BABY CARE | ಮಕ್ಕಳ ಕೈಗೆ ಈ ವಸ್ತುಗಳನ್ನು ಆಟಿಕೆಗಳಾಗಿ ನೀಡಬೇಡಿ, ಜಾಗ್ರತೆ!

ಮಕ್ಕಳು ಐದು ನಿಮಿಷ ಬ್ರೇಕ್ ಕೊಟ್ರೆ ಸಾಕು ನಾವು ಮೊಬೈಲ್ ನೋಡಬಹುದು, ಊಟ ಮಾಡಬಹುದು, ಮನೆ ಕೆಲಸ ಮಾಡಬಹುದು ಹೀಗೆ ನೂರಾರು ಈ ಕಾರಣಕ್ಕಾಗಿ ಸಿಕ್ಕ ವಸ್ತುಗಳನ್ನು ಮಕ್ಕಳ ಕೈಗೆ ಕೊಡುತ್ತೇವೆ. ಆದರೆ ಎಲ್ಲ ವಸ್ತುಗಳೂ ಮಕ್ಕಳಿಗೆ ಆಟಿಕೆಯಂತೆ ನೀಡುವಂತಿಲ್ಲ.

ಎಲ್ಲೋ ಸಾವಿರದಲ್ಲಿ ಒಂದು ಮಗುವಿಗೆ ತೊಂದರೆ ಆಗಬಹುದು ನಮ್ಮ ಮಗುವಿಗೆ ಏನಾಗೋದಿಲ್ಲ ಎನ್ನುವ ಭಾವನೆ ನಿಮ್ಮದಾಗಿದ್ಯಾ? ಹಾಗಾದ್ರೆ ಕೇಳಿ ಆ ಸಾವಿರದಲ್ಲಿ ಒಂದು ಮಗು ನಿಮ್ಮದೇ ಯಾಕೆ ಆಗಬಾರದು?
ಆದಷ್ಟು ಜಾಗರೂಕರಾಗಿ, ಕೆಟ್ಟದ್ದು ಎಂದು ತಿಳಿದ ಮೇಲೂ ಮಕ್ಕಳ ಕೈಗೆ ಈ ವಸ್ತುಗಳನ್ನು ನೀಡದಿರಿ..

ಕೀ ಬಂಚ್
ಮಕ್ಕಳಿಗೆ ಶೈನಿಯಾಗಿರುವ ಈ ಕೀ ಬಂಚ್‌ಗಳು, ಕೀಗಳನ್ನು ಕಂಡರೆ ಖುಷಿ, ಕೀ ಕೊಟ್ಟ ತಕ್ಷಣ ಅಳು ನಿಂತೋಯ್ತು ಎಂದು ಕೀ ಅವರ ಜೊತೆಯೇ ಬಿಟ್ಟು ಬಿಡುತ್ತೀರಿ. ಆದರೆ ಬ್ರಾಸ್‌ನಲ್ಲಿ ಕೀ ತಯಾರಿಸಲಾಗುತ್ತದೆ. ಇದರಲ್ಲಿ ಲೆಡ್ ಅಂಶವೂ ಇರುತ್ತದೆ. ಹಾಗಾಗಿ ಕೀ ಮಕ್ಕಳಿಂದ ದೂರ ಇಡಿ.

Baby holding key Stock Photos - Page 1 : Masterfileಟಿವಿ ರಿಮೋಟ್‌ಗಳು
ದೊಡ್ಡವರು ಟಿವಿ ರಿಮೋಟ್‌ಗಾಗಿ ಕಿತ್ತಾಡೋದನ್ನು ನೋಡುವ ಮಕ್ಕಳು ತಮಗೂ ರಿಮೋಟ್ ಬೇಕು ಎಂದು ಆಸೆ ಪಡ್ತಾರೆ. ಆದರೆ ರಿಮೋಟ್‌ನಲ್ಲಿರುವ ಸಣ್ಣ ಸಣ್ಣ ವಸ್ತುಗಳನ್ನು ಗಮನಿಸಿ, ಮಕ್ಕಳು ಕಿತ್ತು ಯಾವುದನ್ನಾದರೂ ಬಾಯಿಗೆ ಹಾಕಬಹುದು, ಬ್ಯಾಟರಿ ನುಂಗಬಹುದು. ಎಚ್ಚರ

Infant Sitting In Mother Lap And Chewing Remote Control Closeup Front View  Favourite Baby Thing Stock Photo - Download Image Now - iStockಮೊಬೈಲ್, ಐಪ್ಯಾಡ್, ಟ್ಯಾಬ್ಲೆಟ್ಸ್
18 ತಿಂಗಳಿಗೂ ಮುನ್ನ ಮಕ್ಕಳ ಕೈಗೆ ಮೊಬೈಲ್ ನೀಡಬೇಡಿ. ಎರಡು ವರ್ಷ ಮಕ್ಕಳು ಮೊಬೈಲ್ ನೋಡದೇ ಬೆಳೆದರೆ ಅವರು ಬುದ್ಧಿವಂತರಾಗುತ್ತದೆ. ಮೊಬೈಲ್‌ನ ಸಾಕಷ್ಟು ಟೆಕ್ನಾಲಜಿಗಳು ಅವರಿಗೆ ಸಹಾಯಕವಾಗಬಹದು. ಆದರೆ ಟೆಕ್ ಜೊತೆ ಸಮಸ್ಯೆ ಬರುತ್ತದೆ. ನಿಮ್ಮ ಮೊಬೈಲ್ ಎಲ್ಲೆಲ್ಲಿ ಓಡಾಡಿದೆ ನೆನಪು ಮಾಡಿಕೊಳ್ಳಿ. ಟಾಯ್ಲೆಟ್ ರೂಂಗೆ ಕೂಡ ಮೊಬೈಲ್ ತೆಗೆದುಕೊಂಡು ಹೋಗುತ್ತೀರಿ. ಹೀಗಿರುವಾಗ ಮಕ್ಕಳು ಫೋನ್ ಬಾಯಿಗೆ ಹಾಕೋದು ಎಷ್ಟು ಸರಿ?

Is it safe to let my baby play with my mobile phone, tablet or laptop? -  BabyCenter Indiaನಾಣ್ಯಗಳು
ನಾಣ್ಯಗಳಿಂದ ಶಬ್ದ ಮಾಡೋದು, ನೆಲದ ಮೇಲೆ ಉರುಳಿಬಿಡೋದು ನೋಡೋದಕ್ಕೆ ಮಕ್ಕಳಿಗೆ ಭಾರೀ ಖುಷಿ. ಆದರೆ ನೀವು ಇಲ್ಲದೆ ಮಕ್ಕಳು ಅದನ್ನು ಆಟಿಕೆ ಎಂದು ಪರಿಗಣಿಸಿ ನುಂಗಿದರೆ? ಉಸಿರುಕಟ್ಟೋದು, ಚೋಕಿಂಗ್ ಇನ್ನಷ್ಟು ಪ್ರಾಣಕ್ಕೆ ಅಪಾಯವಾದ ತೊಂದರೆ ಅನುಭವಿಸಬೇಕಾದೀತು.

What To Do if a Child Swallows an Object - Children's Healthಪತ್ರಿಕೆ
ಪ್ರಿಂಟ್ ಆಗಿರುವ ಯಾವುದೇ ಪತ್ರಿಕೆಯನ್ನು ಮಕ್ಕಳಿಗೆ ಆಡಲು ನೀಡಬೇಡಿ. ಪ್ರಿಂಟ್‌ಗಾಗಿ ಲೆಡ್ ಅಂಶ ಬಳಕೆ ಮಾಡಲಾಗುತ್ತದೆ. ಇದು ಜೀವಕ್ಕೆ ಹಾನಿಕಾರಕ. ನನ್ನ ಮಗು ಬರೀ ಪೇಪರ್ ಮುಟ್ಟುತ್ತದೆ ಬಾಯಿಗೆ ಹಾಕೋದಿಲ್ಲ ಎನ್ನಬೇಡಿ, ಮಕ್ಕಳು ಲೆಡ್ ಮುಟ್ಟಿದ ಕೈಯನ್ನು ಬಾಯಿಗೆ ಹಾಕಿದರೂ ಸಮಸ್ಯೆ ಒಂದೇ.

Newspaper Sensory Activity For Babiesಮಾರ್ಕರ್, ಪೆನ್, ಕ್ರಯಾನ್ಸ್
ಮಕ್ಕಳ ಕೈಗೆ ಇವನ್ನು ನೀಡುವ ಮುನ್ನ ಗಮನಿಸಿ, ಪೆನ್‌ನ ಕ್ಯಾಪ್‌ನ್ನು ಮಕ್ಕಳು ನುಂಗಿದರೆ? ಇನ್ನು ಸಿಕ್ಕಸಿಕ್ಕ ಕಡೆ ಗೀಚುವುದು ಕೂಡ ಅಷ್ಟು ಸುಂದರವಾದ ಕೆಲಸ ಅಲ್ಲ. ಟಾಡ್ಲರ್ ಆದ ನಂತರ ಬಣ್ಣಗಳನ್ನು ಹಾಕಲು ಹೇಳಿಕೊಡಿ. ಅದು ನೀವಿದ್ದಾಗ ಮಾತ್ರ

Toddler's Hilarious Reaction When Asked Who Drew on Baby Sibling's Head  Goes Viralಬೇಬಿ ವೈಪ್ಸ್
ಬೇಬಿ ವೈಪ್ಸ್‌ನ ಪ್ಲಾಸ್ಟಿಕ್ ಸೌಂಡ್ ಮಕ್ಕಳಿಗೆ ಆಕರ್ಷಣೆ, ಡೈಪರ್ ಚೇಂಜ್ ಮಾಡುವಾಗ ವೈಪ್ಸ್ ಕವರ್‌ಗೆ ಕೈಹಾಕಲು ಯತ್ನಿಸುತ್ತಾರೆ. ಆದರೆ ವೈಪ್ಸ್ ಬಾಯಿಗೆ ಹಾಕೋದು, ನುಂಗೋದು ಎಲ್ಲವೂ ಸಮಸ್ಯೆಯೇ. ಇದರಲ್ಲಿರುವ ಕೆಮಿಕಲ್ಸ್ ಮಗುವಿಗೆ ಹಾನಿ ಮಾಡುತ್ತವೆ.

THE SCIENCE BEHIND WET WIPES FOR INFANT SKIN - The Daily Guardian

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!