ಬಸ್‌ನಲ್ಲಿ ಬಿಟ್ಟಿದ್ದ ಹಣ ಮರಳಿ ಪ್ರಯಾಣಿಕನಿಗೆ ನೀಡಿ ಮಾನವೀಯತೆ ಮೆರೆದ KSRTC ಸಿಬ್ಬಂದಿ!

ಹೊಸದಿಗಂತ ವರದಿ, ಮಳವಳ್ಳಿ:

ಪಟ್ಟಣದಿಂದ ಹಲಗೂರಿಗೆ ಹೋಗುವ ಕೆಎಸ್ ಅರ್ ಟಿಸಿ ಬಸ್‌ನಲ್ಲಿ ಪ್ರಯಾಣಿಕರೊಬ್ಬರು ಮರೆತು ಹೋಗಿದ್ದ ಸುಮಾರು 4 ಲಕ್ಷ ರೂಪಾಯಿಗಳಿದ್ದ ಬ್ಯಾಗ್ ಹಾಗೂ ದಾಖಲಾತಿಗಳನ್ನು ವಾಪಸ್ ಮಾಲೀಕರಿಗೆ ನೀಡುವ ಮೂಲಕ ಸಾರಿಗೆ ಸಿಬ್ಬಂದಿ ಪ್ರಮಾಣಿಕತೆ ಮರೆದಿ ದ್ದಾರೆ.

ತಮಗೆ ಸಿಕ್ಕ ಹಣದ ಬ್ಯಾಗ್ ಮತ್ತು ದಾಖಲಾತಿಗಳನ್ನು ಸಂಬಂಧಿಸಿದವರಿಗೆ ಮರಳಿಸುವ ಮೂಲಕ ಸಾರಿಗೆ ಸಿಬ್ಬಂದಿ ಕರ್ತವ್ಯ ಪ್ರಜ್ಞೆ ಮೆರೆದು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.

ಘಟನೆ ವಿವರ: ಮಳವಳ್ಳಿಯಿಂದ ಹಲಗೂರಿಗೆ ಹೋಗುವ ಬಸ್‌ನಲ್ಲಿ ಪ್ರಯಾಣಿಕರಾದ ವಿಜಯಾಂಭ ಮತ್ತು ಬಸವಯ್ಯ ಎಂಬುವವರು ಇಳಿಯುವಾಗ ಅವಸರದಲ್ಲಿ ತಮ್ಮ ಬಳಿಯಿದ್ದ 4 ಲಕ್ಷ ರೂ.ಗಳಿದ್ದ ಬ್ಯಾಗನ್ನು ಮರೆತು ಇಳಿದಿ ದ್ದಾರೆ. ನಂತರ ಹಲಗೂರಿನಿಂದ ರಾಮ ನಗರಕ್ಕೆ ಹೋಗಲು ಬಸ್ ಹತ್ತುವ ವೇಳೆ ಹಣ ಬ್ಯಾಗ್ ಇಲ್ಲದನ್ನು ಗಮನಿಸಿದ್ದಾರೆ.

ಆ ವೇಳೆಗಾಗಲೇ ಹಲಗೂರಿನಿಂದ ಮಳವಳ್ಳಿಗೆ ವಾಪಸ್ ಆಗಿದ್ದ ಬಸ್ ನಲ್ಲಿದ್ದ ಬ್ಯಾಗ್ ಪರಿಶೀಲಿಸಿದ ಚಾಲಕ ಜಯ ರಾಮು ಮತ್ತು ನಿರ್ವಾಹಕ ಆನಂದ್ ಹಣ ಇರುವುದನ್ನು ಗಮನಿಸಿ ಸಂಚಾರಿ ನಿರೀಕ್ಷ ಕುಮಾರ್ ಗಮನಕ್ಕೆ ತಂದಿದ್ದಾರೆ. ಹಲಗೂರು ಪೊಲೀಸ್ ಸಿಬ್ಬಂದಿ ಮೂಲಕ ಪಟ್ಟಣದ ಸಾರಿಗೆ ಅಧಿಕಾರಿಗಳನ್ನು ಸಂಪರ್ಕಿಸಿದ್ದ ಹಣ ಕಳೆದುಕೊಂಡಿದ್ದ ವಿಜ ಯಾಂಭ ಮತ್ತು ಬಸವಯ್ಯ ಅವರಿಗೆ ಚಾಲಕ ಜಯರಾಮು ಮತ್ತು ನಿರ್ವಾಹಕ ಆನಂದ್ ಅವರು ಸಾರಿಗೆ ಅಧಿಕಾರಿಗಳಾದ ಎಸ್.ನಾಗರಾಜು, ಕುಮಾರ್, ಮಹೇಶ್ ಅವರ ಸಮ್ಮುಖದಲ್ಲಿ ದಾಖಲೆಗಳನ್ನು ಪರಿಶೀಲಿಸಿ ಹಣವನ್ನು ವಾಪಸ್ ನೀಡಿದ್ದಾರೆ.

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!