ಪಾಕ್‌ನಿಂದ ಡ್ರೋನ್‌ನಲ್ಲಿ ಬಂದ ಮೂರು ಕೆಜಿ ಹೆರಾಯಿನ್ ವಶಪಡಿಸಿಕೊಂಡ ಬಿಎಸ್‌ಎಫ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪಂಜಾಬ್‌ನ ಅಮೃತ್‌ಸರ್ ಜಿಲ್ಲೆಯ ಅಜ್ನಾಲಾ ಉಪ ವಿಭಾಗದ ಧನೋ ಕಲಾನ್ ಬಳಿ ಪಾಕಿಸ್ತಾನದಿಂದ ಬಂದ ಡ್ರೋನ್ ಒಂದನ್ನು ಬಿಎಸ್‌ಎಫ್ ಸಿಬ್ಬಂದಿ ಹೊಡೆದುರುಳಿಸಿದ್ದಾರೆ.

ಗಡಿಭದ್ರತಾ ಸಿಬ್ಬಂದಿ ಡ್ರೋನ್ ಹೊಡೆದುರುಳಿಸಿದಾಗ ಅದರೊಳಗಿದ್ದ ಸರಕು ಕೆಳಗೆ ಬಿದ್ದಿದೆ. ಡ್ರೋನ್‌ನಲ್ಲಿ ಮೂರು ಕೆಜಿ ಹೆರಾಯಿನ್ ಲಭ್ಯವಾಗಿದ್ದು, ಬಿಎಸ್‌ಎಫ್ ಅದನ್ನು ವಶಕ್ಕೆ ಪಡೆದಿದ್ದಾರೆ.

ಬೆಳಗಿನ ಜಾವ ಮೂರು ಗಂಟೆ ಸುಮಾರಿಗೆ ಡ್ರೋನ್ ಸದ್ದು ಕೇಳಿಸಿದ್ದು, ತಕ್ಷಣವೇ ಸಿಬ್ಬಂದಿ ಗುಂಡು ಹಾರಿಸಿ ಅದನ್ನು ಕೆಳಗೆ ಬೀಳಿಸಿದ್ದಾರೆ. ನಂತರ ಹೆರಾಯಿನ್ ತುಂಬಿದ ಚೀಲ ಕೆಳಗೆ ಬಿದ್ದಿದ್ದು, ವಶಕ್ಕೆ ಪಡೆಯಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!