September 22, 2026
Tuesday, September 22, 2026
spot_img

VIRAL | ಬ್ಯಾಕ್‌ಲೆಸ್‌ ಬಟ್ಟೆ ತೊಟ್ಟು ರೀಲ್ಸ್‌ ಮಾಡ್ತಿದ್ದ ಪತ್ನಿ ಪಿಂಡದಾನ ಮಾಡಿದ ಪತಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಸಾಮಾಜಿಕ ಜಾಲತಾಣಗಳಲ್ಲಿ ಮನ್ನಡೆ ಪಡೆಯೋದಕ್ಕೋ, ಹೆಚ್ಚು ಲೈಕ್ಸ್‌ಗಾಗಿಯೋ ಅಥವಾ ನನ್ನ ದೇಹ ನನ್ನಿಷ್ಟ ಎನ್ನುವ ಕಾರಣಕ್ಕೋ ಜನ ರೀಲ್ಸ್‌ ಮಾಡುತ್ತಾರೆ. ಇಲ್ಲೊಬ್ಬ ಪತ್ನಿ ಬ್ಯಾಕ್‌ಲೆಸ್‌ ಬಟ್ಟೆಗಳನ್ನು ಹಾಕಿಕೊಂಡು ರೀಲ್ಸ್‌ ಮಾಡಿದ್ದಾರೆ. ಇದರಿಂದ ಬೇಸತ್ತ ಪತಿ ಆಕೆ ತನ್ನ ಪಾಲಿಗೆ ಸತ್ತುಹೋದ್ಲು ಎಂದು ಪಿಂಡದಾನ ಮಾಡಿದ್ದಾರೆ. ಈ ವಿಡಿಯೋ ಎಲ್ಲೆಡೆ ವೈರಲ್‌ ಆಗಿದೆ.

ಹೇಮಾಚೌಧರಿ ಎನ್ನುವ ರೀಲ್ಸ್‌ ಸ್ಟಾರ್‌ ಪತಿ ಈ ರೀತಿ ಪಿಂಡದಾನ ಮಾಡಿದ್ದಾರೆ. ಸಂಸಾರದ ಕಡೆಗೆ ಗಮನ ಕೊಡು, ರೀಲ್ಸ್‌ ಮಾಡೋದನ್ನು ನಿಲ್ಲಿಸು ಎಂದು ಪತಿ ಲಕ್ಷ ಬಾರಿ ಹೇಳಿದ್ದರೂ ಹೇಮಾ ನಿಲ್ಲಿಸಿರಲಿಲ್ಲ. ಇದರಿಂದ ಬೇಸತ್ತ ಪತಿ ಆಕೆಯ ಹೆಸರಿನಲ್ಲಿ ಪಿಂಡಪ್ರದಾನ ಮಾಡಿದ್ದಾರೆ.

ಅರೆಬರೆ ಬಟ್ಟೆ ತೊಟ್ಟು ರೀಲ್ಸ್‌ ಮಾಡಿ, ಬರುವ ಕಮೆಂಟ್‌ಗಳನ್ನು ಎಂಜಾಯ್‌ ಮಾಡ್ತಿದ್ದ ಹೇಮಾರ ಫೋಟೊ ಸಹಿತ ಪತಿ ಹರಿದ್ವಾರಕ್ಕೆ ತೆರಳಿ ಪಿಂಡಪ್ರದಾನ ಮಾಡಿದ್ದಾರೆ.

ಈ ಪ್ರಕ್ರಿಯೆಯ ಫೋಟೊ, ವಿಡಿಯೋ ಪೋಸ್ಟ್‌ ಮಾಡಿ, ಪತ್ನಿ ನನಗೆ ಸತ್ತಂತೆ ಎನ್ನುವ ಸಂದೇಶವನ್ನು ರವಾನೆ ಮಾಡಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !