ಚೆನ್ನೈ ವಿರುದ್ಧ ಹೈದರಾಬಾದ್​ ಗೆ ಟೂರ್ನಿಯ ಮೊದಲ ಗೆಲುವು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ಸನ್​ರೈಸರ್ಸ್ ಹೈದರಾಬಾದ್​ ಆಲ್​ರೌಂಡ್​ ಪ್ರದರ್ಶನದಿಂದ ಚಾಂಪಿಯನ್​ ಚೆನ್ನೈ ಸೂಪರ್ ಕಿಂಗ್ಸ್​ವಿರುದ್ಧ ವಿಲಿಯಮ್ಸನ್ ಬಳಗಕೆಗೆ ಮೊದಲ ಜಯ ಸಿಕ್ಕಿದೆ.
ಮುಂಬೈನ ಡಿವೈ ಪಾಟೀಲ್ ಸ್ಟೇಡಿಯಂನಲ್ಲಿ ಟಾಸ್​ ಗೆದ್ದ ಸನ್​ರೈಸರ್ಸ್​​ ಹೈದರಾಬಾದ್ ತಂಡ ಸಿಎಸ್​ಕೆಗೆ ಬ್ಯಾಟಿಂಗ್ ಆಹ್ವಾನಿಸಿತು. ಆದರೆ, ಆರಂಭಿಕರಾದ ರಾಬಿನ್​ ಉತ್ತಪ್ಪ 15 ಮತ್ತು ಋತುರಾಜ್ ಗಾಯಕ್ವಾಡ್ 16 ರನ್​ಗಳಿಸಿ​ ಪವರ್​ ಪ್ಲೇ ಮುಗಿಯುವುದರೊಳಗೆ ಪೆವಿಲಿಯನ್​ಗೆ ಮರಳಿದರು.
3ನೇ ವಿಕೆಟ್​ಗೆ ಅಂಬಾಟಿ ರಾಯುಡು ಮತ್ತು ಮೊಯೀನ್ ಅಲಿ 54 ರನ್​ಗಳ ಜೊತೆಯಾಟ ನಡೆಸಿ ತಂಡವನ್ನು ಚೇತರಿಸಿಕೊಳ್ಳುವಂತೆ ಮಾಡಿದ್ರೂ, ತಂಡದ ಮೊತ್ತವನ್ನು ಹೆಚ್ಚಿಸುವಲ್ಲಿ ಈ ಜೋಡಿ ವಿಫಲವಾಯಿತು. ಜಡೇಜಾ 27 ಎಸೆತಗಳಲ್ಲಿ 27 ರನ್​ಗಳಿಸಿ ವಿಕೆಟ್​ ಒಪ್ಪಿಸಿದರೆ, ಅಲಿ 35 ಎಸೆತಗಳಲ್ಲಿ 2 ಸಿಕ್ಸರ್ ಮತ್ತು 3 ಬೌಂಡರಿ ಸಹಿತ 48 ರನ್​ಗಳಿಸಿ ತಂಡದ ಗರಿಷ್ಠ ಸ್ಕೋರರ್​ ಎನಿಸಿಕೊಂಡರು. ಜಡೇಜಾ ಕೊನೆಯಲ್ಲಿ ಒಂದೆರಡು ಅದ್ಭುತ ಬೌಂಡರಿಗಳ ಸಹಿತ 15 ಎಸೆತಗಳಲ್ಲಿ 23 ರನ್​ಗಳಿಸಿ ತಂಡದ ಮೊತ್ತವನ್ನು 150ರ ಗಡಿ ದಾಟಿಸಿದರು.
ಸಿಎಸ್​ಕೆ ನೀಡಿದ್ದ 155 ರನ್​ಗಳ ಗುರಿಯನ್ನು ಬೆನ್ನಟ್ಟಿದ ಸನ್​ರೈಸರ್ಸ್ ಹೈದರಾಬಾದ್​ ತಂಡ 17.4 ಓವರ್​ಗಳಲ್ಲಿ 2 ವಿಕೆಟ್ ಕಳೆದುಕೊಂಡು ಗೆಲುವಿನ ಗುರಿ ತಲುಪಿತು.
ಯುವ ಬ್ಯಾಟರ್​ ಅಭಿಷೇಕ್ ಶರ್ಮಾ ಮತ್ತು ನಾಯಕ ಕೇನ್ ವಿಲಿಯಮ್ಸನ್​ ಮೊದಲ ವಿಕೆಟ್​ಗೆ ಭರ್ಜರಿ ಆರಂಭ ನೀಡಿದರು. ಕೇನ್​ 40 ಎಸೆತಗಳಲ್ಲಿ 32 ರನ್​ಗಳಿಸಿದರೆ, ಅಭಿಷೇಕ್ ಶರ್ಮಾ 75 ರನ್​ಗಳಿಸಿದರು. 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಇಳಿದು ಅಬ್ಬರಿಸಿದ ರಾಹುಲ್ ತ್ರಿಪಾಠಿ ಕೇವಲ 15 ಎಸೆತಗಳಲ್ಲಿ 5 ಬೌಂಡರಿ ಮತ್ತು 2 ಸಿಕ್ಸರ್​ಗಳ ಸಹಿತ 39 ರನ್​ಗಳಿಸಿ ತಂಡವನ್ನು ಗೆಲುವಿನ ಗಡಿ ದಾಟಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!