ಹೊಸದಿಗಂತ ಡಿಜಿಟಲ್ ಡೆಸ್ಕ್:
ಹೃತಿಕ್ ರೋಷನ್ ತಮ್ಮ ಸಿನಿಮಾಗಳಿಗಿಂತ ಡೇಟಿಂಗ್ ವಿಷಯದಲ್ಲೇ ಹೆಚ್ಚು ಫೇಮಸ್ ಆಗ್ತಿದ್ದಾರೆ.
ತಮಗಿಂತ 12 ವರ್ಷ ಚಿಕ್ಕವರಾದ ಸಭಾ ಆಝಾದ್ ಅವರನ್ನು ಹೃತಿಕ್ ಡೇಟ್ ಮಾಡುತ್ತಿದ್ದಾರೆ. ಯಾವುದೇ ಫಂಕ್ಷನ್ ಇದ್ದರೂ ಸಭಾ ಜೊತೆಯೇ ಹೃತಿಕ್ ಬರ‍್ತಾರೆ. ಅವರಿಬ್ಬರ ಡೇಟಿಂಗ್ ವಿಷಯ ಈಗ ಸೀಕ್ರೆಟ್ ಆಗಿ ಉಳಿದಿಲ್ಲ.
ಈ ಬಗ್ಗೆ ಹೃತಿಕ್ ರೋಷನ್ ತಂದೆ ರಾಕೇಶ್ ರೋಷನ್ ಮಾತನಾಡಿದ್ದು, ನವೆಂಬರ್‌ನಲ್ಲಿ ಮದುವೆ ನಿಜವಾ ಎನ್ನೋ ಪ್ರಶ್ನೆಗೆ ಉತ್ತರ ನೀಡಿದ್ದಾರೆ.
ಮನೆಯಲ್ಲಿ ಮದುವೆ ಸಂಭ್ರಮ ಇನ್ನೂ ಇಲ್ಲ, ಇವರಿಬ್ಬರು ಡೇಟಿಂಗ್‌ನಲ್ಲಿರೋ ವಿಷಯ ಗೊತ್ತಿದೆ. ಅವರಿಬ್ಬರು ಪರಸ್ಪರ ಅರ್ಥ ಮಾಡಿಕೊಳ್ಳಲಿ ಮುಂದಕ್ಕೆ ನೋಡೋಣ ಎಂದಿದ್ದಾರೆ.