ಜಲಾಂತರ್ಗಾಮಿ ಅವಶೇಷಗಳ ಜತೆ ಮನುಷ್ಯರ ದೇಹದ ಭಾಗಗಳು ಪತ್ತೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಟೈಟಾನಿಕ್ ಹಡಗಿನ ಅವಶೇಷಗಳನ್ನು ನೋಡಲು ಜಲಾಂತರ್ಗಾಮಿಯಲ್ಲಿ ತೆರಳಿದ್ದವರು ದಾರುಣವಾಗಿ ಮೃತಪಟ್ಟಿದ್ದಾರೆ. ಜಲಾಂತರ್ಗಾಮಿ ಸ್ಫೋಟದ ತೀವ್ರತೆಯಿಂದಾಗಿ ಮೃತಪಟ್ಟ ಯಾರ ದೇಹವೂ ಸಿಕ್ಕಿರಲಿಲ್ಲ. ಇದೀಗ ಜಲಾಂತರ್ಗಾಮಿ ಅವಶೇಷಗಳು ಪತ್ತೆಯಾಗಿದ್ದು, ಅದರ ಜತೆಯಲ್ಲಿ ಮನುಷ್ಯ ದೇಹದ ಭಾಗಗಳು ಪತ್ತೆಯಾಗಿವೆ.

ಪೈಲಟ್ ಸೇರಿ ಐದು ಮಂದಿ ಜಲಾಂತರ್ಗಾಮಿಯಲ್ಲಿ ಟೈಟಾನಿಕ್ ಅವಶೇಷಗಳನ್ನು ನೋಡಲು ತೆರಳಿದ್ದರು. ನಾಲ್ಕುದಿನಗಳು ಜಲಾಂತರ್ಗಾಮಿಯ ಪತ್ತೆಗಾಗಿ ಸಾಕಷ್ಟು ಪ್ರಯತ್ನ ನಡೆದಿತ್ತು. ಆದರೆ ಜಲಾಂತರ್ಗಾಮಿಯಲ್ಲಿ ಆಕ್ಸಿಜನ್ ಖಾಲಿ ಆದ ನಂತರ ಎಲ್ಲರೂ ಮೃತಪಟ್ಟಿದ್ದಾರೆ. ನಂತರ ಜಲಾಂತರ್ಗಾಮಿ ನೀರಿನಲ್ಲಿಯೇ ಭಯಾನಕವಾಗಿ ಸ್ಫೋಟಗೊಂಡಿದೆ. ಟೈಟಾನಿಕ್ ಅವಶೇಷಗಳಿಂದ ಒಟ್ಟಾರೆ ೧೬೦೦ ಅಡಿ ದೂರದಲ್ಲಿ ಜಲಾಂತರ್ಗಾಮಿ ಅವಶೇಷಗಳು ಪತ್ತೆಯಾಗಿವೆ. ಅದರ ಜೊತೆಯಲ್ಲಿ ಮಾನವ ಅವಶೇಷಗಳೂ ಪತ್ತೆಯಾಗಿರುವ ಬಗ್ಗೆ ಮಾಹಿತಿ ದೊರೆತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!