ಹೊಸದಿಗಂತ ಡಿಜಿಟಲ್ ಡೆಸ್ಕ್:
ಹೆಚ್‌ಎಸ್‌ಆರ್ ಲೇಔಟ್ ಯುವತಿ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು, ಈಗ ಸಂತ್ರಸ್ತ ಯುವತಿ ವಿರುದ್ಧವೇ ಎಫ್‌ಐಆರ್ ದಾಖಲಾಗಿದೆ.
ಆಟೋ ಡ್ರೈವರ್ ನೀಡಿದ ದೂರಿನ ಮೇಲೆ ಅಜಾಗರೂಕ ಚಾಲನೆ ಆರೋಪದ ಅಡಿ ಆಡುಗೋಡಿ ಸಂಚಾರಿ ಠಾಣೆಯಲ್ಲಿ ಯುವತಿ ವಿರುದ್ಧ ಪ್ರಕರಣ ದಾಖಲಾಗಿದೆʼಘಟನಾ ದಿನಕ್ಕೂ ಮುನ್ನ ಆ.17 ರಾತ್ರಿ ಸ್ನೇಹಿತರ ಜೊತೆ ಯುವತಿ ಪಾರ್ಟಿ ಮಾಡಿ ಕಂಠಪೂರ್ತಿ ಕುಡಿದಿದ್ದಳು. ಪಾರ್ಟಿ ಮುಗಿಸಿ ಗೆಳೆಯನ ಜೊತೆ ಕಾರಿನಲ್ಲಿ ಪ್ರಯಾಣ ಮಾಡುತ್ತಿದ್ದಾಗ ತಾನೇ ಕಾರು ಚಾಲನೆ ಮಾಡಿದ್ದಾಳೆ.
ಟಾನಿಕ್ ಬಳಿಯ ಮಂಗಳ ಜಂಕ್ಷನ್ ಬಳಿ 2 ಆಟೋ, 1 ಬೈಕ್‌ಗೆ ಡಿಕ್ಕಿ ಹೊಡೆದಿದ್ದಾಳೆ. ಜಖಂಗೊಳಿಸಿದ ಬಳಿಕ ಕಾರನ್ನು ನಿಲ್ಲಿಸದೇ ಹೋಗಿದ್ದಾಳೆ. ನಂತರ ರಿಕ್ಷಾ ಚಾಲಕರು ಕಾರನ್ನು ಫಾಲೋ ಮಾಡಿ ನಿಲ್ಲಿಸಿ ಪ್ರಶ್ನಿಸಿದ್ದಾರೆ. ಈ ಸಂದರ್ಭದಲ್ಲಿ ಯುವತಿ ರಿಕ್ಷಾ ಚಾಲಕರ ಜೊತೆ ಜಗಳ ಮಾಡಿದ್ದಾಳೆ.
ಆಗ ಸ್ಥಳಕ್ಕೆ ಆಡುಗೋಡಿ ಠಾಣೆಯ ಹೊಯ್ಸಳ ವಾಹನ ಬಂದಿದೆ. ಪೊಲೀಸರು ಬರುತ್ತಿದ್ದಂತೆ ಅಲ್ಲಿಂದ ಯುವತಿಯನ್ನ ಸ್ನೇಹಿತ ಕಳುಹಿಸಿದ್ದ. ಮುಂದೆ ಹೋದ ಯುವತಿ ಬೈಕ್ ನಲ್ಲಿ ಡ್ರಾಪ್ ತೆಗೆದುಕೊಂಡಿದ್ದಳು. ಅಪರಿಚಿತನ ಗಾಡಿ ಹತ್ತಿದ್ದ ಯುವತಿ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ.