Sunday, October 2, 2022

Latest Posts

ಬೃಹತ್ ಮರದ ಕೊಂಬೆ ಬಿದ್ದು ಇಬ್ಬರ ಸಾವು: ಓರ್ವ ಗಂಭೀರ

ಹೊಸದಿಗಂತ ಡಿಜಿಟಲ್ ಡೆಸ್ಕ್ :

ಏಕಾಏಕಿ ಬೃಹತ್ತಾದ ಮರದ ಕೊಂಬೆ ಮುರಿದು ಬಿದ್ದ ಪರಿಣಾಮ ಇಬ್ಬರು ಸಾವನ್ನಪ್ಪಿದ್ದು, ಓರ್ವ ಗಂಭೀರವಾಗಿ ಗಾಯಗೊಂಡಿರುವ ಘಟ‌ನೆ ಕೋಲಾರದಲ್ಲಿ ನಡೆದಿದೆ.
ಕೋಲಾರ ತಾಲ್ಲೂಕು ಕ್ಯಾಲನೂರು ಗ್ರಾಮದಲ್ಲಿ ಈ ಘಟನೆ ಜರುಗಿದ್ದು, ಮರದ ಕೆಳಗೆ ನಿಂತಿದ್ದ ನಾರಾಯಣಪ್ಪ ಹಾಗೂ ಜಮ್ ಶೀರ್ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.
ಕಡಗಟ್ಟೂರು ಸದ್ದಪ್ಪ ಎಂಬುವರು ಗಂಭೀರ ಗಾಯಗೊಂಡಿದ್ದು, ಗಾಯಾಳನ್ನು ಕೋಲಾರದ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಕ್ಯಾಲನೂರು ಗ್ರಾಮದ ಕೆಇಬಿ ಎದುರಿಗಿರುವ ಸುಮಾರು 100 ವರ್ಷ ಹಳೆಯದಾದ ಮರ ಇದಾಗಿದೆ. ಬೃಹದಾಕಾರದ ಕೊಂಬೆ ಮುರಿದು ಬಿದ್ದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ. ವೇಮಗಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!