ಹುಬ್ಬಳ್ಳಿ: ಭಕ್ತರ ಉದ್ಘೋಷಗಳ ನಡುವೆ ವಿಜೃಂಭಣೆಯಿಂದ ಸಾಗಿದ ಗಣೇಶೋತ್ಸವ ಮೆರವಣಿಗೆ

ಹೊಸದಿಗಂತ ವರದಿ, ಹುಬ್ಬಳ್ಳಿ:
ನಗರದ ರಾಣಿ ಚನ್ನಮ್ಮ ಮೈದಾನ ಪ್ರತಿಷ್ಠಾಪಿಸಲಾದ ಗಣೇಶ ಮೂರ್ತಿಯ ವಿಸರ್ಜಿಸಜನಾ ಮೆರವಣಿಗೆ ಮಧ್ಯಾಹ್ನ 2 ಗಂಟೆಗೆ ವಿಜೃಂಭಣೆಯಿಂದ ಆರಂಭಗೊಂಡಿದೆ.
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಅಖಿಲ ಭಾರತೀಯ ವ್ಯವಸ್ಥಾ ಪ್ರಮುಖ ಮಂಗೇಶ ಭೇಂಡೆ, ಪ್ರಾಂತ ಕಾರ್ಯಕಾರಿಣಿ ಸದಸ್ಯರು ಶ್ರೀಧರ ನಾಡಗೇರ ವಿಶೇಷ ಪೂಜೆ ಸಲ್ಲಿಸಿ ವಿಸರ್ಜನಾ ಮೆರವಣಿಗೆಗೆ ಚಾಲನೆ ನೀಡಿದರು. ಶ್ರೀರಾಮ ಸೇನೆ ಸಂಸ್ಥಾಪಕ‌ ಅಧ್ಯಕ್ಷ ಪ್ರಮೋದ ಮುತಾಲಿಕ್, ಬಿಜೆಪಿ ಮುಖಂಡರು ಹಾಗೂ ಹಿಂದೂ ಪರ ಸಂಘಟನೆಗಳು ಪೂಜೆ ಸಲ್ಲಿಸಿದರು. ನೂರಾರು ಭಕ್ತರು ಜೈ ಗಜಾನನ ಮಹರಾಜ ಕೀ, ಜೈ ಶ್ರೀರಾಮ, ಭಾರತ ಮಾತಾ ಕೀ ಜೈ ಎಂಬ ಘೋಷಣೆಗಳು ಮುಗಿಲು ಮುಟ್ಟಿದವು. ಭಾರತಾಂಬೆ ಭಾವಚಿತ್ರ ನೋಡುಗರ ಗಮನ ಸೆಳೆಯಿತು. ಎಲ್ಲೆಲ್ಲೂ ಕೇಸರಿ ಧ್ಜಜಗಳು ಮೆರವಣಿಗೆಯಲ್ಲಿ ರಾರಾಜಿಸಿದವು.
ವಾದ್ಯ ಮೇಳ, ಡೊಳ್ಳು ಕುಣಿತ, ಗೊಂಬೆ ಕುಣಿತ, ಝಾಂಜ ಮೇಳ ಸೇರಿದಂತೆ ಕಲಾವಿರದ ತಂಡ ಮೆರವಣಿಗಗೆ ಮೆರಗು ತಂದರು. ವಿಸರ್ಜನೆಯಲ್ಲಿ ಭಾಗವಹಿಸಿದ ಭಕ್ತರಿಗೆ ಪ್ರಸಾದ ವಿತರಿಸಿದರು.
ಈದ್ಗಾ ಮೈದಾನದಿಂದ ಚನ್ನಮ್ಮ ವೃತ್ತ ಮಾರ್ಗವಾಗಿ ಮೆರವಣಿಗೆ ಸಾಗಿತು. ವಿಶ್ವ ಹಿಂದೂ ಪರಿಷತ್ ಗೋವಿಂದರಾವ್, ರಮೇಶ ಕಂದಂ, ಸಂಜು ಬಡಸ್ಕರ್, ವೀರಣ್ಣ ಸವಡಿ, ಜಯತೀರ್ಥ ಕಟ್ಟಿ, ಹನುಮಂತ ಸಾ ನಿರಂಜನ, ಸಂತೋಷ ಚವ್ಹಾಣ, ಶಿವನಂದ ಸತ್ತಿಗೇರಿ, ಶಿವು ಮೆಣಸಿನಕಾಯಿ ಇದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!