ಖಾಸಗೀಕರಣಗೊಳ್ಳುತ್ತಾ ಭಾರತೀಯ ರೈಲ್ವೆ?: ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದೇನು?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ಭಾರತೀಯ ರೈಲ್ವೆಯನ್ನು ಖಾಸಗೀಕರಣಗೊಳಿಸುವ ಯಾವುದೇ ಉದ್ದೇಶವನ್ನು ಕೇಂದ್ರ ಸರ್ಕಾರ ಹೊಂದಿಲ್ಲ ಎಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಮತ್ತೊಮ್ಮೆ ಇಂದು ಪುನರುಚ್ಚರಿಸಿದ್ದಾರೆ.
ರೈಲ್ ಮಂಟಪದಲ್ಲಿ ಭಾರತೀಯ ರೈಲ್ವೇ ಮಜ್ದೂರ್ ಸಂಘದ (ಬಿಆರ್‌ಎಂಎಸ್) 20ನೇ ಅಖಿಲ ಭಾರತ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪ್ರಯಾಣಿಕರ ಆಕಾಂಕ್ಷೆಗಳನ್ನು ಪೂರೈಸಲು, ಪ್ರಯಾಣಿಕರ ಸುರಕ್ಷತೆ ಮತ್ತು ಸೌಕರ್ಯದ ವಿಷಯದಲ್ಲಿ ಇತ್ತೀಚಿನ ತಂತ್ರಜ್ಞಾನವನ್ನು ಸ್ವೀಕರಿಸುವ ಅಗತ್ಯವನ್ನು ತಿಳಿಸಿದರು.
ಕೇಂದ್ರ ಸರ್ಕಾರದ ಮೇಕ್ ಇನ್ ಇಂಡಿಯಾ ಉಪಕ್ರಮದ ಅಡಿಯಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್ ಅನ್ನು ಪೆರಂಬೂರಿನಲ್ಲಿ ಐಸಿಎಫ್ ವಿನ್ಯಾಸಗೊಳಿಸಿ, ತಯಾರಿಸಿದೆ.
ಒಟ್ಟ ವಿರೋಧ ಪಕ್ಷಗಳು ಪದೇಪದೆ ರೈಲ್ವೆಯನ್ನು ಖಾಸಗೀಕರಣಗೊಳಿಸುವ ಕ್ರಮವನ್ನು ವಿರೋಧಿಸುತ್ತಿವೆ. ಆದರೆ ರೈಲ್ವೇ ಒಂದು ದೊಡ್ಡ ಸಂಕೀರ್ಣ ಸಂಸ್ಥೆ . ಕೇಂದ್ರ ಸರ್ಕಾರದ ಮುಂದೆ ರೈಲ್ವೆಯನ್ನು ಖಾಸಗೀಕರಣಗೊಳಿಸುವ ಯಾವುದೇ ನೀತಿ ಇಲ್ಲ. ಅಂತಹ ಯಾವುದೇ ಯೋಜನೆಗಳೂ ಇಲ್ಲ ಎಂದು ಸಚಿವರು ಸ್ಪಷ್ಟಪಡಿಸಿದರು.
ನಮ್ಮ ಗುರಿ ಭಾರತೀಯ ರೈಲ್ವೆಗೆ ಉತ್ತಮವಾಗಿಸುವುದು ಮತ್ತು ಅದನ್ನು ಮುಂದಕ್ಕೆ ಕೊಂಡೊಯ್ಯಲು ಶ್ರಮಿಸುವುದು. ಅದು ಬಿಟ್ಟು ರೈಲ್ವೆಯ ಖಾಸಗೀಕರಣದ ಬಗ್ಗೆ ಯೋಚಿಸಿಲ್ಲಎಂದು ಅಶ್ವಿನಿ ವೈಷ್ಣವ್ ಹೇಳಿದ್ದಾರೆ.
ಈಗಾಗಲೇ ರೈಲ್ವೆಯನ್ನು ಖಾಸಗೀಕರಣಗೊಳಿಸುವ ಉದ್ದೇಶವನ್ನು ಕೇಂದ್ರ ಸರ್ಕಾರ ಹೊಂದಿಲ್ಲ ಎಂದು ಪ್ರಧಾನಿ ಮೋದಿ ಅವರು ಹೇಳಿದ್ದರು. ಅದನ್ನೇ ಅಶ್ವಿನಿ ವೈಷ್ಣವ್ ಪುನರುಚ್ಛರಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!