ಉದಯಪುರ ಹಿಂದೂ ಹತ್ಯೆ ಖಂಡಿಸಿ ಹುಬ್ಬಳ್ಳಿಯಲ್ಲಿ ಪ್ರತಿಭಟನೆ

ಹೊಸದಿಗಂತ ವರದಿ ಹುಬ್ಬಳ್ಳಿ:

ರಾಜಸ್ಥಾನದ ಉದಯಪುರದಲ್ಲಿ ಹಿಂದೂ ಹತ್ಯೆ ಪ್ರಕರಣ ಖಂಡಿಸಿ ನಗರದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಬಿಜೆಪಿ ಜಿಲ್ಲಾ ಅಲ್ಪಸಂಖ್ಯಾತ ಘಟಕದಿಂದ ಗುರುವಾರ ಪ್ರತಿಭಟನೆ ನಡೆಸಿದರು. ಬಿಜೆಪಿ ರಾಷ್ಟ್ರೀಯ ಕೋಶಾಧ್ಯಕ್ಷ ಎನ್.ಎಫ್ ಮೋಹಸಿನ್ ಮಾತನಾಡಿ, ಭಾರತ ಎಲ್ಲ ಧರ್ಮದವರು ಸೇರಿ ಬಾಳುವ ದೇಶವಾಗಿದೆ. ಉದಯಪುರದ ಹತ್ಯೆ ನಿಜಕ್ಕೂ ಖಂಡನೀಯ. ರಾಜಸ್ಥಾನ ಕಾಂಗ್ರೆಸ್ ಸರ್ಕಾರ ದುರಾಡಳಿತದಿಂದ ಇಂತಹ ಕೃತ್ಯಗಳು ನಡೆಯುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಅಲ್ಪಸಂಖ್ಯಾತರ ಜಿಲ್ಲಾಧ್ಯಕ್ಷ ನಾಸಿರ ತಂಬುರಿ ಹಿಂದೂ‌,ಮುಸ್ಲಿಂ, ಕ್ರೈಸ್ತ ಜೈನ್ ಎಲ್ಲರೂ ಸೇರಿ ಇದ್ದರೆ ಸಮಾಜ ಸುಂದರವಾಗುತ್ತದೆ. ಈ ಕೃತ್ಯವೆಸಗುವ ಮೂಲಕ ಸಮಾಜದ ಸ್ವಾಸ್ಥ್ಯ ಹಾಳಮಾಡುತ್ತಿದ್ದಾರೆ.

ಬಿಜೆಪಿ ಮುಖಂಡ ಶೇಖ ಚಳ್ಳಮರದ, ಉದಯಪುರದಲ್ಲಿ ಆಗಿರುವ ಘಟನೆ ನಾವು ಖಂಡಿಸುತ್ತೇನೆ. ನಾವು ಒಂದೇ ತಾಯಿ ಮಕ್ಕಳಾಗಿದ್ದೆವೆ. ಎಲ್ಲಾ ಧರ್ಮದವರನ್ನು ಪ್ರೀತಿಸುವ ದೇಶವಾಗಿದೆ. ಆರೋಪಿಗಳನ್ನು ಜನರ ಮುಂದೆ ನೇಣಿಗೆ ಹಾಕಬೇಕು. ಈ ಕಠಿಣ ಶಿಕ್ಷೆ ನೋಡಿ ಮುಂದೆ ಯಾರು ಇಂತಹ ಕೆಲಸ ಮಾಡುವುದಿಲ್ಲ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!