ಸಾಹಿತ್ಯ ಸಮ್ಮೇಳನದ ಮೆರವಣಿಗೆಯಲ್ಲಿ ನೂರು ಕಲಾ ತಂಡಗಳ ಭಾಗಿ: ಸಂಜೀವ ಕುಮಾರ್ ನೀರಲಗಿ

ಹೊಸದಿಗಂತ ವರದಿ, ಹಾವೇರಿ:

ಹಾವೇರಿಯಲ್ಲಿ ಜ.೬,೭,೮ ರಂದು ಜರಗುತ್ತಿರುವ ೮೬ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಮೆರವಣಿಗೆಯಲ್ಲಿ ಒಂದು ಕೇರಳ ರಾಜ್ಯದ ಚಂಡಿತಾಯಂ ತಂಡ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳ ಒಂದು ನೂರು ಕಲಾ ತಂಡಗಳು ಪಾಲ್ಗೊಳ್ಳಲಿವೆ ಎಂದು ನಗರಸಭೆ ಅಧ್ಯಕ್ಷ ಹಾಗೂ ಮೆರವಣಿಗೆ ಸಮಿತಿ ಅಧ್ಯಕ್ಷ ಸಂಜೀವಕುಮಾರ ನೀರಲಗಿ ಹೇಳಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೆರವಣಿಗೆ ನಗರದ ಪುರಸಿದ್ಧೇಶ್ವರ ದೇವಸ್ಥಾನದಿಂದ ಪ್ರಾರಂಬವಾಗಿ, ಗಾಂಧೀ ವೃತ್ತ, ಮೈಲಾರ ವೃತ್ತ, ಹೊಸಮನಿ ವೃತ್ತದಿಂದ ನೇರವಾಗಿ ಸಮ್ಮೇಳನ ಜರಗುವ ಸ್ಥಳಕ್ಕೆ ಸಾಗಲಿದೆ. ಹಾವೇರಿ ಜಿಲ್ಲೆಯ ೫೦ ತಂಡಗಳು ಸೇರಿದಮತೆ ರಾಜ್ಯ ವಿವಿಧ ಜಿಲ್ಲೆಗಳ ೪೯ ತಂಡಗಳು ಪಾಲ್ಗೊಳ್ಳಲಿವೆ ಎಂದರು.
ಭಾಗವಹಿಸುವ ತಂಡಗಳು ಪ್ರಮುಖವಾಗಿ ಜಿಲ್ಲೆಯ ಸಾಂಸ್ಕೃತಿಕತೆಯನ್ನು ಬಿಂಬಿಸುವ ಕಲಾತಂಡಗಳಿರುತ್ತದೆ. ಡೊಳ್ಳು, ಪುರವಂತಿಕೆ, ವೀರಗಾಸೆ, ಮಹಿಳಾ ವೀರಗಾಸೆ, ಕರಡಿಮಜಲು, ಕಣಿ ವಾದನ, ಪೂಜಾ ಕುಣಿತ, ಸೋಮನ ಕುಣಿತ, ಜಾನಪದ ಕೀಲು ಕುಣಿತ, ಕೀಲು ಕುದುರೆ, ಕಂಸಾಲೆ, ಚಿಲಿಪಿಲಿ, ಜಗ್ಗಾಲಿ, ನಗಾರಿ, ಗೊರವರ ಕುಣಿತ, ಜೋಗತಿ ಕುಣಿತ, ವಿಶೇಷ ಝಾಂಜ್, ಭದ್ರಕಾಲೀ ಕುಣಿತ, ಹಕ್ಕಿ ಪಕ್ಕಿ ನೃತ್ಯ ಪ್ರದರ್ಶನ, ಮೋಜು ಗೊಂಬೆ, ಕೋಲಾಟ, ಉತ್ತರ ಕರ್ನಾಟಕದ ಹಾಲಕ್ಕಿ ಸುಗ್ಗಿ ಕುಣಿತ, ಬೇಡರ ವೇಶ, ಲಂಬಾಣಿ ಕುಣಿತ ಸೇರಿದಂತೆ ನಾಡಿದ ಸಂಸ್ಕೃತಿಯನ್ನು ಬಿಂಬಿಸುವ ಇನ್ನು ಹಲವು ತಂಡಗಳು ಪಾಲ್ಗೊಳ್ಳಲಿವೆ ಎಂದರು.
ಮೆರವಣಿಗೆ ಬೆಳಿಗ್ಗೆ ೭.೩೦ಕ್ಕೆ ಮೆರವಣಿಗೆ ಪ್ರಾರಂಬವಾಗುವುದು. ಸಮ್ಮೇಳನದ ಅಧ್ಯಕ್ಷರು ಸಾಗುವ ಬಸ್‌ನ್ನು ೪ ಲಕ್ಷ ರೂಗಳಲ್ಲಿ ವಿಶೇಷವಾಗಿ ಅಂಲಂಕರಿಸಿ ಸಿದ್ದಪಡಿಸಲಾಗಿದೆ. ಕನಕದಾಸರು, ಸರ್ವಜ್ಞ, ಅಂಬಿಗರ ಚೌಡಯ್ಯ, ಸಂತ ಶಿಶುನಾಳ ಶರೀಫ್‌ರ ಸ್ತಬ್ಧ ಚಿತ್ರಗಳು ಸೇರಿದಂತೆ ಒಟ್ಟು ಆರು ಸ್ತಬ್ಧ ಚಿತ್ರಗಳು ಮೆರವಣಿಗೆ ಪ್ರಮುಖ ಆಕರ್ಷಣೆಯಾಗಲಿದೆ. ಸಮ್ಮೇಳನ ಅಧ್ಯಕ್ಷರ ವಾಹನದ ಹಿಂದೆ ಒಂದು ಸಾರೋಟಿನಲ್ಲಿ ಮೂವರು ಜಿಲ್ಲಾಧ್ಯಕ್ಷರು ಸಾಗುವಂತೆ ಒಟ್ಟು ೧೨ ಸಾರೋಟಗಳನ್ನು ಸಿದ್ದಗೊಳಿಸಲಾಗಿದೆ. ಮೆರವಣಿಗೆಯಲ್ಲಿ ಸರ್ಕಾರಿ ಹಾಗೂ ಖಾಸಗಿ ಶಾಲಾ ಕಾಲೇಜುಗಳ ೨೫-೩೦ ಸಾವಿರ ವಿದ್ಯಾರ್ಥಿಗಳು ಪಾಲ್ಗೊಳ್ಳಲಿದ್ದಾರೆ ಎಂದರು.
ಮಾಜಿ ಸಚಿವ ಬಸವರಾಜ ಶಿವಣ್ಣನವರ ಮಾತನಾಡಿ, ಜಿಲ್ಲೆಯಲ್ಲಿ ಜರಗುತ್ತಿರುವ ಸಾಹಿತ್ಯ ಸಮ್ಮೇಳನದಲ್ಲಿ ಜಿಲ್ಲೆಯ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಸಿಗೊಳಿಸಬೇಕು. ಇದು ನಮ್ಮೂರಿನ ನಮ್ಮ ಹಬ್ಬ ಎಂದುಕೊಂಡು ರಥ ಸಾಗುವ ಬೀದಿಯನ್ನು ರಂಗೋಲಿ, ತರಿಳು ತೋರಣ ಕಟ್ಟುವ ಮೂಲ ಸುಂದರವಾಗಿ ಸಿಂಗರಿಸಿ ಯಶಸ್ವಿಗೊಳಿಸುವಂತೆ ನಗರದ ಜನತೆಯನ್ನು ಕೇಳಿಕೊಂಡರು.
ಮೆರವಣಿಗೆ ಸದಸ್ಯ ಕಾರ್ಯದರ್ಶಿ ಯೋಜನಾಧಿಕಾರಿ ಗೀತಾ ಮಾತನಾಡಿ, ಮೆರವಣಿಗೆಯಲ್ಲಿ ಪಾಲ್ಗೊಳ್ಳುವವರು ದಾರಿಯುದ್ದಕ್ಕೂ ಶಕ್ತಿಯುತವಾಗಿ ಇರುವಂತೆ ಮಾಡುವುದಕ್ಕೆ ಗ್ಲೂಕೋಸ್, ಬಿಸ್ಕೀಟ್, ಚಾಕಲೇಟ್, ಶರಬತ್, ತಂಪಾದ ನೀರು ನೀಡುವುದಕ್ಕೆ ಆರು ಕಡೆಗಳಲ್ಲಿ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.
ಮೆರವಣಿಗೆಯಲ್ಲಿ ಪ್ರತಿ ತಂಡಕ್ಕೂ ಸರತಿಯ ಸಂಖ್ಯೆಯನ್ನು ನೀಡಲಾಗಿದೆ. ಆಯಾ ತಂಡಗಳು ಆಯಾ ಸಂಖ್ಯೆಯಲ್ಲಿನೇ ನಿಂತುಕೊಳ್ಳಬೇಕು ಮತ್ತು ಪ್ರತಿಯೊಂದು ತಂಡಕ್ಕೂ ನಾಮ ಫಲಕವನ್ನು ನೀಡಲಾಗಿದೆ. ಎಲ್ಲ ಕಲಾ ತಂಡಗಳು ದಿ.೫ ರಂದೇ ಹಾವೇರಿಗೆ ಆಗಮಿಸಿ ವಾಸ್ತವ್ಯಕ್ಕೆ ಬರುವಂತೆ ತಿಳಿಸಲಾಗುತ್ತಿದೆ. ದಿ.೬ರ ಬೆಳಿಗ್ಗೆ ಮೆರವಣಿಗೆ ಸಾಗುವುದಕ್ಕೆ ಸಾಧ್ಯವಾಗುತ್ತದೆ. ಕಲಾವಿದರೂ ಸೇರಿದಂತೆ ಸಹಾಕರು ಸೇರಿದಂತೆ ೧೫೦೦ ಕ್ಕೂ ಹೆಚ್ಚು ಕಲಾ ತಂಡದ ಸದಸ್ಯರು ಭಾಗವಹಿಸಲಿದ್ದಾರೆ ಎಂದರು.
ರಮೇಶ ಆನವಟ್ಟಿ ಮಾತನಾಡಿ ಪ್ರಸಕ್ತ ರಾಜ್ಯದ ಪ್ರವಾಸದಲ್ಲಿರುವ ಭೂವನೇಶ್ವರಿ ರಥವು ದಿ.೫ರಂದು ಹಾವೇರಿಗೆ ಆಗಮಿಸಲಿದೆ. ಅಂದು ನಗರದಲ್ಲಿ ಮೆರವಣಿಗೆ ಮುಗಿದಿ ಅಂದು ಹುಕ್ಕೇರಿಮಠದಲ್ಲಿ ತಂಗಿ ಬೆಳಿಗ್ಗೆ ಮೆರವಣಿಗೆಯೊಂದಿಗೆ ಸಾಗಲಿದೆ ಎಂದು ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!