April 21, 2026
Tuesday, April 21, 2026
spot_img

ಸ್ಥಿರ ಠೇವಣಿ ಬಡ್ಡಿ ದರ ಪರಿಷ್ಕರಿಸಿದ ಶ್ರೀರಾಮ್‌ ಫೈನಾನ್ಸ್‌ ಲಿಮಿಟೆಡ್‌: ಮೇ. 6 ರಿಂದ ಜಾರಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಶ್ರೀರಾಮ್ ಗ್ರೂಪ್‌ನ ಪ್ರಮುಖ ಸಂಸ್ಥೆಯಾದ ಶ್ರೀರಾಮ್ ಫೈನಾನ್ಸ್ ಲಿಮಿಟೆಡ್ (SFL), ವಿವಿಧ ಅವಧಿಯ ಸ್ಥಿರ ಠೇವಣಿಗಳ ಮೇಲಿನ ಬಡ್ಡಿ ದರಗಳ ಪರಿಷ್ಕರಣೆಯನ್ನು ಘೋಷಿಸಿದೆ. ಈ ಪರಿಷ್ಕೃತ ದರಗಳು ಮೇ 6, 2026 ರಿಂದ ಜಾರಿಗೆ ಬರಲಿವೆ.

ಬ್ಯಾಂಕ್ ಸಾಲ ಸೌಲಭ್ಯಗಳು, ಪರಿವರ್ತಿಸಲಾಗದ ಡಿಬೆಂಚರ್‌ಗಳು, ಅಧೀನ ಸಾಲ ಮತ್ತು ಸ್ಥಿರ ಠೇವಣಿ ಕಾರ್ಯಕ್ರಮಗಳಿಗಾಗಿ ಶ್ರೀರಾಮ್ ಫೈನಾನ್ಸ್ ಸಂಸ್ಥೆಯ ದೀರ್ಘಕಾಲಿಕ ಕ್ರೆಡಿಟ್ ರೇಟಿಂಗ್‌ಗಳನ್ನು AAA (ಸ್ಥಿರ) ಮಟ್ಟಕ್ಕೆ ಇತ್ತೀಚೆಗೆ ಉನ್ನತೀಕರಿಸಲಾಗಿದೆ. ಈ ರೇಟಿಂಗ್ ಪ್ರತಿ ಏಜೆನ್ಸಿಯ ಮಾನದಂಡಗಳಲ್ಲಿ ಅತ್ಯುನ್ನತವಾಗಿದೆ. CRISIL, ICRA, ಇಂಡಿಯಾ ರೇಟಿಂಗ್ಸ್ & ರೀಸರ್ಚ್ ಮತ್ತು CARE ರೇಟಿಂಗ್ಸ್ ಸಂಸ್ಥೆಗಳು ಈ ರೇಟಿಂಗ್ ನೀಡಿರುವುದನ್ನು ಅನುಸರಿಸಿ, ಈಗ ಬಡ್ಡಿ ದರಗಳನ್ನು ಪರಿಷ್ಕರಿಸಲಾಗಿದೆ.

ಈ ಸ್ಥಿರ ಠೇವಣಿಗಳಿಗೆ CRISIL ರೇಟಿಂಗ್ಸ್ ಸಂಸ್ಥೆಯು ‘CRISIL AAA/ಸ್ಥಿರ’, ICRA ಸಂಸ್ಥೆಯು ‘[ICRA]AAA (ಸ್ಥಿರ)’, ಇಂಡಿಯಾ ರೇಟಿಂಗ್ಸ್ ಅಂಡ್ ರಿಸರ್ಚ್ ಸಂಸ್ಥೆಯು ‘IND AAA/ಸ್ಥಿರ’ ಮತ್ತು CARE ರೇಟಿಂಗ್ಸ್ ಸಂಸ್ಥೆಯು ‘CARE AAA/ಸ್ಥಿರ’ ಎಂಬ ರೇಟಿಂಗ್‌ಗಳನ್ನು ನೀಡಿವೆ.

ಪರಿಷ್ಕೃತ ಬಡ್ಡಿ ದರಗಳು (ಮೇ 6, 2026 ರಿಂದ ಜಾರಿಗೆ ಬರುತ್ತವೆ)

ರೂ. 10 ಕೋಟಿವರೆಗಿನ ಠೇವಣಿಗಳು

ಅವಧಿ ಅಸ್ತಿತ್ವದಲ್ಲಿರುವ ವಾರ್ಷಿಕ ದರ ಪರಿಷೃತ ವಾರ್ಷಿಕ ದರ
12 ತಿಂಗಳುಗಳು 7.00% 6.75%
15 ತಿಂಗಳುಗಳು (ಡಿಜಿಟಲ್ ಮಾತ್ರ) 7.25% 7.05%
18 ತಿಂಗಳುಗಳು – 23 ತಿಂಗಳುಗಳು 7.15% 7.00%
24 ತಿಂಗಳುಗಳು – 35 ತಿಂಗಳುಗಳು 7.25% 7.05%
36 ತಿಂಗಳುಗಳು – 60 ತಿಂಗಳುಗಳು 7.60% 7.25%

ಹೆಚ್ಚುವರಿ ಪ್ರಯೋಜನಗಳು ಈ ಕೆಳಕಂಡಂತೆ ಅನ್ವಯವಾಗುತ್ತವೆ:

• ಹಿರಿಯ ನಾಗರಿಕರು (ಠೇವಣಿ ಇಡುವ ಅಥವಾ ನವೀಕರಿಸುವ ಸಮಯದಲ್ಲಿ 60 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನವರು) ವಾರ್ಷಿಕವಾಗಿ 0.50% ಹೆಚ್ಚುವರಿ ಬಡ್ಡಿಯನ್ನು ಪಡೆಯಲು ಅರ್ಹರಾಗಿರುತ್ತಾರೆ
• ಮಹಿಳಾ ಠೇವಣಿದಾರರು ವಾರ್ಷಿಕವಾಗಿ ಹೆಚ್ಚುವರಿಯಾಗಿ 0.05% ಅನ್ನು ಪಡೆಯುತ್ತಾರೆ.
• ಮೆಚ್ಯೂರ್ ಆದ ಠೇವಣಿಗಳ ನವೀಕರಣಕ್ಕೆ ವಾರ್ಷಿಕವಾಗಿ 0.15% ಹೆಚ್ಚುವರಿ ಬಡ್ಡಿ ಸಿಗಲಿದೆ
• ಠೇವಣಿಗಳನ್ನು ಕನಿಷ್ಠ ರೂ. 5,000/- ಮೊತ್ತಕ್ಕೆ ಒಳಪಟ್ಟು, ರೂ. 1,000/- ರ ಗುಣಕಗಳಲ್ಲಿ ಸ್ವೀಕರಿಸಲಾಗುತ್ತದೆ.

ಸ್ಥಿರ ಹೂಡಿಕೆ ಯೋಜನೆ (FIP) — ಪರಿಷ್ಕೃತ ದರಗಳು (ಮೇ 6, 2026 ರಿಂದ ಜಾರಿಗೆ ಬರುತ್ತವೆ)

ಅವಧಿ ಅಸ್ತಿತ್ವದಲ್ಲಿರುವ ವಾರ್ಷಿಕ ದರ ಪರಿಷೃತ ವಾರ್ಷಿಕ ದರ
12 – 23 ತಿಂಗಳುಗಳು 7.00% 6.75%
24 – 35 ತಿಂಗಳುಗಳು 7.25% 7.05%
36 – 48 ತಿಂಗಳುಗಳು 7.60% 7.25%

ಹೆಚ್ಚುವರಿ ಪ್ರಯೋಜನಗಳು ಈ ಕೆಳಕಂಡಂತೆ ಅನ್ವಯವಾಗುತ್ತವೆ:

• ಮಹಿಳಾ ಠೇವಣಿದಾರರು ವಾರ್ಷಿಕವಾಗಿ ಹೆಚ್ಚುವರಿಯಾಗಿ 0.05% ಅನ್ನು ಪಡೆಯುತ್ತಾರೆ.
• ಸ್ಥಿರ ಹೂಡಿಕೆ ಯೋಜನೆಯ (FIP) ಇತರ ಕರಾರುಗಳು ಮತ್ತು ಷರತ್ತುಗಳು ಬದಲಾಗುವುದಿಲ್ಲ.
• ಕನಿಷ್ಠ 1,000/- ರೂ.ಗಳಿಗೆ ಒಳಪಟ್ಟು, FIP ಕಂತನ್ನು 500/- ರೂ.ಗಳ ಗುಣಕಗಳಲ್ಲಿ ಸ್ವೀಕರಿಸಲಾಗುತ್ತದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !