ʼಕಾಂತಾರ ಅದ್ಭುತʼ.. ಕನ್ನಡ ಚಿತ್ರವನ್ನು ಹಾಡಿ ಹೊಗಳಿದ ಬಾಲಿವುಡ್‌ ನಟ ಹೃತಿಕ್ ರೋಷನ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಕೇವಲ 16 ಕೋಟಿ ಬಜೆಟ್‌ ನಲ್ಲಿ ನಿರ್ಮಾಣವಾಗಿ 450 ಕೋಟಿಗೂ ಹೆಚ್ಚು ಗಳಿಕೆ ಮಾಡಿರುವ ಕನ್ನಡದ ಹಿಟ್ ಚಿತ್ರ ಕಾಂತಾರ ಚಿತ್ರಜಗತ್ತಿನಲ್ಲಿ ಹೊಸ ಸಂಚಲನವನ್ನೇ ಸೃಷ್ಟಿಸಿದೆ. ಚಿತ್ರ ಎಲ್ಲಾ ಸಿನಿರಂಗದ ದಿಗ್ಗಜರಿಂದಲೂ ಮೆಚ್ಚುಗೆ ಗಳಿಸಿದೆ. ಅದರಲ್ಲೂ ಬಾಲಿವುಡ್ ಸೆಲೆಬ್ರಿಟಿಗಳು ಚಿತ್ರದ ಕಂಟೆಂಟ್‌ ಹಾಗೂ ಯಶಸ್ಸನ್ನು ನೋಡಿ ಬೆರಗಾಗಿದ್ದಾರೆ. ಇದೀಗ ಕಾಂತಾರವನ್ನು ಹೊಗಳಿದ ದೊಡ್ಡ ನಟರ ಸಾಲಿನಲ್ಲಿ ಹೃತಿಕ್ ರೋಷನ್ ಸೇರಿಕೊಂಡಿದ್ದಾರೆ. ಚಿತ್ರದ ಬಗ್ಗೆ ಅಪಾರ ಮೆಚ್ಚುಗೆಯನ್ನು ವ್ಯಕ್ತಪಡಿಸಿರು ಹೃತಿಕ್‌, ಚಿತ್ರದ ನಿರ್ದೇಶಕ ಮತ್ತು ನಾಯಕ ನಟ ರಿಷಬ್ ಶೆಟ್ಟಿಯನ್ನು ಮನಸಾರೆ ಹೊಗಳಿದ್ದಾರೆ. ಅನೇಕ ಅಭಿಮಾನಿಗಳು ಹೃತಿಕ್ ಅವರ ಟ್ವೀಟ್‌ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಚಿತ್ರದ ಹಿಂದಿ ಅವರತಣಿಕೆ ನೋಡಿ ಭಾನುವಾರ ರಾತ್ರಿ ಹೃತಿಕ್ ಟ್ವೀಟ್ ಮಾಡಿದ್ದಾರೆ, “ಕಾಂತಾರ ಚಿತ್ರ ನೋಡಿ ತುಂಬಾ ಕಲಿತಿದ್ದೇನೆ. ರಿಷಭ್‌ ಶೆಟ್ಟಿ ಅವರ ಪಾತ್ರದಲ್ಲಿನ ಪರಕಾಯ ಪ್ರವೇಶ ಚಿತ್ರವನ್ನು ಅಸಾಮಾನ್ಯವಾಗಿಸಿದೆ. ಉನ್ನತ ದರ್ಜೆಯ ಕಥೆ, ನಿರ್ದೇಶನ ಮತ್ತು ನಟನೆ ಅದ್ಭುತವಾಗಿದೆ. ಚಿತ್ರದ ಕ್ಲೈಮ್ಯಾಕ್ಸ್ ನನನ್ನು ರೋಮಾಂಚಿತಗೊಳಿಸಿತು. ಫೈಟ್ ಸೀಕ್ವೆನ್ಸ್‌, ಧ್ವನಿ, ಛಾಯಾಗ್ರಹಣ ಮತ್ತು ಅತ್ಯತ್ತಮವಾಗಿದೆ. ಚಿತ್ರತಂಡಕ್ಕೆ ನನ್ನ ಶುಭ ಹಾರೈಕೆಗಳು” ಎಂದು ಹೃತಿಕ್‌ ಬರೆದುಕೊಂಡಿದ್ದಾರೆ.
ಹೃತಿಕ್‌ ಟ್ವಿಟ್‌ ಗೆ ಅಭಿಮಾನಿ ವಲಯದಿಂದ ಮೆಚ್ಚುಗೆ ವ್ಯಕ್ತವಾಗಿದೆ.
ಚಿತ್ರದ ಅಭಿಮಾನಿಯೊಬ್ಬರು, “ಬಾಲಿವುಡ್ ನಿಮ್ಮ ಪ್ರತಿಭೆಗೆ ನ್ಯಾಯ ಒದಗಿಸುತ್ತಿಲ್ಲ, ದಕ್ಷಿಣ ಭಾರತದ ಚಿತ್ರರಂಗಕ್ಕೆ ಬನ್ನಿ, ಇಲ್ಲಿ ನಿರ್ದೇಶಕರು ನಿಮ್ಮೊಂದಿಗೆ ಅದ್ಭುತಗಳನ್ನು ಮಾಡುತ್ತಾರೆ” ಎಂದು ಟ್ವೀಟ್ ಮಾಡಿದ್ದಾರೆ.
ಕಾಂತಾರ ಪ್ರಭಾಸ್ ಮತ್ತು ರಜನಿಕಾಂತ್‌ ರಿಂದ ಹಿಡಿದು ಕಂಗನಾ ರಣಾವತ್ ಮತ್ತು ವರುಣ್ ಧವನ್‌ವರೆಗಿನ ಖ್ಯಾತ ನಟರು ನಟರು ಮತ್ತು ಚಲನಚಿತ್ರ ವ್ಯಕ್ತಿಗಳಿಂದ ಪ್ರಶಂಸೆಯನ್ನು ಗಳಿಸಿದೆ. ರಿಷಬ್ ಶೆಟ್ಟಿ ಅಧಿಕೃತವಾಗಿ ಘೋಷಿಸದಿದ್ದರೂ ಅದರ ಮುಂದುವರಿದ ಭಾಗದ ಕೆಲಸ ಚಾಲ್ತಿಯಲ್ಲಿದೆ ಎಂಬ ವರದಿಗಳಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!