’ಸರ್ಕಿಟ್’ಗೆ ಶಾಕ್ ನೀಡಿದ ಸೆಬಿ: ವಾರ್ಸಿ, ಗೊರೆಟ್ಟಿಗಿಲ್ಲ ಷೇರು ಮಾರ್ಕೆಟ್ ಎಂಟ್ರಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮುನ್ನಾ ಭಾಯ್ ಚಿತ್ರದ ಸರ್ಕೀಟ್‌ಗೆ ಸೆಬಿ ಭರ್ಜರಿ ಶಾಕ್ ನೀಡಿದೆ.
ಕಂಪನಿಯೊಂದರ ಷೇರುಗಳನ್ನು ಲಾಭಕ್ಕಾಗಿ ಬಳಸಿಕೊಳ್ಳಲು ನಟ ಅರ್ಷದ್ ವಾರ್ಸಿ ಮತ್ತು ಅವರ ಪತ್ನಿ ಮಾರಿಯಾ ಗೊರೆಟ್ಟಿ ಯೂಟ್ಯೂಬ್‌ನಲ್ಲಿ ತಪ್ಪುದಾರಿಗೆಳೆಯುವ ವೀಡಿಯೊಗಳನ್ನು ಅಪ್‌ಲೋಡ್ ಮಾಡಿದ್ದಾರೆ ಎಂಬ ಕಾರಣಕ್ಕೆ ಷೇರು ಮಾರುಕಟ್ಟೆಯಲ್ಲಿನ ಅವರ ವ್ಯವಹಾರಗಳಿಗೆ ಮುಂದಿನ ಒಂದು ವರ್ಷದ ತನಕ ಬ್ರೇಕ್ ಹಾಕಿದೆ.

ಸಾಧನಾ ಬ್ರಾಡ್‌ಕಾಸ್ಟ್ ಲಿಮಿಟೆಡ್, ಶಾರ್ಪ್‌ಲೈನ್ ಬ್ರಾಡ್‌ಕಾಸ್ಟ್ ಲಿಮಿಟೆಡ್ ಕಂಪನಿಯ ಷೇರುಗಳನ್ನು ಖರೀದಿಸಲು ಹೂಡಿಕೆದಾರರನ್ನು ಶಿಫಾರಸು ಮಾಡುವುದಕ್ಕೆ ಸಂಬಂಧಿಸಿ ಯೂಟ್ಯೂಬ್ ಚಾನೆಲ್‌ಗಳಲ್ಲಿ ದಾರಿತಪ್ಪಿಸುವ ವೀಡಿಯೊಗಳನ್ನು ಅಪ್‌ಲೋಡ್ ಮಾಡಲಾಗಿದೆ ಎಂಬುದು ಆರೋಪವಾಗಿದೆ.
ಯೂಟ್ಯೂಬ್‌ನಲ್ಲಿ ಷೇರುದಾರರನ್ನು ತಪ್ಪುದಾರಿಗೆಳೆಯುವ ವೀಡಿಯೊ ಅಪ್‌ಲೋಡ್ ಮಾಡಿದ ನಂತರ ಘಟಕಗಳು ಮಾಡಿದ ಅಕ್ರಮ ಲಾಭವನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದು ನಿಯಂತ್ರಕ ತಿಳಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!