ಬಾಯಿಂದ ಬೆಂಕಿ ಉಗುಳಲು ಹೋಗಿ ಅಚಾತುರ್ಯ, ಮೈಯೆಲ್ಲಾ ವ್ಯಾಪಿಸಿದ ಜ್ವಾಲೆ: ವೈರಲ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಕೆಲವೊಮ್ಮೆ ಮಾಡುವ ಸಾಹಸ ದೃಶ್ಯಗಳು ಅಪಾಯಕಾರಿಯಾಗಿ ಪರಿಣಮಿಸುತ್ತವೆ. ಇಂತಹದೊಂದು ಘಟನೆ ಸೂರತ್ ನಲ್ಲಿ ನಡೆದಿದೆ. ಸಾಹಸ ಮಾಡಲು ಹೋಗಿ ಅಚಾತುರ್ಯ ಉಂಟಾದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಸಖತ್‌ ವೈರಲ್‌ ಆಗುತ್ತಿದೆ.

ಗಣೇಶ ಕೂರಿಸಿದ್ದ ಸ್ಥಳದಲ್ಲಿ ಕೆಲ ಮನರಂಜನಾ ಕಾರ್ಯಕ್ರಮ ಏರ್ಪಡಿಸಿದ್ದು, ಅಲ್ಲಿದ್ದ ಯುವಕನೊಬ್ಬ ತನ್ನ ಬಾಯಿಗೆ ದ್ರವವನ್ನು ಸುರಿದು ಅದನ್ನು ಗಾಳಿಯಲ್ಲಿ ಊದಿ ತನ್ನ ಬಾಯಿಂದ ಬೆಂಕಿಯನ್ನು ಉಗುಳುತ್ತಾನೆ. ಬಾಯಿಂದ ಹೋದ ಬೆಂಕಿ ಕೂಡಲೇ ಹಿಮ್ಮುಖವಾಗಿ ಆತನ ಮೈಮೇಲೆ ಬಿದ್ದಿದೆ. ಕೆಲವೇ ಕ್ಷಣಗಳಲ್ಲಿ ಬೆಂಕಿ ಅವನ ಮೈಮೇಲೆಲ್ಲ ವ್ಯಾಪಿಸಿತು. ಕೂಡಲೇ ಎಚ್ಚರಗೊಂಡ ಆತ ತನ್ನ ಟೀ ಶರ್ಟ್ ಅನ್ನು ಬಿಚ್ಚಿ ಎಸೆದು ದೊಡ್ಡ ಅಪಘಾತದಿಂದ ಪಾರಾಗಿದ್ದಾನೆ. ಅಲ್ಲಿದ್ದವರೊಬ್ಬರು ಇದನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!