July 27, 2026
Monday, July 27, 2026
spot_img

ಚಿನ್ನದ ಬೆಲೆಯಲ್ಲಿ ಭಾರಿ ಜಿಗಿತ: ಹೊಸ ದಾಖಲೆಯತ್ತ ಮುನ್ನುಗ್ಗಿದ ಹಳದಿ ಲೋಹ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಹಳದಿ ಲೋಹದ ಬೆಲೆಯಲ್ಲಿ ನಿರಂತರ ಏರಿಕೆ ಕಂಡುಬರುತ್ತಿದ್ದು, ವಾರಾಂತ್ಯದಲ್ಲಿ ಚಿನ್ನದ ಗ್ರಾಹಕರಿಗೆ ಭಾರೀ ಆಘಾತ ಎದುರಾಗಿದೆ. ಶುಕ್ರವಾರ ಪ್ರತಿ ಗ್ರಾಮ್‌ಗೆ 135 ರೂಪಾಯಿ ಹೆಚ್ಚಳ ಕಂಡಿದ್ದ ಬಂಗಾರದ ಬೆಲೆ, ವಾರದ ಕೊನೆಯಲ್ಲಿ ಬರೋಬ್ಬರಿ 210 ರೂಪಾಯಿಗಳಷ್ಟು ಜಿಗಿದಿದೆ. ಈ ಹಠಾತ್ ಏರಿಕೆಯಿಂದಾಗಿ ಆಭರಣ ಚಿನ್ನದ ಬೆಲೆ ಈಗ 13,000 ರೂಪಾಯಿಗಳ ಗಡಿಯನ್ನು ದಾಟಿದೆ. ಕೇವಲ ಭಾರತದಲ್ಲಿ ಮಾತ್ರವಲ್ಲದೆ, ಜಾಗತಿಕ ಮಾರುಕಟ್ಟೆಯಲ್ಲೂ ಚಿನ್ನದ ದರ ಗಣನೀಯವಾಗಿ ಹೆಚ್ಚಾಗಿದೆ.

ದೇಶದ ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನದ ದರ

ಸದ್ಯ ಭಾರತೀಯ ಮಾರುಕಟ್ಟೆಯಲ್ಲಿ 10 ಗ್ರಾಮ್ ತೂಕದ 22 ಕ್ಯಾರೆಟ್ ಆಭರಣ ಚಿನ್ನದ ಬೆಲೆ 1,31,950 ರೂಪಾಯಿ ತಲುಪಿದೆ. ಅದೇ ರೀತಿ, ಅತ್ಯಂತ ಶುದ್ಧವಾದ 24 ಕ್ಯಾರೆಟ್ (ಅಪರಂಜಿ) ಚಿನ್ನದ ಬೆಲೆ 10 ಗ್ರಾಮ್‌ಗೆ 1,43,950 ರೂಪಾಯಿ ಆಗಿದೆ. ಐಟಿ ನಗರಿ ಬೆಂಗಳೂರಿನಲ್ಲಿಯೂ ಸಹ 22 ಕ್ಯಾರೆಟ್ ಚಿನ್ನದ ದರ 10 ಗ್ರಾಮ್‌ಗೆ 1,31,950 ರೂಪಾಯಿ ದಾಖಲಾಗಿದೆ.

ಬೆಳ್ಳಿ ಬೆಲೆಯಲ್ಲಿ ಸ್ಥಿರತೆ: ತಮಿಳುನಾಡು, ಕೇರಳದಲ್ಲಿ ದರ ವ್ಯತ್ಯಾಸ

ಚಿನ್ನದ ಬೆಲೆ ಏರಿಕೆಯಾಗಿದ್ದರೂ, ಬೆಳ್ಳಿ ದರದಲ್ಲಿ ಯಾವುದೇ ಪ್ರಮುಖ ಬದಲಾವಣೆ ಕಂಡುಬಂದಿಲ್ಲ. ಪ್ರಸ್ತುತ ದೇಶದಲ್ಲಿ 100 ಗ್ರಾಮ್ ಬೆಳ್ಳಿಯ ಬೆಲೆ 24,000 ರೂಪಾಯಿಗಳಲ್ಲೇ ಮುಂದುವರಿದಿದೆ. ಬೆಂಗಳೂರಿನಲ್ಲೂ ಇದೇ ದರವಿದ್ದು, ನೆರೆಯ ತಮಿಳುನಾಡು ಮತ್ತು ಕೇರಳದ ಕೆಲವು ಭಾಗಗಳಲ್ಲಿ ಬೆಳ್ಳಿ ದರ 100 ಗ್ರಾಮ್‌ಗೆ 24,500 ರೂಪಾಯಿ ತಲುಪಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !