ಹೊಸದಿಗಂತ ಡಿಜಿಟಲ್ ಡೆಸ್ಕ್:
ಮದುವೆ ಸಂದರ್ಭದಲ್ಲಿ ಕೇಕ್ ಕತ್ತರಿಸೋದು ಈಗಿನ ಟ್ರೆಂಡ್ ಆಗಿದೆ. ಹೀಗೆ ಕೇಕ್ ವಿಚಾರದಲ್ಲಿ ನಡೆದ ಗಲಾಟೆಯಿಂದಾಗಿ ಮದುವೆಯೃ ರದ್ದಾಗಿರುವ ಸುದ್ದಿಯೊಂದು ಸಾಮಾಜಿಕ ಜಾಲತಾಣದಲ್ಲಿ ಸಖತ್ ಸದ್ದು ಮಾಡುತ್ತಿದೆ.
ನವವಧು ರೆಡ್ಡಿಟ್‌ನಲ್ಲಿ ತನ್ನ ಮದುವೆಯನ್ನು ರದ್ದುಗೊಳಿಸಲು ಕಾರಣಗಳನ್ನು ಹಂಚಿಕೊಂಡಿದ್ದಾರೆ. ಕೇಕ್ ಕತ್ತರಿಸುವಾಗ ಪತಿ ತನ್ನ ಮುಖಕ್ಕೆ ಬಲವಂತವಾಗಿ ಕೇಕ್ ಹಚ್ಚಿದ್ದುಮ ಇದರಿಂದ ನನ್ನ ಮೇಕಪ್, ಕೂದಲು, ಬಟ್ಟೆ ಎಲ್ಲವನ್ನೂ ಹಾಳುಮಾಡಿದ್ದಲ್ಲದೆ, ನನ್ನ ಆತ್ಮವಿಶ್ವಾಸವನ್ನು ಕುಗ್ಗಿಸಿದ್ದಾರೆಂದು ಯುವತಿ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ. ವರನ ನಡವಳಿಕೆ ಇಷ್ಟವಾಗದ ಕಾರಣ ಸ್ಥಳದಲ್ಲಿಯೇ ತನಗೆ ಈ ಮದುವೆ ಇಷ್ಟವಿಲ್ಲ ಎಂದು ಹೇಳಿದರು.
ತನಗೆ 17 ವರ್ಷದವಳಿದ್ದಾಗ ತನ್ನ ಹುಟ್ಟುಹಬ್ಬದಂದು ನಡೆದ ಅವಘಡದಿಂದಾಗಿ ತಲೆಗೆ ಪೆಟ್ಟಾಗಿ ಆಸ್ಪತ್ರೆ ಪಾಲಾಗಬೇಕಾಯ್ತು. ಈ ವಿಚಾಋ ಮೊದಲೇ ಹುಡುಗನಿಗೆ ತಿಳಿಸಿದರೂ ಗಂಭೀರವಾಗಿ ಪರಿಗಣಿಸದೆ ಕುಚೇಷ್ಟೆ ಮಾಡಿದ್ದಾನೆ. ತಮಾಷೆ ಸ್ವಲ್ಪ ಸೀರಯಸ್ ಆಗಿ ಇದೀಗ ಮದುವೆಯೇ ಮುರಿದುಬಿದ್ದಿದೆ.
ರೆಡ್ಡಿಟ್ ಬಳಕೆದಾರರು ಮಹಿಳೆಯ ನಿರ್ಧಾರವನ್ನು ಬೆಂಬಲಿಸಿದ್ದಾರೆ. ಇಷ್ಟ ಪಡದ ವಿಷಯವನ್ನು ಮೊದಲೇ ಹೇಳಿದರೂ ಆತ ಕೇಳಲಿಲ್ಲ ಎಂದ ಮೇಲೆ ಜೀವನ ಪರ್ಯಂತ ಅಂಥವನ ಜೊತೆ ನಡೆಯಲು ಸಾಧ್ಯವಿಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸದ್ಯ ಈ ಪೋಸ್ಟ್ ವೈರಲ್ ಆಗಿದೆ.