Tuesday, March 28, 2023

Latest Posts

VIRAL VIDEO| ಪಿಜ್ಜಾ-ಬರ್ಗರ್ ತಿನ್ನುತ್ತಿದ್ದವರಿಗೆ ಶಾಕ್: ಈ ಪ್ರಾಣಿ ಕಾಟಕ್ಕೆ ಗ್ರಾಹಕರು ಸುಸ್ತೋ ಸುಸ್ತು!

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ತೆಲಂಗಾಣದಿಂದ ವರದಿಯಾಗಿರುವ ಆಘಾತಕಾರಿ ಘಟನೆಯೊಂದರಲ್ಲಿ, ಜನಪ್ರಿಯ ರೆಸ್ಟೋರೆಂಟ್ ಮೆಕ್‌ಡೊನಾಲ್ಡ್‌ನಲ್ಲಿ ಇಲಿಯ ಕಾಟಕ್ಕೆ ಗ್ರಾಹಕರು ಬೇಸ್ತು ಬಿದ್ದಿದ್ದಾರೆ. 8 ವರ್ಷದ ಬಾಲಕ ತನ್ನ ಹೆತ್ತವರೊಂದಿಗೆ ಕುಳಿತು ತಿಂಡಿ ಸವಿಯುತ್ತಿದ್ದಾಗ ಇಲಿ ಕಚ್ಚಿದೆ.

ಇಲಿ ವಾಶ್‌ರೂಮ್‌ನಿಂದ ರೆಸ್ಟೋರೆಂಟ್‌ನ ಕುಳಿತುಕೊಳ್ಳುವ ಪ್ರದೇಶಕ್ಕೆ ನುಗ್ಗಿದೆ. ಘಟನೆ ನಡೆದಾಗ 8 ವರ್ಷದ ಮಗು ತನ್ನ ಪೋಷಕರ ಜೊತೆಗಿದ್ದ. ಇಲಿಯು ಬಾಲಕನ ಶಾರ್ಟ್ಸ್ ಮೇಲೆ ಏರುತ್ತಿದ್ದಂತೆ, ಅವನ ತಂದೆ ಅವನನ್ನು ರಕ್ಷಿಸಲು ಮಗುವಿನ ಶಾರ್ಟ್ಸ್‌ನಿಂದ ಇಲಿಯನ್ನು ತೆಗೆದು ಎಸೆದರು.

ಮಾರ್ಚ್ 8 ರಂದು ನಡೆದ ಘಟನೆ ರೆಸ್ಟೋರೆಂಟ್‌ನ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಘಟನೆ ನಡೆದ ಕೂಡಲೇ ಬಾಲಕನ ಪೋಷಕರು ಆತನನ್ನು ಬೋವೆನಪಲ್ಲಿಯ ಆಸ್ಪತ್ರೆಗೆ ಕರೆದೊಯ್ದು ಸಂತ್ರಸ್ತರಿಗೆ ಟೆಟನಸ್ ಮತ್ತು ಆ್ಯಂಟಿ ರೇಬಿಸ್ ಡೋಸ್ ಕೊಡಿಸಿದ್ದಾರೆ.

ಮಾರ್ಚ್ 9 ರಂದು ರೆಸ್ಟೋರೆಂಟ್ ಆಡಳಿತದ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ಬಾಲಕನ ತಂದೆ, ಸೇನಾ ಅಧಿಕಾರಿಯಾಗಿದ್ದು, ರೆಸ್ಟೋರೆಂಟ್ ನಿರ್ವಹಣೆಯ ಕಡೆಯಿಂದ ನಿರ್ಲಕ್ಷ್ಯವನ್ನು ಆರೋಪಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!