ಅಮೆರಿಕದ ಮಾನವ ಹಕ್ಕು ಉಲ್ಲಂಘನೆಗಳ ಬಗ್ಗೆ ನಾವೂ ಮಾತಾಡ್ತೇವೆ- ಎಸ್ ಜೈಶಂಕರ್ ತಿರುಗೇಟು

 

ಹೊಸ ದಿಗಂತ ಡಿಜಿಟಲ್ ಡೆಸ್ಕ್

ಭಾರತದ ಮಾನವ ಹಕ್ಕು ಪರಿಸ್ಥಿತಿಗಳ ಬಗ್ಗೆ ಅಮೆರಿಕ ನಿಗಾ ಇಡುತ್ತದೆ ಎಂದು ಅಮೆರಿಕ ವಿದೇಶ ಕಾರ್ಯದರ್ಶಿ ಬ್ಲಿಂಕೆನ್ ನೀಡಿದ್ದ ಹೇಳಿಕೆಗೆ ಭಾರತದ ವಿದೇಶ ಸಚಿವ ಎಸ್ ಜೈಶಂಕರ್ ಅದೇ ಧಾಟಿಯಲ್ಲಿ ತಿರುಗೇಟು ಕೊಟ್ಟಿದ್ದಾರೆ.

“ಮಾನವ ಹಕ್ಕುಗಳ ವಿಷಯವನ್ನಿಟ್ಟುಕೊಂಡು ಪ್ರತಿಯೊಬ್ಬರೂ ಬೇರೆಯವರ ಮೇಲೆ ಅಭಿಪ್ರಾಯ ಕೊಡುತ್ತಾರೆ. ಇದು ಯಾವ ವೋಟ್ ಬ್ಯಾಂಕ್ ಖುಷಿಗೊಳಿಸುವುದಕ್ಕೆ ಹೇಳುತ್ತಿದ್ದಾರೆಂಬುದೂ ಗೊತ್ತು. ಆದರೆ ಅಂಥದೇ ಅಭಿಪ್ರಾಯ ವ್ಯಕ್ತಪಡಿಸುವ ಅಧಿಕಾರ ನಮಗೂ ಇದೆ. ಅಮೆರಿಕದ ಮಾನವ ಹಕ್ಕುಗಳ ಬಗ್ಗೆ ಭಾರತವೂ ಅಭಿಪ್ರಾಯ ಕೊಡುತ್ತದೆ. ಅದರಲ್ಲೂ ಈ ವಿಷಯದಲ್ಲಿ ಇಂಡಿಯನ್-ಅಮೆರಿಕನ್ ಇದ್ದಾಗ ಆ ಬಗ್ಗೆ ಮಾತಾಡಿಯೇ ಮಾತಾಡುತ್ತದೆ.” ಎಂದು 2+2 ಪತ್ರಿಕಾಗೋಷ್ಟಿಯಲ್ಲಿ ನೇರವಾಗಿಯೇ ಹೇಳಿದ್ದಾರೆ ಎಸ್ ಜೈಶಂಕರ್.

ಒಂದು ದಿನದ ಹಿಂದಷ್ಟೇ ಅಮೆರಿಕದಲ್ಲಿ ಇಬ್ಬರು ಸಿಖ್ಖರ ಮೇಲೆ ಹಲ್ಲೆಯಾಗಿತ್ತು. ಅದನ್ನು ವಿದೇಶ ಸಚಿವ ಜೈಶಂಕರ್ ಉಲ್ಲೇಖಿಸಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!