ಹೊಸದಿಗಂತ ವರದಿ ಹುಬ್ಬಳ್ಳಿ:
ಕೇಂದ್ರ ಸರ್ಕಾರ ಏಕಕಾಲಕ್ಕೆ ಚುನಾವಣೆಯ ನಡೆಸುವ ಚಿಂತನೆ ರಾಜಕೀಯ ಗೊಂದಲ ಸೃಷ್ಟಿಗೆ ಹಾಗೂ ಲೋಕಸಭಾ ಚುನಾವಣೆ ಮುಂದೂಡಲು ಹುನ್ನಾರ ನಡೆಸಿದೆ ಎಂದು ಕಾನೂನು ಹಾಗೂ ಪ್ರವಾಸೋದ್ಯಮ ಸಚಿವ ಎಚ್.ಕೆ. ಪಾಟೀಲ ಆರೋಪಿಸಿದರು.
ಶನಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈ ವಿಚಾರದಲ್ಲಿ ಕೇಂದ್ರದಿಂದ ಯಾವುದೇ ಸ್ಪಷ್ಟತೆ ಇಲ್ಲ. ಯಾಕೇ ಕೇಂದ್ರ ಸರ್ಕಾರ ಚುನಾವಣೆ ಬಂದಾಗ ಇಂತಹ ವಿಷಯಗಳ ಚರ್ಚೆ ಮಾಡುತ್ತದೆ. ನಾಲ್ಕು ವರ್ಷ ಮಲಗಿದ್ದರಾ? ಎಂದು ಪ್ರಶ್ನಿಸಿದ ಅವರು, ಚುನಾವಣಾ ಆಯೋಗ ಜಾಗೃತರಾಗಿ ಹೆಜ್ಜೆ ಇಡಬೇಕು ಎಂದರು.
ಸಂಕಷ್ಟ ಸೂತ್ರ ಮಾಡಬೇಕಾದ ಕೇಂದ್ರ ಸರ್ಕಾರ ಹಾಗೂ ಏಜೆನ್ಸಿಗಳು ಮುಂದಾಗುತ್ತಿಲ್ಲ. ಇಂತಹ ಸಂದರ್ಭದಲ್ಲಿ ಪ್ರಧಾನಿ ಎರಡು ರಾಜ್ಯದವರನ್ನು ಕರೆದು ವಾಸ್ತವಾಗಿ ಡ್ಯಾಮ್‌ಗಳಲ್ಲಿರುವ ನೀರಿನ ಸಂಗ್ರಹ ಹಾಗೂ ಮುಂದೆ ಯಾವ ರಾಜ್ಯಕ್ಕೆ ನೀರು ಬರುತ್ತದೆ ಎಂದು ಗಮನಿಸಿ ಸಂಕಷ್ಟ ಸೂತ್ರ ಮಾಡಬೇಕಿತ್ತು. ಅದನ್ನು ಕೇಂದ್ರ ಸರ್ಕಾರ ಮಾಡದಿರುವುದು ದುರಾದೃಷ್ಟ ಸಂಗತಿ ಎಂದು ತಿಳಿಸಿದರು.