ಹೊಸದಿಗಂತ ಡಿಜಿಟಲ್ ಡೆಸ್ಕ್:
ದಶಕಗಳಿಂದ ಸಿನಿಮಾ ಇಂಡಸ್ಟ್ರಿಯಲ್ಲಿ ಇದ್ದರೂ ನಟಿ ನಯನತಾರ ಎಂದೂ ಬಾಲಿವುಡ್‌ಗೆ ಕಾಲಿಟ್ಟಿರಲಿಲ್ಲ.
ಇದೀಗ ಶಾರುಖ್ ಖಾನ್ ನಟನೆಯ ಜವಾನ್‌ನಲ್ಲಿ ನಯನತಾರಾ ನಟಿಸಿದ್ದು, ಇನ್ಮುಂದೆ ಇಂಥ ನಿರ್ಧಾರ ತೆಗೆದುಕೊಳ್ಳೋದಿಲ್ಲ ಎಂದಿದ್ದಾರಂತೆ!
ಹೌದು, ಅಟ್ಲೀ ಹಾಗೂ ಶಾರುಖ್ ಖಾನ್ ನಯನತಾರಾ ಪಾತ್ರಕ್ಕೆ ಪ್ರಾಮುಖ್ಯತೆ ಕೊಟ್ಟಿಲ್ಲ. ದೀಪಿಕಾ ಪಡುಕೋಣ್ ಪಾತ್ರವನ್ನು ಹೈಲೈಟ್ ಮಾಡಿದ್ದಾರೆ ಎನ್ನೋದು ನಯನತಾರಾ ವಾದವಾಗಿದೆಯಂತೆ.
ಜವಾನ್ ಸಿನಿಮಾಕ್ಕೆ ನಯನತಾರಾ ಹೀರೋಯಿನ್, ದೀಪಿಕಾ ವಿಶೇಷ ಪಾತ್ರದಲ್ಲಿ ಮಿಂಚಿದ್ದಾರೆ. ಆದರೆ ವಿಶೇಷ ಪಾತ್ರವೇ ಮುಖ್ಯ ಪಾತ್ರವಾಗಿದೆ, ಸಾಕಷ್ಟು ಸೀನ್‌ಗಳಿಗೆ ಕತ್ತರಿ ಹಾಕಲಾಗಿದೆ ಎಂದು ನಯನತಾರಾ ಹೇಳಿದ್ದಾರೆ ಎನ್ನಲಾಗಿದೆ. ಒಟ್ಟಾರೆ ಈ ಬಗ್ಗೆ ನಯನತಾರಾ ಖುದ್ದು ಮಾತನಾಡಿದರೆ ಸತ್ಯಾಸತ್ಯತೆ ತಿಳಿಯಲಿದೆ.
ಇದೇ ಕಾರಣದಿಂದಾಗಿ ನಯನತಾರಾ ಸಕ್ಸಸ್ ಇವೆಂಟ್‌ನಲ್ಲಿಯೂ ಕಾಣಿಸಿಲ್ಲ ಎನ್ನಲಾಗಿದೆ.