ಹೊಸದಿಗಂತ ಡಿಜಿಟಲ್ ಡೆಸ್ಕ್:
ಪತಿಯೊಬ್ಬರು ಪತ್ನಿ ಸೀಮಂತದಲ್ಲಿ ಹೆಲಿಕಾಪ್ಟರ್‌ನಿಂದ ಹೂವಿನ ಮಳೆ ಹರಿಸಿದ್ದಾರೆ. ಈ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ.
ಸೀಮಂತದಲ್ಲಿ ಪತ್ನಿ ಖುಷಿಪಡಬೇಕು ಎನ್ನುವ ಕಾರಣಕ್ಕೆ ಮಂಗಳೂರಿನ ಉದ್ಯಮಿ ಪ್ರಕಾಶ್ ಕುಂಪಲ ಎನ್ನುವವರು ಹೂವಿನ ಮಳೆ ಸುರಿಯುವಂತೆ ಮಾಡಿದ್ದಾರೆ. ಜೀವನದ ಅಂತ್ಯದವರೆಗೂ ಈ ಸೀಮಂತ ನೆನಪಿರಲಿ ಎಂದು ಅದ್ಭುತ ಉಡುಗೊರೆ ನೀಡಿದ್ದಾರೆ.
ಸೀಮಂತ ಕಾರ್ಯಕ್ರಮ ನಡೆಯುತ್ತಿದ್ದ ವೇಳೆ ಆಕಾಶದಲ್ಲಿ ಹೆಲಿಕಾಪ್ಟರ್ ಸುತ್ತಾಡಿ, ನೂರಾರು ಹೂವಿನ ಎಸಳುಗಳನ್ನು ಮಳೆಯಂತೆ ಸುರಿದ ದೃಶ್ಯ ಪತ್ನಿ ಮತ್ತು ಬಂಧು – ಬಳಗ ಹಾಗೂ ಅತಿಥಿಗಳನ್ನು ಆಶ್ಚರ್ಯಚಕಿತರನ್ನಾಗಿಸಿತು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಇದೇ ರೀತಿ ಪತ್ನಿಯರಿಗೆ ಸರ್ಪ್ರೈಸ್ ನೀಡುವ ಬುದ್ಧಿ ಎಲ್ಲ ಪತಿಯರಿಗೂ ಬರಲಿ ಎಂದು ನೆಟ್ಟಿಗರು ತಮಾಷೆ ಮಾಡಿದ್ದಾರೆ.



