ಬಾಲಿವುಡ್ ಗೆ ಎಂಟ್ರಿ ಕೊಡುತ್ತಿದ್ದಾಳೆ ಹೃತಿಕ್‌ ಸಹೋದರಿ.. ʼಇಷ್ಕ್ ವಿಷ್ಕ್‌ʼ ಸೀಕ್ವೆಲ್‌ನಲ್ಲಿ ಪಶ್ಮಿನಾ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಬಾಲಿವುಡ್‌ ನಲ್ಲಿ ಇತ್ತೀಚಿನ ದಿನಗಳಲ್ಲಿ ಸ್ಟಾರ್‌ ಕಿಡ್‌ ಗಳು ಹೆಚ್ಚು ಶೈನ್‌ ಆಗುತ್ತಿದ್ದಾರೆ. ಸೈಪ್‌ ಅಲಿಖಾನ್‌ ಮಗಳು ಸಾರಾ, ಚುಂಕಿ ಪಾಂಡೆ ಮಗಳು ಅನನ್ಯಾ ಪಾಂಡೆ, ಶ್ರೀದೇವಿ ಪುತ್ರಿ ಜಾಹ್ನವಿ ಕಪೂರ್‌ ಸೇರಿದಂತೆ ತಾರಾ ಕುಡಿಗಳು ಸಿನಿ ಅಂಗಳದಲ್ಲಿ ಮಿಂಚು ಹರಿಸುತ್ತಿದ್ದಾರೆ. ಇದೀಗ ಮತ್ತೊಂದು ತಾರಾಕುಟುಂಬದ ಯುವನಟಿ ಬಾಲಿವುಡ್‌ ಗೆ ಎಂಟ್ರಿಕೊಡಲು ಸಜ್ಜಾಗಿದ್ದಾಳೆ. ಪ್ರತಿಭೆ- ಸೌಂದರ್ಯಗಳೆರಡೂ ಮೇಳೈಸಿದ ಸುಂದರಿ, ಬ್ಲಾಕ್‌ ಬಸ್ಟರ್‌ ಚಿತ್ರವೊಂದರ ಸೀಕ್ವೆಲ್‌ ಮೂಲಕ ಚಿತ್ರರಂಗಕ್ಕೆ ಅಡಿಯಿಡಲಿದ್ದಾಳೆ.

ರೋಶನ್ ಕುಟುಂಬವು ಹಲವು ವರ್ಷಗಳಿಂದ ಹಲವಾರು ಪ್ರತಿಭಾವಂತ ಕಲಾವಿದರನ್ನು ಬಾಲಿವುಡ್‌ಗೆ ಪ್ರಸ್ತುತಪಡಿಸಿದೆ. ಸ್ವತಃ ಹೃತಿಕ್ ರೋಷನ್ ದೇಶದ ಅತಿದೊಡ್ಡ ಸೂಪರ್‌ಸ್ಟಾರ್‌ಗಳಲ್ಲಿ ಒಬ್ಬರು. ಅವರ ತಂದೆ, ನಿರ್ದೇಶಕ ರಾಕೇಶ್ ರೋಷನ್ ಮತ್ತು ಸಂಗೀತ ನಿರ್ದೇಶಕ ಹಾಗೂ ಹೃತಿಕ್‌ ಚಿಕ್ಕಪ್ಪ ರಾಜೇಶ್ ರೋಷನ್ ಉದ್ಯಮದಲ್ಲಿ ಅಪ್ರತಿಮ ಹೆಸರುಗಳಾಗಿದ್ದಾರೆ.
ಈಗ ರೋಷನ್ ವಂಶದ ಮತ್ತೊಬ್ಬ ಸದಸ್ಯೆ, ರಾಜೇಶ್ ರೋಷನ್ ಪುತ್ರಿ ಪಶ್ಮಿನಾ ರೋಷನ್ 2003 ರಲ್ಲಿ ಬಿಡುಗಡೆಯಾಗಿದ್ದ ಕಾಲೇಜು ಪ್ರೀತಿ-ಪ್ರೇಮ-ಪ್ರಣಯದ ಕುರಿತಾದ ಯಶಸ್ವಿ ಚಿತ್ರ ʼಇಷ್ಕ್ ವಿಷ್ಕ್‌ʼನ ಮುಂದಿನ ಭಾಗದೊಂದಿಗೆ ಬಾಲಿವುಡ್‌ ಗೆ ಪಾದಾರ್ಪಣೆ ಮಾಡಲಿದ್ದಾರೆ. ಮೂಲ ಚಿತ್ರವು ಶಾಹಿದ್ ಕಪೂರ್ ಮತ್ತು ಅಮೃತ ರಾವ್ ರಂತಹ ಖ್ಯಾತ ನಟರನ್ನು ಪರಿಚಯಿಸಿತ್ತು. ಇದೀಗ ಅವರು ಚಿತ್ರರಂಗದಲ್ಲಿ ದೊಡ್ಡ ಹೆಸರುಗಳಾಗಿದ್ದಾರೆ.

ಪಶ್ಮಿನಾ ರೋಷನ್ ಅವರು ಇನ್ಸ್ಟಾಗ್ರಾಮ್‌ ನಲ್ಲಿ ʼಇಷ್ಕ್‌ ವಿಷ್ಕ್‌ ರೀಬೌಂಡ್‌ʼ ಚಿತ್ರದ ಪೋಸ್ಟರ್‌ ಸಂತೋಷದ ಸುದ್ದಿಯನ್ನು ಹಂಚಿಕೊಂಡಿದ್ದಾರೆ. 2003 ರಲ್ಲಿ ನಿಜವಾದ ಪ್ರೀತಿ ನಿಮ್ಮನ್ನು ವಿಸ್ಮಿತಗೊಳಿಸಿತ್ತು. ಆ ನೈಜಪ್ರೀತಿಯ ಕಥೆಯನ್ನು ಮತ್ತೊಮ್ಮೆ ಕಣ್ತುಂಬಿಕೊಳ್ಳಲು ಸಿದ್ಧರಾಗಿ ಎಂಬ ಅಡಿಟಿಪ್ಪಣಿಯನ್ನು ಬರೆದುಕೊಂಡಿದ್ದಾರೆ.
ಪರದೆಯ ಮೇಲಿನ ನನ್ನ ಮೊದಲ ಅನುಭವ ಹಂಚಿಕೊಳ್ಳಲು ಉತ್ಸುಕನಾಗಿದ್ದೇನೆ, ಉದ್ವೇಗಗೊಂಡಿದ್ದೇನೆ. ಪ್ರೀತಿಗೆ ಅಪ್‌ಗ್ರೇಡ್ ಅಗತ್ಯವಿದೆ. ಇಷ್ಕ್‌ ವಿಷ್ಕ್‌ ರೀಬೌಂಡ್‌ ಚಿತ್ರವು ಅಂತಹದ್ದೊಂದು ಪ್ರೀತಿಯ ಅಪ್‌ ಗ್ರೇಡ್‌ ಕಥಾನಕದೊಂದಿಗೆ ಮುಂದುವರೆಯಲಿದೆ ಎಂದು ಬರೆದುಕೊಂಡಿದ್ದಾರೆ.
ನಟ ಹೃತಿಕ್ ಸಾಮಾಜಿಕ ಮಾಧ್ಯಮಗಳಲ್ಲಿ ಚಿತ್ರದ ಪೋಸ್ಟರ್ ಹಂಚಿಕೊಂಡು ಸಹೋದರಿಗೆ ವಿಶ್ ಮಾಡಿದ್ದಾರೆ. ʼಇಷ್ಕ್ ವಿಷ್ಕ್ ರಿಬೌಂಡ್ ಚಿತ್ರ ತಂಡಕ್ಕೆ ನನ್ನ ಶುಭಾಶಯಗಳು. ಪಶ್ಮಿನಾ ಒಂದೊಳ್ಳೆ ತಂಡದ ಜೊತೆ ಕೆಲಸ ಮಾಡುತ್ತಿರುವೆ. ಜೀವನದ ಹಾದಿಯಲ್ಲಿ ಬಹುದೊಡ್ಡ ಅವಕಾಶಕೊಂದು ನಿನಗೆ ದೊರೆತಿದೆ. ನಿನ್ನ ಸಿನಿ ಜರ್ನಿ ಅದ್ಭುತವಾಗಿರಲಿದೆ ಎಂಬ ವಿಶ್ವಾಸವಿದೆ. ನಿನ್ನ ಬಗ್ಗೆ ಹೆಮ್ಮೆಯಿದೆ’ ಎಂದು ಹೃತಿಕ್ ಬರೆದುಕೊಂಡಿದ್ದಾರೆ. ಚಿತ್ರದಲ್ಲಿ ರೋಹಿತ್ ಸರಾಫ್, ಜಿಬ್ರಾನ್ ಖಾನ್ ಮತ್ತು ನೈಲಾ ಗ್ರೆವಾಲ್ ಕಾಣಿಸಿಕೊಳ್ಳಲಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!