ಹಾಸನ ಜಿಲ್ಲೆಯಲ್ಲಿ ತಂಪೆರೆದ ವರ್ಷಧಾರೆ: ಜನತೆ ಖುಷ್

ಹೊಸದಿಗಂತ ವರದಿ,ಹಾಸನ :

ಜಿಲ್ಲೆಯ ವಿವಿಧ ಭಾಗಗಳಲ್ಲಿ ಗುರುವಾರ ಸಂಜೆ ವರ್ಷದ ಮೊದಲ ಮಳೆ ಸುರಿದಿದೆ. ಬಿಸಿಲಿನ ಝಳಕ್ಕೆ ಬಸವಳಿದಿದ್ದ ಜನರಿಗೆ ಹಾಗೂ ಭೂಮಿಗೆ ವರ್ಷಧಾರೆ ತಂಪೆರೆದಿದೆ.

ಜಿಲ್ಲೆಯ ಬೇಲೂರು, ಆಲೂರು ಸೇರಿದಂತೆ ಇತರೆಡೆ ಅರ್ಧಗಂಟೆಗೂ ಹೆಚ್ಚು ಕಾಲ ಉತ್ತಮವಾಗಿ ಮಳೆ ಸುರಿದಿದೆ. ಕೆಲವು ಕಡೆ 20 ನಿಮಿಷದಿಂದ 45 ನಿಮಿಷಗಳವರೆಗೂ ಮಳೆಯಾಗಿದೆ.
ಜಿಲ್ಲಾ ಕೇಂದ್ರದಲ್ಲಿ ಮಧ್ಯಾಹ್ನದಿಂದಲೇ ಮೋಡ ಕವಿದ ವಾತಾವರಣ ಇತ್ತು. ಆದರೂ ಸಹ ಮಳೆಯಾಗಲಿಲ್ಲ.

ಗುಡುಗು, ಮಿಂಚಿನ ಸುಳಿವಿಲ್ಲದೆ ಬಂದ ಮಳೆರಾಯನ ಆರ್ಭಟಕ್ಕೆ ಬೇಲೂರು ಆಲೂರು ನಗರದ ಪ್ರಮುಖ ರಸ್ತೆಗಳ ಮೇಲೆ ನೀರು ಹರಿಯಿತು. ದಿಢೀರ್‌ ಆಗಿ ಸುರಿದ ಮಳೆಯಿಂದಾಗಿ ಜನರ ಓಡಾಟಕ್ಕೆ ತೊಂದರೆಯಾಯಿತು. ಪಾದಚಾರಿಗಳು ಹಾಗೂ ದ್ವಿಚಕ್ರ ವಾಹನ ಸವಾರರು ಮಳೆಯಿಂದ ರಕ್ಷಣೆ ಪಡೆಯಲು ಪರದಾಡಿದರು.

ಕೃಷಿಕರು ಅಕಾಲಿಕ ಮಳೆಯ ಆಗಮನದಿಂದ ಮುಂಬರುವ ದಿನಗಳಲ್ಲಿ ತಾಪಮಾನ ಹೆಚ್ಚಾಗುವ ಆತಂಕ ವ್ಯಕ್ತಪಡಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!