ಹೊಸ ವರ್ಷಕ್ಕೆ ಮುನ್ನಾದಿನ ಮಾತಾ ವೈಷ್ಣೋದೇವಿ ದೇಗುಲದಲ್ಲಿ ಭಾರೀ ನೂಕುನುಗ್ಗಲು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಜಮ್ಮುವಿನ ಮಾತಾ ವೈಷ್ಣೋ ದೇವಿ ದೇಗುಲವು ಶನಿವಾರದಂದು ಭಾರಿ ಭಕ್ತಾದಿಗಳ ನೂಕುನುಗ್ಗಲು ಉಂಟಾಗಿದೆ. ಹೊಸ ವರ್ಷದ ಮುನ್ನಾದಿನದಂದು ತೀವ್ರವಾದ ಚಳಿಯ ನಡುವೆಯೂ ಕಟ್ರಾದ ತ್ರಿಕೋಟಾ ಬೆಟ್ಟಗಳಲ್ಲಿ ಸರತಿ ಸಾಲುಗಳು ಕಂಡುಬಂದವು. ಮಕ್ಕಳು ಸೇರಿದಂತೆ ದೇಶದ ವಿವಿಧ ಭಾಗಗಳಿಂದ ಆಗಮಿಸಿದ್ದ ಭಕ್ತರು ಹೊಸ ವರ್ಷಕ್ಕೆ ಶುಭ ಹಾರೈಸುತ್ತಾ ಬೆಟ್ಟ ಹತ್ತಿ ಇಳಿಯುವಾಗ ‘ಜೈ ಮಾತಾ’ ಎಂದು ಘೋಷಣೆ ಕೂಗುತ್ತಿರುವುದು ಕಂಡು ಬಂತು.

ಕಳೆದ ವರ್ಷ ಜನವರಿ 1, 2022 ರಂದು ನಡೆದ ವೈಷ್ಣೋದೇವಿ ಕಾಲ್ತುಳಿತದಲ್ಲಿ 12 ಜನರು ಸಾವನ್ನಪ್ಪಿದರು ಮತ್ತು 16 ಜನರು ಗಾಯಗೊಂಡ ದುರದೃಷ್ಟಕರ ಘಟನೆ ನಡೆದಿತ್ತು. ಈ ತಿಂಗಳ ಆರಂಭದಲ್ಲಿ ಜಮ್ಮು ಮತ್ತು ಕಾಶ್ಮೀರ ಪೊಲೀಸರು ರಿಯಾಸಿ ಜಿಲ್ಲೆಯ ಕತ್ರಾದಲ್ಲಿರುವ ಶ್ರೀ ಮಾತಾ ವೈಷ್ಣೋದೇವಿ ದೇಗುಲದ ಭದ್ರತಾ ಪರಿಶೀಲನೆ ನಡೆಸಿದರು.

ದೇಗುಲದ ಪ್ರತಿಯೊಂದು ಭದ್ರತಾ ಕಸರತ್ತು, ಯಾತ್ರೆಯ ಮಾರ್ಗ, ದೇಗುಲಕ್ಕೆ ಭೇಟಿ ನೀಡುವ ಯಾತ್ರಾರ್ಥಿಗಳ ಸುರಕ್ಷತೆ ಮತ್ತು ಭದ್ರತೆಯನ್ನು ಡಿಐಜಿ ಪರಿಶೀಲಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!