ನಾಲತವಾಡ ಪಟ್ಟಣದ ಬಾವಿಯಲ್ಲಿ ಬೃಹತ್ ಮೊಸಳೆ ಪತ್ತೆ: ಆತಂಕಗೊಂಡ ಜನರು

ಹೊಸದಿಗಂತ ವರದಿ, ವಿಜಯಪುರ

ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ನಾಲತವಾಡ ಪಟ್ಟಣದ ಚಿನಿವಾಲರ ಖಾಲಿ ಜಾಗದಲ್ಲಿನ ಬಾವಿಯಲ್ಲಿ ಬೃಹತ್ ಮೊಸಳೆ ಕಂಡು ಬಂದಿದ್ದು, ಸಾರ್ವಜನಿಕರಲ್ಲಿ ಆತಂಕ ಮೂಡಿಸುವಂತಾಗಿದೆ.

ಇಲ್ಲಿನ ಬಾವಿ ಒಂದರಲ್ಲಿ ಬೃಹತ್ ಆಕಾರದ ಮೊಸಳೆ ಹಲವಾರು ದಿನಗಳಿಂದ ವಾಸಿಸುತ್ತಿದೆ‌. ಈ ಬಗ್ಗೆ ಹಲವು ಬಾರಿ ಅರಣ್ಯ ಇಲಾಖೆಯವರಿಗೆ ಹೇಳಿದರು ಪ್ರಯೋಜನ ಆಗಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಾರ್ವಜನಿಕರಿಗೆ ಸಮಸ್ಯೆ ಆಗುವ ಮೊದಲು ಮೊಸಳೆ ಬೇರೆಡೆಗೆ ಸ್ಥಳಾಂತರ ಮಾಡಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!