ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದಲ್ಲಿ ಮುಂಗಾರು ಕೈಕೊಟ್ಟ ಕಾರಣ ನೂರಾರು ಸಮಸ್ಯೆಗಳನ್ನು ಎದುರಿಸಬೇಕಾಗುತ್ತಿದೆ. ದಿನಸಿ ಸಾಮಾಗ್ರಿಗಳ ಬೆಲೆ ಏರಿಕೆಯ ಸುದ್ದಿ ಬೆನ್ನಲ್ಲೇ ಇದೀಗ ಸದ್ದಿಲ್ಲದೇ ತರಕಾರಿಗಳ ಬೆಲೆ ಏರಿಕೆಯಾಗುತ್ತಿರುವುದು ಕಂಡುಬಂದಿದೆ. ಮಿಡಲ್ ಕ್ಲಾಸ್ ಜನರಿಗೆ ಗಾಯದ ಮೇಲೆ ಬರೆ ಹಾಕಿದಂತಾಗಿದ್ದು, ಆರೋಗ್ಯಕ್ಕಾಗಿ ಜನ ನಿತ್ಯವೂ ತರಕಾರಿಗಳನ್ನು ಸೇವಿಸುತ್ತಾರೆ. ಆದರೆ ಇದೀಗ ಬೆಲೆ ಏರಿಕೆಯಿಂದಾಗಿ ಆರೋಗ್ಯದ ಬಗ್ಗೆ ಕಾಂಪ್ರಮೈಸ್ ಮಾಡಿಕೊಳ್ಳಲಾಗುತ್ತಿದೆ.
ರಾಜ್ಯದಲ್ಲಿ ಮಳೆ ಅಭಾವದಿಂದ ರೈತರು ಕಂಗೆಟ್ಟು ಕುಳಿತಿದ್ದಾರೆ. ಬೆಳೆ ಬೆಳೆಯಲು ಸಮಯವಿದೆ, ಆದರೆ ನೀರಿಲ್ಲ. ಹೀಗಾಗಿ ಇರುವ ಬೆಳೆಗಳೂ ನೆಲಕಚ್ಚಿದ್ದು, ಮಾರುಕಟ್ಟೆಯಲ್ಲಿ ಎಲ್ಲ ತರಕಾರಿಗಳ ಬೆಲೆ ಏರಿಕೆಯಾಗಿದೆ. ತರಕಾರಿಗಳಿಗಾಗಿ ನಾವು ರೈತರ ಮೇಲೆ ಅವಲಂಬಿತರಾಗಿದ್ದೇವೆ. ಆದರೆ ಎಷ್ಟೋ ಕಡೆ ಇನ್ನೂ ವ್ಯವಸಾಯವೇ ಆರಂಭವಾಗಿಲ್ಲ. ಇದರಿಂದಾಗಿ ಇರುವ ಸ್ಟಾಕ್‌ನ ಬೆಲೆ ಏರಿಕೆಯಾಗಿದೆ.
ಈರುಳ್ಳಿಯ ದರ ಇದ್ದಕ್ಕಿದ್ದಂತೆಯೇ 80 ರಿಂದ ನೂರು ರೂಪಾಯಿಯಷ್ಟಾಗಿದೆ. ಟೊಮ್ಯಾಟೊ, ಬೀಟ್‌ರೂಟ್, ಸೌತೆಕಾಯಿ, ಕ್ಯಾರೆಟ್ ಹಾಗೂ ಬೀನ್ಸ್‌ನ ಬೆಲೆ ಏರಿಕೆಯಾಗಿದೆ. ಪ್ರತೀ ವರ್ಷ ಅಕ್ಟೋಬರ್‌ನಲ್ಲಿ ಸಾಮಾನ್ಯವಾಗಿ ತರಕಾರಿ ಬೆಲೆ ಇಳಿಕೆಯಾಗುತ್ತಿತ್ತು. ಆದರೆ ಈ ಬಾರಿ ದರ ಹೆಚ್ಚಳವಾಗಿದೆ. ಇನ್ನು ಮಳೆ ಬಾರದೇ ಹೋದಲ್ಲಿ ತರಕಾರಿಗಳು ಮಧ್ಯಮ ವರ್ಗದ ಜನರಿಂದ ಕೊಳ್ಳಲಾಗದಷ್ಟು ದರ ಹೆಚ್ಚಿಸಿಕೊಳ್ಳಲಿವೆ ಎನ್ನಲಾಗಿದೆ.
ಎಷ್ಟಿದೆ ಸದ್ಯದ ದರ?
ಈರುಳ್ಳಿ 80
ಸೌತೆಕಾಯಿ 60
ಕ್ಯಾರೆಟ್ 70
ಬೀಟ್‌ರೂಟ್ 50
ಬೆಳ್ಳುಳ್ಳಿ 300
ಆಲೂಗಡ್ಡೆ 50
ನುಗ್ಗೇಕಾಯಿ 70



