ಬಾಲಕನನ್ನೇ ತಿಂತು ಹಸಿದ ಹಿಪ್ಪೋ, ವಾಂತಿಯಲ್ಲಿ ಬಾಲಕನೂ ಹೊರಬಂದ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಉಗಾಂಡಾದಲ್ಲಿ ಹಸಿದ ಹಿಪ್ಪೋಪೊಟೊಮಸ್ ಒಂದು ಎರಡು ವರ್ಷದ ಬಾಲಕನನ್ನು ನುಂಗಿದೆ.
ಅಲ್ಲೇ ಇದ್ದ ವ್ಯಕ್ತಿಯೊಬ್ಬರು ಹಿಪ್ಪೋಗೆ ಕಲ್ಲುಗಳನ್ನು ಎಸೆದಿದ್ದು, ವಾಂತಿ ರೀತಿ ಬಾಲಕನನ್ನು ಹೊರಹಾಕಿದೆ.
ಕಾಟ್ವೆ ಕಬಾಟೊರೊದಲ್ಲಿ ಮನೆಪಕ್ಕದ ಕೆರೆಯ ತೀರದಲ್ಲಿ ಬಾಲಕ ಆಟ ಆಡುತ್ತಿದ್ದ. ಸಿಕ್ಕಾಪಟ್ಟೆ ಹಸಿವಿನಲ್ಲಿದ್ದ ಹಿಪ್ಪೋ ದೊಡ್ಡ ಬಾಯಿ ತೆಗೆದು ಬಾಲಕನನ್ನು ಹಿಡಿದು ನುಂಗಿದೆ.

ಉಗಾಂಡದಲ್ಲಿ ಕೆರೆಯಿಂದ ಹೊರಬಂದು ಮಗುವನ್ನು ತಿಂದ ಮೊದಲ ಪ್ರಕರಣ ಇದಾಗಿದೆ. ಬಾಲಕನ ಮೈಮೇಲೆ ಗಂಭೀರ ಗಾಯಗಳಾಗಿದ್ದು, ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಮಗುವಿಗೆ ರೇಬೀಸ್ ವ್ಯಾಕ್ಸಿನ್ ನೀಡಿ ಕುಟುಂಬಸ್ತರ ಬಳಿ ಕಳುಹಿಸಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!