ಹೊಸದಿಗಂತ ವರದಿ, ಕಲಬುರಗಿ:
ಹೆಂಡತಿಯ ತಲೆ ಮೇಲೆ ಗಂಡ ಸಿಲಿಂಡರ್ ನ್ನು ಎತ್ತಿ ಹಾಕಿ ಭೀಕರವಾಗಿ ಕೊಲೆ ಮಾಡಿದ ಘಟನೆ ಕಲಬುರಗಿ ನಗರದ ಓಜಾ ಲೇಔಟ್ ನಲ್ಲಿ ನಡೆದಿದೆ.
ಆರತಿ ರಾಠೋಡ (28) ಕೊಲೆಯಾದ ಮಹಿಳೆ. ತಾರಾಸಿಂಗ್ ರಾಠೋಡ ಕೊಲೆ ಮಾಡಿದ ಆರೋಪಿ.
ಸಂಕ್ರಾಂತಿ ಹಬ್ಬಕ್ಕೆ ತವರು ಮನೆಗೆ ಹೋಗುವುದಾಗಿ ಹೆಂಡತಿ ಹೇಳಿಕೊಂಡಿದ್ದು, ಇದೇ ವಿಷಯವಾಗಿ ಗಂಡ ತನ್ನ ಹೆಂಡತಿಯನ್ನು ಕೊಲೆ ಮಾಡಿದ್ದಾನೆ ಎಂದು ತಿಳಿದುಬಂದಿದೆ.
ಕೊಲೆ ಮಾಡಿದ ಬಳಿಕ ಗಂಡ ತಾರಾಸಿಂಗ್ ರಾಠೋಡ ತಲೆ ಮರೆಸಿಕೊಂಡಿದ್ದು, ಕಲಬುರಗಿ ಖಾಸಗಿ ವಾಹನ ಚಾಲಕನಾಗಿ ಕೆಲಸ ಮಾಡುತ್ತಿದ್ದನು ಎಂಬ ಮಾಹಿತಿ ಲಭ್ಯವಾಗಿದೆ. ಕಲಬುರಗಿ ವಿಶ್ವವಿದ್ಯಾಲಯದ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.