ಪತಿಯ ಅಕ್ರಮ ಸಂಬಂಧ, ಕ್ರಿಕೆಟ್ ಬೆಟ್ಟಿಂಗ್‌ಗೆ ನೊಂದ ಪತ್ನಿ, ಮಕ್ಕಳು ವಿಷ ಸೇವಿಸಿ ಆತ್ಮಹತ್ಯೆ

ಹೊಸದಿಗಂತ ವರದಿ,ನಾಗಮಂಗಲ :

ಕ್ರಿಕೆಟ್ ಬೆಟ್ಟಿಂಗ್, ಪರಸ್ತ್ರೀ ಜೊತೆ ಮೋಜಿನಿಂದ ಸಾಲದ ಸುಳಿಗೆ ಸಿಲುಕಿದ್ದ ಪತಿಯೊಬ್ಬ ಹೆಂಡತಿ ಮತ್ತು ಇಬ್ಬರು ಮಕ್ಕಳಿಗೆ ವಿಷ ವುಣಿಸಿ ಕೊಲೆಗೈದು ತಾನು ಸಹ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಪಟ್ಟಣದಲ್ಲಿ ನಡೆದಿದೆ.

ಪಟ್ಟಣದ ಎಂಟನೇ ವಾರ್ಡ್‌ನ ಪೇಟೆ ಹೊಲ ರಸ್ತೆಯ ನಿವಾಸಿ ನರಸಿಂಹ ಅವರ ಪತ್ನಿ ಕೀರ್ತನ (23) ಮಕ್ಕಳಾದ ಜಯಸಿಂಹ (4) ಮತ್ತು ಒಂದೂವರೆ ವರ್ಷದ ರಿಷಿಕಾ ಸಾವನ್ನಪ್ಪಿದ್ದು, ನರಸಿಂಹನನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ತಾಲೂಕಿನ ತೆಂಗಿನಭಾಗ ಗ್ರಾಮದ ಸ್ವಾಮಿ ಅವರ ಪುತ್ರ ನರಸಿಂಹ ಕಟಿಂಗ್ ಶಾಪ್ ಅಂಗಡಿ ಇಟ್ಟುಕೊಂಡು ಜೀವನ ಮಾಡುತ್ತಿದ್ದನು. ಮಂಡ್ಯ ತಾಲೂಕಿನ ಬಸರಾಳು ಸಮೀಪದ ಕಂಬದಹಳ್ಳಿ ಗ್ರಾಮದ ಕೀರ್ತನಳನ್ನು ಮದುವೆಯಾಗಿದ್ದು, ದಂಪತಿಗೆ ಮುದ್ದಾದ ಎರಡು ಮಕ್ಕಳು ಇದ್ದವು.

ಪರಸ್ತ್ರೀ ಜೊತೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದ ಈತ ಕ್ರಿಕೆಟ್ ಬೆಟ್ಟಿಂಗ್‌ನಿಂದ ಲಕ್ಷಾಂತರ ರೂ ಸಾಲ ಮಾಡಿಕೊಂಡಿದ್ದನು, ಈ ಹಿನ್ನೆಲೆಯಲ್ಲಿ ಪತ್ನಿಗೆ ಹಣ ತರುವಂತೆ ಪೀಡಿಸುತ್ತಿದ್ದು ನ್ಯಾಯ ಪಂಚಾಯಿತಿ ನಡೆಸಿ ಹಣವನ್ನು ನೀಡಲಾಗಿತ್ತು, ಆದರೂ ಸಹ ಈತ ಬದಲಾಗಿರಲಿಲ್ಲ, ಐಪಿಎಲ್ ಪಂದ್ಯಾವಳಿ ಆರಂಭಗೊಂಡ ನಂತರ ಬೆಟ್ಟಿಂಗ್‌ನಲ್ಲಿ ಹೆಚ್ಚು ಹಣ ಕಳೆದುಕೊಂಡಿದ್ದನು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!