ರಾಹುಲ್ ಗಾಂಧಿಯ ಪಿಎ ಎಂದು ಶಾಸಕ ಯು.ಟಿ. ಖಾದರ್ ಅನ್ನು ಯಾಮಾರಿಸಲು ಯತ್ನ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ವಿಧಾನಸಭೆ ವಿಪಕ್ಷ ಉಪನಾಯಕ ಯು.ಟಿ. ಖಾದರ್ ಅವರಿಗೆ ಯಾರೋ ಅಪರಿಚಿತರು ರಾಹುಲ್ ಗಾಂಧಿಯ ಪಿಎ ಎಂದು ಹೇಳಿಕೊಂಡು ಫೋನ್ ಮಾಡಿ ಯಾಮರಿಸಲು ಯತ್ನಿಸಿದ ಘಟನೆ ನಡೆದಿದೆ.

ಇದರ ವಿರುದ್ಧ ಖಾದರ್ ಅವರು ಮಂಗಳೂರು ಪೊಲೀಸ್ ಕಮಿಷನರ್‌ಗೆ ದೂರು ನೀಡಿ ನಕಲಿ ವ್ಯಕ್ತಿಯ ಬಗ್ಗೆ ತನಿಖೆ ನಡೆಸಲು ಕೋರಿದ್ದಾರೆ.
ಪೊಲೀಸರು ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಸೋಮವಾರ ಮಧ್ಯಾಹ್ನ ಯು.ಟಿ. ಖಾದರ್ ಅವರ ಮೊಬೈಲ್ ಸಂಖ್ಯೆಗೆ ೮೧೪೬೦೦೬೬೨೬ ನಂಬರಿನಿಂದ ಕರೆ ಬಂದಿತ್ತು. ಎರಡು ಬಾರಿ ಫೋನ್ ಕರೆ ಬಂದಿದ್ದರಿಂದ ಸಭೆಯಲ್ಲಿದ್ದಖಾದರ್‌ಗೆ ಕರೆ ಸ್ವೀಕರಿಸಲು ಆಗಿರಲಿಲ್ಲ. ಸಭೆ ಮುಗಿದು ಮೊಬೈಲ್ ನೋಡಿದಾಗ, ಅದೇ ನಂಬರಿನಿಂದ ಸಂದೇಶವೊಂದು ಬಂದಿತ್ತು.Good afternoon this side kaniskha singh pa to shri rahul Gandhi ji call me ಎಂದು ಸಂದೇಶ ಬರೆಯಲಾಗಿತ್ತು. ಮೊಬೈಲ್ ಸಂಖ್ಯೆಯನ್ನು ಅಪರಿಚಿತ ವ್ಯಕ್ತಿ ಎಐಸಿಸಿ ಕಾರ್ಯದರ್ಶಿ ವೇಣುಗೋಪಾಲ್ ಹೆಸರಲ್ಲಿ ಸೇವ್ ಮಾಡಿರುವುದು ಟ್ರೂ ಕಾಲರ್ ಮೂಲಕ ತಿಳಿದುಬಂದಿದೆ.

ಈ ಕುರಿತು ಖಾದರ್ ಅವರು ಮಾಹಿತಿ ಕಲೆಹಾಕಿದಾಗ ನಕಲಿ ಹೆಸರಿನಲ್ಲಿ ಬಂದಿರುವ ಕರೆ ಎಂಬುದು ಮನವರಿಕೆಯಾಗಿದೆ. ಈ ಬಗ್ಗೆ ತನಿಖೆ ನಡೆಸಿ, ಕರೆ ಮಾಡಿದವರು

ಯಾರು, ಯಾಕಾಗಿ ಕರೆ ಮಾಡಿದ್ದಾರೆ ಎಂಬುದನ್ನು ಪತ್ತೆ ಮಾಡಬೇಕು ಎಂದು ಯು.ಟಿ. ಖಾದರ್ ಅವರು ಪೊಲೀಸ್ ಕಮಿಷನರ್‌ಗೆ ದೂರು ನೀಡಿದ್ದಾರೆ.

ಮೇಲ್ನೋಟಕ್ಕೆ ನಕಲಿ ಹೆಸರಿನಲ್ಲಿ ಕಾಂಗ್ರೆಸ್ ಹೈಕಮಾಂಡ್ ಕಡೆಯಿಂದ ಎಂದು ಹೇಳಿ ಕರೆ ಮಾಡಿ, ಶಾಸಕರನ್ನು ಯಾಮಾರಿಸಲು ಯತ್ನಿಸಲು ನಡೆಸಿದ ಕೃತ್ಯ ಎಂದು ಹೇಳಲಾಗುತ್ತಿದೆ. ಹಣ ಎಗರಿಸಲು ಸೈಬರ್ ವಂಚಕರು ಕರೆ ಮಾಡುವ ರೀತಿಯಲ್ಲಿ ರಾಹುಲ್ ಗಾಂಧಿಯ ಪಿಎ ಎಂದು ಹೇಳಿಕೊಂಡು ಯಾಮರಿಸಲು ಕರೆ ಮಾಡಿರುವ ಸಾಧ್ಯತೆಯನ್ನು ಹೇಳಲಾಗುತ್ತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!