ಯೋಜನೆ ಫಲಾನುಭವಿಗಳ ಸ್ವಸಹಾಯ ಸಂಘಗಳಿಗೆ ಸೊಸೈಟಿ
- ಸ್ವ-ಸಹಾಯ ಸಂಘದ ಮಹಿಳೆಯರಿಗೆ ಇಂದಿರಾ ಕ್ಯಾಂಟೀನ್ ನಿರ್ವಹಣೆ
- 10 ನಗರ ಪ್ರದೇಶಗಳಲ್ಲಿ ಪ್ರಯೋಗಿಕವಾಗಿ ನಿರ್ವಹಣೆಗೆ ನೀಡಲಾಗುವುದು
- ಪತ್ರಕರ್ತರಿಗೆ ‘ಮಾಧ್ಯಮ ಸಂಜೀವಿನಿ’ ಯೋಜನೆ– 5 ಲಕ್ಷ ರೂ. ನಗದು ರಹಿತ ಚಿಕಿತ್ಸೆ