HP ಕಂಪೆನಿ ಸರದಿ: ಶೇ. 10 ರಷ್ಟು ಉದ್ಯೋಗಿಗಳಿಗೆ ಸಿಗಲಿದೆ ಗೇಟ್ ಪಾಸ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಟ್ವಿಟರ್, ಅಮೆಜಾನ್, ಗೂಗಲ್, Meta ಬಳಿಕ ಇದೀಗ HP ಕಂಪೆನಿ ಶೇ. 10 ರಷ್ಟು ಉದ್ಯೋಗಿಗಳ ವಜಾಗೊಳಿಸಲು ಮುಂದಾಗಿದೆ. ಜಾಗತಿಕವಾಗಿ ಆರ್ಥಿಕ ಸವಾಲು ಎದುರಿಸಲು 6,000 ಉದ್ಯೋಗ ಕಡಿತಗೊಳಿಸಲಿದೆ.

ಒಂದೆಡೆ ಪರ್ಸನಲ್ ಕಂಪ್ಯೂಟರ್ ಬೇಡಿಕೆ ಕಡಿಮೆಯಾಗಿದ್ದು, ಆದಾಯ ಕಡಿಮೆಯಾಗಿರುವುದಕ್ಕೆ ಪ್ರತಿಕ್ರಿಯೆಯಾಗಿ ಹೆವ್ಲೆಟ್-ಪ್ಯಾಕರ್ಡ್ ಕಂಪನಿ(HP) ಮುಂದಿನ ಮೂರು ವರ್ಷಗಳಲ್ಲಿ 6,000 ಉದ್ಯೋಗಗಳನ್ನು ಕಡಿತಗೊಳಿಸಲಿದೆ.

HP ಮುಂದಿನ ಮೂರು ವರ್ಷಗಳಲ್ಲಿ 61,000 ಜಾಗತಿಕ ಉದ್ಯೋಗಿಗಳಲ್ಲಿ 10% ವರೆಗೆ ಕಡಿತಗೊಳಿಸುತ್ತದೆ ಎಂದು CEO ಎನ್ರಿಕ್ ಲೊರೆಸ್ ಹೇಳಿದ್ದಾರೆ.

ಇತ್ತೀಚಿನ ವಾರಗಳಲ್ಲಿ ಹಲವಾರು ಐಟಿ ಕಂಪನಿಗಳು ತಮ್ಮ ಉದ್ಯೋಗಿಗಳನ್ನು ಕಡಿಮೆ ಮಾಡುವ ಉದ್ದೇಶಗಳನ್ನು ಬಹಿರಂಗಪಡಿಸಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!