ಹೊಸದಿಗಂತ ವರದಿ ವಿಜಯಪುರ:
ಕೌಟುಂಬಿಕ ಕಲಹದ ಹಿನ್ನೆಲೆ ಹೆಂಡತಿಯನ್ನು ಹತ್ಯೆ ಮಾಡಿ ಗಂಡ ನೇಣಿಗೆ ಶರಣಾಗಿರುವ ಘಟನೆ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಗೆದ್ದಲಮರಿ ಗ್ರಾಮ ಹೊರ ಭಾಗದ ತೋಟದ ಮನೆಯಲ್ಲಿ ನಡೆದಿದೆ.
ಇಲ್ಲಿನ ಮೇಘಾ ಸಿದ್ದಪ್ಪ ಹರನಾಳ (26), ಸಿದ್ದಪ್ಪ ಮಲ್ಲಪ್ಪ ಹರನಾಳ (32) ಮೃತಪಟ್ಟ ದಂಪತಿ. ಹೆಂಡತಿ ಮೇಘಾ ಸಿದ್ದಪ್ಪ ಹರನಾಳ ಎಂಬವಳನ್ನು ಹತ್ಯೆ ಮಾಡಿ, ಜಮೀನು ಪಕ್ಕದ ತೆಗ್ಗಿನಲ್ಲಿ ಬಿಸಾಕಿದ ಗಂಡ ಸಿದ್ದಪ್ಪ ಮಲ್ಲಪ್ಪ ಹರನಾಳ ತಾನೂ ಹತ್ತಿರದ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಹೊಲದಲ್ಲಿ ಯಾರೂ ಇಲ್ಲದ ವೇಳೆ ಗಂಡ ಹೆಂಡತಿ ಮಧ್ಯೆ ಕಲಹ ಉಂಟಾಗಿ, ಈ ದುರ್ಘಟನೆ ನಡೆದಿದೆ. ಸ್ಥಳಕ್ಕೆ ಪೋಲಿಸರ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಮುದ್ದೇಬಿಹಾಳ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.