October 11, 2026
Sunday, October 11, 2026
spot_img

ಸೀರೆ ಉಡು ಎಂದು ಎಷ್ಟು ಬಾರಿ ಹೇಳಿದ್ರೂ ನೈಟಿ ತೊಟ್ಟ ಪತ್ನಿಗೆ ಬೆಂಕಿ ಹಚ್ಚಿನ ಪತಿರಾಯ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ನೈಟಿ ಹಾಕಬೇಡಿ ಸೀರೆ ಮಾತ್ರ ಹಾಕ್ಕೋ ಎಂದು ಪತಿ ನೂರು ಬಾರಿ ಹೇಳಿದ್ರೂ ಸೆಖೆ ಇದೆ ನೈಟಿಯೇ ಸರಿ ಎಂದು ಪತ್ನಿ ಅದನ್ನೇ ಹಾಕಿಕೊಳ್ತಿದ್ರು. ಇದರಿಂದ ಕೋಪಗೊಂಡ ಪತಿ ಆಕೆಯ ಮೈಮೇಲಿದ್ದ ನೈಟಿಗೆ ಬೆಂಕಿಹಾಕಿದ್ದು, ಪತ್ನಿಯ ದೇಹ ಶೇ.80ರಷ್ಟು ಸುಟ್ಟುಹೋಗಿದೆ.

ಈ ಘಟನೆ ಬೆಳಗಾವಿಯ ಖಾನಾಪೂರ ನಂದಗಡದಲ್ಲಿ ನಡೆದಿದೆ. ಮಂಜುಳಾ ಹಾಗೂ ಕೃಷ್ಣಾಜಿ ಕಳೆದ ಎರಡು ವರ್ಷದ ಹಿಂದೆಯಷ್ಟೇ ಮದುವೆಯಾಗಿದ್ದರು. ಕೃಷ್ಣಾಜಿಗೆ ಹೆಂಡತಿ ನೈಟಿ ಹಾಕೋದು ಇಷ್ಟವಿರಲಿಲ್ಲ. ಪದೇ ಪದೆ ಮನೆಯಲ್ಲಿಯೂ ಸೀರೆ ಉಡು ಎಂದು ಹೇಳುತ್ತಲೇ ಇದ್ದ.

ಆಕೆ ನನ್ನ ದೇಹ ಯಾವ ರೀತಿ ಬಟ್ಟೆಹಾಕಿಕೊಳ್ಳಬೇಕು ಅನ್ನೋದು ನನಗೆ ಗೊತ್ತಿದೆ. ನೈಟಿಯಲ್ಲಿ ಏನು ಕೆಟ್ಟದಿದೆ? ಸೀರೆಯಲ್ಲಿಯೇ ದೇಹದ ಅಂಗಗಳು ಕಾಣಿಸುತ್ತವೆ ಎಂದು ಜಗಳ ಆಡುತ್ತಿದ್ದರು. ಇದೇ ವಿಷಯ ಅತಿರೇಕ ತಲುಪಿದ್ದು, ಕೃಷ್ಣಾಜಿ ಬೆಂಕಿ ಹಚ್ಚಿದ್ದಾನೆ. ಬಿಸಿಯಿಂದ ನಲುಗಿದ ಮಂಜುಲಾ ಕಿರುಚಾಡಿದ್ದಾರೆ.

ನಂತರ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿ ಮಂಜುಳಾರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ/

Must Read