ಕತ್ರಿನಾ ಕೈಫ್ ಪ್ರೆಗ್ನೆನ್ಸಿ ವದಂತಿ ಕುರಿತು ಪತಿ ವಿಕ್ಕಿ ಕೌಶಲ್ ಕೊಟ್ರು ರಿಯಾಕ್ಷನ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಾಲಿವುಡ್ ನಟಿ ಕತ್ರಿನಾ ಕೈಫ್ ಗರ್ಭಿಣಿ ಎಂಬ ವದಂತಿಗಳು ಹಬ್ಬಿತ್ತು. ಕೊನೆಗೂ ವಿಕ್ಕಿ ಕೌಶಲ್ ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.

ನಟ,ದೆಹಲಿಯಲ್ಲಿ ತನ್ನ ಮುಂಬರುವ ಚಲನಚಿತ್ರ ಬ್ಯಾಡ್ ನ್ಯೂಜ್‌ನ ಪ್ರಚಾರ ಕಾರ್ಯಕ್ರಮವೊಂದರಲ್ಲಿ, ಕತ್ರಿನಾ ಗರ್ಭಿಣಿಯಾಗಿಲ್ಲ ಎಂದು ದೃಢಪಡಿಸಿದರು. ಒಂದು ವೇಳೆ ನಟಿ ಪ್ರಗ್ನೆಂಟ್‌ ಆದರೆ ಆ ಒಳ್ಳೆಯ ಸುದ್ದಿಯನ್ನು ಶೇರ್‌ ಮಾಡಿಕೊಳ್ಳುತ್ತೇನೆ ಎಂದರು.

ವಿಕ್ಕಿ ಕೌಶಲ್ ಮತ್ತು ಕತ್ರಿನಾ ಕೈಫ್ ಲಂಡನ್‌ನಲ್ಲಿ ವಕೇಶನ್‌ ಮೂಡ್‌ನಲ್ಲಿದ್ದರು. ಈ ವೇಳೆ ಕತ್ರಿನಾ ಪ್ರಗ್ನೆಂಟ್‌ ಅಂತೆ ಕಂಡಿದ್ದರು. ಕತ್ರಿನಾ ಕೈಫ್ ಅವರು ಕಪ್ಪು ಬಣ್ಣದ ಬ್ಲೇಜರ್ ಹಾಕಿದ್ದರು. ಅವರ ಹೊಟ್ಟೆ ಉಬ್ಬಿದಂತೆ ಕಾಣಿಸಿತ್ತು. ಅವರ ಅಭಿಮಾನಿಗಳಿಗೆ ಇದರಿಂದ ಅನೇಕರು ಈ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರು.

ʻಜೀ ಲೆ ಜರಾ’ ಚಿತ್ರದ ಶೂಟಿಂಗ್ ಮುಗಿದ ನಂತರ ನಾನು ಮತ್ತು ವಿಕ್ಕಿ ಮೊದಲ ಮಗುವನ್ನು ಹೊಂದಲಿದ್ದೇವೆ ಎಂದು ಕತ್ರಿನಾ ತನ್ನ ಸ್ನೇಹಿತರಿಗೆ ಹೇಳಿರುವುದಾಗಿ ಮಾಧ್ಯಮವೊಂದು ಈ ಹಿಂದೆ ವರದಿ ಮಾಡಿತ್ತು. ‘ನಾನು ವಿಜಯ್ ಸೇತುಪತಿ ಮತ್ತು ಫರ್ಹಾನ್ ಅಖ್ತರ್ ಅವರೊಂದಿಗೆ ಮಾಡುತ್ತಿರುವ ಚಿತ್ರಗಳ ಶೂಟಿಂಗ್ ಮುಗಿಸಿದ ನಂತರವೇ ಮಗುವನ್ನು ಯೋಜಿಸುತ್ತೇನೆ’ ಎಂದು ಕತ್ರಿನಾ ತಮ್ಮ ಸ್ನೇಹಿತರಿಗೆ ಹೇಳಿದ್ದರು ಎಂಬ ಸುದ್ದಿ ಹರಿದಾಡುತ್ತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!