ಕಳೆದ ಐದು ವರ್ಷಗಳಲ್ಲಿ 177 ವಿದೇಶಿ ಉಪಗ್ರಹಗಳನ್ನು ಉಡಾವಣೆ ಮಾಡಿದೆ ಇಸ್ರೋ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಭಾರತದ ಹೆಮ್ಮೆಯ ಸಂಸ್ಥೆ ಇಸ್ರೋ ಜನವರಿ 2018 ರಿಂದ ಇಲ್ಲಿಯವರೆಗೆ ಒಟ್ಟು 19 ದೇಶಗಳಿಗೆ ಸೇರಿದ 177 ವಿದೇಶಿ ಉಪಗ್ರಹಗಳನ್ನು ಯಶಸ್ವಿಯಾಗಿ ಉಡಾವಣೆ ಮಾಡಿದೆ. ಈ 19 ದೇಶಗಳಲ್ಲಿ ಆಸ್ಟ್ರೇಲಿಯಾ, ಬ್ರೆಜಿಲ್, ಕೆನಡಾ, ಕೊಲಂಬಿಯಾ, ಫಿನ್ಲ್ಯಾಂಡ್, ಫ್ರಾನ್ಸ್, ಇಸ್ರೇಲ್, ಇಟಲಿ, ಜಪಾನ್, ಲಿಥುವೇನಿಯಾ, ಲಕ್ಸೆಂಬರ್ಗ್, ಮಲೇಷ್ಯಾ, ನೆದರ್ಲ್ಯಾಂಡ್ಸ್, ರಿಪಬ್ಲಿಕ್ ಆಫ್ ಕೊರಿಯಾ, ಸಿಂಗಾಪುರ್, ಸ್ಪೇನ್, ಸ್ವಿಟ್ಜರ್ಲೆಂಡ್, ಯುನೈಟೆಡ್ ಕಿಂಗ್‌ಡಮ್ ಮತ್ತು ಯುಎಸ್ಎ ಸೇರಿವೆ.

ವಾಣಿಜ್ಯ ಒಪ್ಪಂದದ ಅಡಿಯಲ್ಲಿ, ISRO ಈ ಉಪಗ್ರಹಗಳನ್ನು PSLV ಮತ್ತು GSLV-MkIII ರಾಕೆಟ್‌ ಮೂಲಕ ಉಡಾವಣೆ ಮಾಡಿದೆ. ಜನವರಿ 2018 ರಿಂದ ನವೆಂಬರ್ 2022 ರವರೆಗೆ ಈ 177 ವಿದೇಶಿ ಉಪಗ್ರಹಗಳನ್ನು ಉಡಾವಣೆ ಮಾಡುವ 94 ಮಿಲಿಯನ್ USD ಮತ್ತು 46 ಮಿಲಿಯನ್ ಯುರೋ ಗಳಷ್ಟು ವಿದೇಶಿವಿನಮಯವನ್ನು ಇಸ್ರೋ ಗಳಿಸಿದೆ ಎಂದು ಕೇಂದ್ರ ಬಾಹ್ಯಾಕಾಶ ಖಾತೆ ರಾಜ್ಯ ಸಚಿವ ಡಾ ಜಿತೇಂದ್ರ ಸಿಂಗ್ ಅವರು ರಾಜ್ಯಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಲಿಖಿತ ಉತ್ತರದಲ್ಲಿ ಮಾಹಿತಿಯ ನೀಡಿದ್ದಾರೆ.

ಈ ವಲಯದಲ್ಲಿ ಸರ್ಕಾರೇತರ ಸಂಸ್ಥೆಗಳ ಭಾಗವಹಿಸುವಿಕೆಯನ್ನು ಹೆಚ್ಚಿಸುವ ಮತ್ತು ಬಾಹ್ಯಾಕಾಶ ಚಟುವಟಿಕೆಗಳಿಗೆ ವಾಣಿಜ್ಯ-ಆಧಾರಿತ ವಿಧಾನವನ್ನು ತರುವ ಉದ್ದೇಶದಿಂದ ಜೂನ್ 2020 ರಲ್ಲಿ ವಲಯದಲ್ಲಿ ಹೆಚ್ಚಿನ ಸುಧಾರಣೆಗಳನ್ನು ಘೋಷಿಸಲಾಗಿದೆ ಎಂದು ಸಚಿವರು ಹೇಳಿದ್ದಾರೆ.

ಈ ಸುಧಾರಣೆಗಳ ಫಲಿತಾಂಶವಾಗಿ 36 ಒನ್‌ವೆಬ್ ಉಪಗ್ರಹಗಳನ್ನುLVM 3 ಮೂಲಕ ಯಶಸ್ವಿಯಾಗಿ ಹೊತ್ತೊಯ್ಯಲಾಗಿದೆ. ಅಲ್ಲದೇ ಇತ್ತೀಚೆಗೆ ಖಾಸಗಿ ಸ್ಕೈರೂಟ್ ಏರೋಸ್ಪೇಸ್‌ನ ಉಪಗ್ರಹ ಉಡಾವಣೆಯ ಮೂಲಕ ಖಾಸಗಿ ಕ್ಷೇತ್ರದಲ್ಲಿ ಸಾಧನೆ ಮಾಡಲಾಗಿದೆ. ಅಲ್ಲದೇ ಬಾಹ್ಯಾಕಾಶ ಕ್ಷೇತ್ರದಲ್ಲಿ ಖಾಸಗಿ ಸಂಸ್ಥೆಗಳ ಬೆಳವಣಿಗೆಗೆ IN-SPAce ಎಂಬ ಏಜೆನ್ಸಿ ರಚಿಸಲಾಗಿದೆ. ಇಲ್ಲಿಯವರೆಗೆ 111 ಈ ರೀತಿಯ ಸ್ಟಾರ್ಟಪ್‌ ಗಳು ನೋಂದಾಯಿಸಿಕೊಂಡಿವೆ ಎಂದು ಅವರು ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!