ಪ್ರಿಯಕರನ ಸಹಾಯದಿಂದ ಪತಿಯ ಹತ್ಯೆಗೈದ ಪತ್ನಿ: ಇಬ್ಬರ ಬಂಧನ

ಹೊಸದಿಗಂತ ವರದಿ,ಮಡಿಕೇರಿ:

ಪ್ರಿಯಕರನ ಸಹಾಯದಿಂದ ಪತಿಯನ್ನು ಹತ್ಯೆಗೈದ ಆರೋಪದಡಿ ಓರ್ವ ಮಹಿಳೆ ಹಾಗೂ ಆಕೆಯ ಪ್ರಿಯಕರನನ್ನು ಹಾಸನ ಜಿಲ್ಲೆಯ ಎಸಳೂರು ಪೊಲೀಸರು ಯಶಸ್ವಿಯಾಗಿದ್ದಾರೆ.
ಕೊಡಗು ಜಿಲ್ಲೆಯ ಸೋಮವಾರಪೇಟೆ ಪಟ್ಟಣದ ತ್ಯಾಗರಾಜ ಕಾಲೋನಿ ನಿವಾಸಿ ಚಂದ್ರಶೇಖರ್ ಚಂದ್ರಶೇಖರ್ ಹಾಗೂ ಆತನ ಪ್ರಿಯತಮೆ ಶ್ರುತಿ ಬಂಧಿತರು.
ಶ್ರುತಿಗೂ ಸೋಮವಾರಪೇಟೆ ತ್ಯಾಗರಾಜ ಕಾಲೋನಿಯ ನಿವಾಸಿ ಚಂದ್ರಶೇಖರ್’ಗೂ ಅನೈತಿಕ ಸಂಬಂಧವಿತ್ತು. ಇದು ಆಕೆಯ ಗಂಡ ಸಂತೋಷ್’ಗೆ ಗೊತ್ತಾದರೆ ತೊಂದರೆಯಾಗುತ್ತದೆ ಎಂಬ ಹಿನ್ನಲೆಯಲ್ಲಿ ಶ್ರುತಿ ಮತ್ತು ಚಂದ್ರಶೇಖರ್ ಸೇರಿ ಸಂತೋಷ್’ನನ್ನು ಕಳೆದ ಡಿ. 26ರ ರಾತ್ರಿ ಕೊಲೆ ಮಾಡಿದ್ದರು. ಬಳಿಕ ಸಕಲೇಶಪುರ ತಾಲೂಕಿನ ಎಸಳೂರು ಪೊಲೀಸ್ ಠಾಣೆಗೆ ತೆರಳಿ ಮರಡಿ ಕೆರೆ ಗ್ರಾಮದ ಬಳಿ ಗಂಡ ಓಡಿಸುತ್ತಿದ್ದ ಬೈಕ್’ಗೆ ಅಪರಿಚಿತ ವಾಹನ ಡಿಕ್ಕಿ ಹೊಡೆದು ಗಂಡ ಸಂತೋಷ್ ಸ್ಥಳದಲ್ಲಿಯೇ ಮೃತಪಟ್ಟಿರುವುದಾಗಿ ಶ್ರುತಿ ದೂರು ನೀಡಿದ್ದಳು.
ಆದರೆ ಶವದ ಮಹಜರು ನಡೆಸಿ, ಮರಣೋತ್ತರ ಪರೀಕ್ಷೆ ನಡೆಸಿದ ವೇಳೆ ಮೈಮೇಲೆ ಯಾವುದೇ ರೀತಿಯ ಗಾಯಗಳು ಕಂಡು ಬರದ ಹಿನ್ನೆಲೆಯಲ್ಲಿ
ಅನುಮಾನಗೊಂಡ ಪೊಲೀಸರು ಶ್ರುತಿಯನ್ನು ತೀವ್ರ ವಿಚಾರಣೆಗೆ ಒಳಪಡಿಸಿದಾಗ, ಪ್ರಿಯಕರ ಚಂದ್ರಶೇಖರ್’ನೊಂದಿಗಿನ ಅನೈತಿಕ ಸಂಬಂಧಕ್ಕೆ ಗಂಡ ಸಂತೋಷ್ ಅಡ್ಡಿಯಾಗಬಹುದೆಂಬ ಉದ್ದೇಶದಿಂದ ಕೊಲೆ ಮಾಡಿರುವುದಾಗಿ ಆಕೆ ಒಪ್ಪಿಕೊಂಡಿದ್ದಾಳೆ. ಇದೀಗ ಪೊಲೀಸರು ಶ್ರುತಿ ಮತ್ತು ಪ್ರಿಯಕರ ಚಂದ್ರಶೇಖರ್’ನನ್ನು ಬಂಧಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!