Monday, December 11, 2023

Latest Posts

ಎರಡು ವರ್ಷಗಳಿಂದ ಸಾಹಿತಿಗಳಿಗೆ ಬೆದರಿಕೆ ಪತ್ರ ಬರೆಯುತ್ತಿದ್ದ ವ್ಯಕ್ತಿ ಅರೆಸ್ಟ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕೊಲೆ ಮಾಡುತ್ತೇನೆ ಎಂದು ಸಾಹಿತಿಗಳಿಗೆ ಬೆದರಿಕೆ ಪತ್ರ ಬರೆದಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಎರಡು ವರ್ಷದಿಂದ ಸಾಹಿತಿಗಳಿಗೆ ಕೊಲೆ ಬೆದರಿಕೆ ಪತ್ರ ಬರೆದಿದ್ದ ಹಿಂದೂ ಸಂಘಟನೆಯ ಕಾರ್ಯಕರ್ತ ಶಿವಾಜಿ ರಾವ್ ಜಾಧವ್ ಬಂಧಿತ ಆರೋಪಿಯಾಗಿದ್ದಾನೆ.

ದಾವಣಗೆರೆಯಲ್ಲಿ ಆರೋಪಿಯನ್ನು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ. ಕುಂ ವೀರಭದ್ರಪ್ಪ, ಬಂಜಗೆರೆ ಜಯಪ್ರಕಾಶ್, ಬಿ.ಎಲ್. ವೇಣು. ಬಿ.ಟಿ ಲಲಿತಾ ನಾಯಕ್, ವಸುಂಧರ ಭೂಪತಿ ಹಾಗೂ ಕೆಲ ಸ್ವಾಮೀಜಿಗಳಿಗೆ ಈತ ಪತ್ರ ಬರೆದಿದ್ದ.

ನಿಮ್ಮನ್ನು ಯಾಕೆ ಕೊಲ್ಲಬಾರದು? ಗುಂಡಿಕ್ಕಿ ಸಾಯಿಸಬೇಕು, ಕೊನೆ ದಿನಗಳನ್ನು ಎಣಿಸಿರಿ ಎಂದು ಕೈ ಬರಹದ ಬೆದರಿಕೆ ಪತ್ರವನ್ನು ದಾವಣಗೆರೆಯಿಂದ ಪೋಸ್ಟ್ ಮಾಡಿದ್ದ. ಈ ಬಗ್ಗೆ ವಿಚಾರಣೆ ನಡೆಯುತ್ತಿದ್ದು, ಆತನ ಉದ್ದೇಶ ಅರಿಯಲಾಗುತ್ತಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!