September 24, 2026
Thursday, September 24, 2026
spot_img

ಗಂಗಾ ನದಿಯಲ್ಲಿ ದೋಣಿಯ ಮೇಲೆ ಮೆಕ್ಸಿಕೋ ಜೋಡಿ ಮದುವೆ ಸಂಭ್ರಮ: ನವ ದಂಪತಿಗೆ ಸಿಕ್ಕಿತು ಮನತುಂಬಿ ಆಶೀರ್ವಾದ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ವಾರಣಾಸಿಯ ಅಸ್ಸಿ ಘಾಟ್‌ನಲ್ಲಿ ಮೆಕ್ಸಿಕೋ ಜೋಡಿ ದೋಣಿಯಲ್ಲಿ ಹಿಂದು ಸಂಪ್ರದಾಯದಂತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದೆ.

ಭಾರತೀಯ ಸಂಸ್ಕೃತಿ ಮತ್ತು ಸಂಪ್ರದಾಯಗಳಿಂದ ಆಕರ್ಷಿತರಾಗಿದ್ದ ಮೆಕ್ಸಿಕನ್ ನಿವಾಸಿಗಳಾದ ರುಯಿಜ್ ಕ್ಯಾಬ್ರೋಲ್ ಮತ್ತು ಗೊನ್ಜಾಲೊ ಮಿಗುಯೆಲ್, ಗಂಗಾ ನದಿಯಲ್ಲಿ ದೋಣಿಯ ಮೇಲೆ ವೇದ ಮಂತ್ರಗಳೊಂದಿಗೆ ಸಂಪ್ರದಾಯ ಬದ್ಧವಾಗಿ ಮದುವೆಯಾದರು.

ಮಂತ್ರಗಳ ಪಠಣ, ಧೂಪದ್ರವ್ಯ ಗಂಗಾ ನದಿಯ ಶಾಂತ ಅಲೆಗಳು ಸಮಾರಂಭವನ್ನು ಆಧ್ಯಾತ್ಮಿಕವಾಗಿಸಿದವು. ಘಾಟ್‌ನಲ್ಲಿ ನೆರೆದಿದ್ದವರು ಪುಷ್ಪವೃಷ್ಟಿ ಸುರಿಸಿ ನವ ದಂಪತಿಯನ್ನು ಆಶೀರ್ವದಿಸಿದರು. ಅನೇಕ ದೇಶಿ ಮತ್ತು ವಿದೇಶಿ ಪ್ರವಾಸಿಗರು ಈ ಅದ್ಭುತ ಕ್ಷಣವನ್ನು ತಮ್ಮ ಕ್ಯಾಮರಾಗಳಲ್ಲಿ ಸೆರೆಹಿಡಿದರು. ಇದನ್ನು ಸಂಸ್ಕೃತಿಗಳ ಸಂಗಮ ಎಂದು ಬಣ್ಣಿಸಿದರು ಮತ್ತು ಈ ಕಾರ್ಯಕ್ರಮವು ಭಾರತೀಯ ಸಂಪ್ರದಾಯಗಳ ಜಾಗತಿಕ ಸ್ವೀಕೃತಿಯನ್ನು ಸಂಕೇತಿಸುತ್ತದೆ ಎಂದು ಹೇಳಿದರು.

Must Read