Saturday, December 9, 2023

Latest Posts

ಲಾಂಗ್‌ ವೀಕೆಂಡ್‌ ಟ್ರಿಪ್ ಹೋಗೋ ಪ್ಲಾನ್‌ ಮಾಡಿದ್ದೀರಾ? ರಜಾ ದಿನಗಳ ಪಟ್ಟಿ ಹೀಗಿದೆ ನೋಡಿ..

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಹೊಸ ವರ್ಷ ಪ್ರಾರಂಭವಾಗುತ್ತಿದ್ದಂತೆ ವೆಕೇಷನ್‌ ಹೋಗೋಕೆ ಕಾಯ್ತಾ ಇರ್ತೀವಿ. ಈ ವರ್ಷವಾದರೂ ಎಲ್ಲಾದರೂ ಲಾಂಗ್‌ ವೀಕೆಂಡ್‌ ಹೋಗೋ ಪ್ಲಾನ್‌ ಮಾಡಿದ್ದೀರಾ? ಹಾಗಿದ್ರೆ ಈ ವರ್ಷದಲ್ಲಿ ನಿಮಗೆ ಹೆಚ್ಚು ವೀಕೆಂಡ್‌ ರಜೆಗಳಿವೆ…

ಜನವರಿ: ಮಕರ ಸಂಕ್ರಾಂತಿ ಪ್ರಯುಕ್ತ ಇಂದಿನಿಂದ ಇನ್ನು ಮೂರು ದಿನ ಸಾಲು ರಜೆ ಇದೆ. ಸಣ್ಣ ಟ್ರಿಪ್‌ ಮಾಡೋಕೆ ಇದು ಒಳ್ಳೆ ಟೈಮ್.‌

ಫೆಬ್ರವರಿ: ಒಂದು ದಿನ ರಜೆ ಮಾಡಿದರೆ ಸಾಕು ಉಳಿದ ಮೂರು ದಿನ ಸೇರಿ ಫೆ.೨೮ರಿಂದ ಮಾ.೧ರವರೆಗೆ ನಾಲ್ಕು ದಿನ ಎಂಜಾಯ್‌ ಮಾಡಬಹುದು.

ಮಾರ್ಚ್:‌ ಮಾ.೧೮ ಹೋಳಿ ಹಬ್ಬ ಹಾಗೂ ವೀಕೆಂಡ್‌ ಸೇರಿ ಮೂರು ದಿನ ಸಾಲು ರಜೆ ಸಿಗುತ್ತೆ.

ಏಪ್ರಿಲ್: ಅಂಬೇಡ್ಕರ್‌ ಜಯಂತಿ, ಗುಡ್‌ ಫ್ರೈಡೆ ಸೇರಿ ವೀಕೆಂಡ್‌ ಮಜಾ ಮಾಡಲೂ ಇದು ಬೆಸ್ಟ್‌ ಟೈಮ್.‌

ಮೇ: ಸಣ್ಣ ರಜೆಗಳು ಬಿಟ್ಟರೆ ಮೇ. 14ರಿಂದ ಬುದ್ಧ ಪೂರ್ಣಿಮೆ ಮೇ.16ರವರೆಗೆ ಮೂರು ದಿನ ರಜೆ.

ಜೂನ್‌ : ಈ ತಿಂಗಳು ಯಾವುದೇ ರಜೆ ಇರುವುದಿಲ್ಲ.

ಜುಲೈ: ತಿಮಗಳ ಮೊದಲ ದಿನ ಶುಕ್ರವಾರ ರಜೆ ಮಾಡಿದರೆ ವೀಕೆಂಡ್‌ ಸೇರಿ ಮೂರು ದಿನ ಟ್ರಿಪ್‌ ಹೋಗಬಹುದು.

ಆಗಸ್ಟ್:‌ ಆಗಸ್ಟ್‌ 12 ರಿಂದ ಪ್ರಾರಂಭವಾಗಿ 5 ದಿನ ಸಾಲು ರಜೆ ಸಿಗಲಿದೆ. ಆ.12 ರಜರ ಮಾಡಿದರೆ, ಸ್ವಾತಂತ್ರ್ಯ ದಿನಾಚರಣೆ, ಕೃಷ್ಣ ಜನ್ಮಾಷ್ಣಮಿ ನಂತರ ವೀಕೆಂಡ್‌ ಹೀಗೆ 5 ದಿನಗಳ ರಜೆ ಎಂಜಾಯ್‌ ಮಾಡಿ.

ಸೆಪ್ಟೆಂಬರ್:‌ ಸೆ.8ಕ್ಕೆ ಓಣಂ ರಜೆ, ಸೆ.9ಕ್ಕೆ ರಜೆ ಹಾಕಿದರೆ ನಾಲ್ಕು ದಿನಗಳ ಲಾಂಗ್‌ ಹಾಲಿಡೇ ಸಿಗುತ್ತದೆ.

ಅಕ್ಟೋಬರ್:‌  ಅಕ್ಟೋಬರ್‌ ನಲ್ಲಿ ದಸರ ರಜೆಗೆ ಹೊಂದುವ ಹಾಗೆ ಒಂದೆರಡು ದಿನ ರಜೆ ಮಾಡಿದರೆ ಫ್ಯಾಮಿಲಿ ಜತೆ ಸಮಯ ಕಳೆಯೋಕೆ ಒಳ್ಳೆ ಸಮಯ.

ನವೆಂಬರ್:‌ ಗುರುನಾನಕ್‌ ಜಯಂತಿ ನಂತರ ಎರಡು ದಿನ ರಜೆ ಹಾಕಿದರೆ ವೀಕೆಂಡ್‌ ಜತೆಜತೆಗೆ ನಾಲ್ಕು ದಿನದ ಹಾಲಿಡೇ ಪ್ಲಾನ್‌ ಮಾಡಬಹುದು.

ಡಿಸೆಂಬರ್:‌ ಈ ವರ್ಷ ಕ್ರಿಸ್ ಮಸ್‌ ಕೂಡ ಭಾನುವಾರವೇ ಬಂದಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!