ಬ್ರೆಜಿಲ್‍ನಲ್ಲಿ ಹೈಡ್ರಾಮಾ: ಅಧಿಕಾರ ಕೊಡಿ ಎಂದು ಸಂಸತ್‌ ಭವನಕ್ಕೆ ನುಗ್ಗಿ ದಾಂಧಲೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬ್ರೆಜಿಲ್‍ನ ಚುನಾವಣೆ ಬಳಿಕ ಭಾರೀ ಹೈಡ್ರಾಮಾ ನಡೆದಿದ್ದು ಸೋತ ಮಾಜಿ ಅಧ್ಯಕ್ಷ ಜೈರ್ ಬೋಲ್ಸನೇರೋಬೆಂಬಲಿಗರು ಅಧಿಕಾರಕ್ಕಾಗಿ ಸಂಸತ್ ಭವನಕ್ಕೆ ನುಗ್ಗಿ ದಾಂಧಲೆ ನಡೆಸಿದ್ದಾರೆ.

ಅಕ್ಟೋಬರ್‌ನಲ್ಲಿ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಬೋಲ್ಸನೇರೋ ಸೋಲು ಅನುಭವಿಸಿದ್ದು, ಆದ್ರೆ ಈ ಸೋಲನ್ನು ನಿರಾಕರಿಸಿದ ಅವರ ಸಾವಿರಾರು ಬೆಂಬಲಿಗರು, ರಾಜಧಾನಿ ಬ್ರೆಸಿಲಿಯಾದ ಪ್ರಮುಖ ಭವನಗಳನ್ನು ಆಕ್ರಮಿಸಿದ್ದಾರೆ. ಭದ್ರತಾ ವಲಯವನ್ನು ಬೇಧಿಸಿ ಸುಪ್ರೀಂಕೋರ್ಟ್, ಸಂಸತ್ ಭವನವಾದ ನ್ಯಾಷನಲ್ ಕಾಂಗ್ರೆಸ್, ಅಧ್ಯಕ್ಷರ ಭವನಗಳಿಗೆ ನುಗ್ಗಿದ್ದಾರೆ.

ಈ ವೇಳೆ ಭದ್ರತಾ ಪಡೆಗಳು, ಪತ್ರಕರ್ತರ ಮೇಲೆ ದಾಳಿ ನಡೆಸಿದ್ದಾರೆ. ಬೋಲ್ಸನೇರೋಗೆ ಮರಳಿ ಅಧಿಕಾರ ಕೊಡಬೇಕು. ಇಲ್ಲವಾದರೆ ಲೂಲಾ ಡಿಸಿಲ್ವಾರನ್ನು ಅಧಿಕಾರದಿಂದ ಕೆಳಗಿಳಿಸಬೇಕು ಎಂದು ಆಕ್ರೋಶಿತರರು ಬೇಡಿಕೆ ಇಟ್ಟಿದ್ದಾರೆ.

ಬೆಂಬಲಿಗರನ್ನು ನಿಯಂತ್ರಿಸಲು ಭದ್ರತಾ ಪಡೆಗಳು ಹೆಲಿಕಾಪ್ಟರ್ ಮೂಲಕ ಟಿಯರ್ ಗ್ಯಾಸ್ ಪ್ರಯೋಗಿಸಿವೆ. ಈವರೆಗೂ 500ಕ್ಕೂ ಹೆಚ್ಚು ಮಂದಿಯನ್ನು ಬಂಧಿಸಲಾಗಿದೆ.

ಘಟನೆ ವಿರುದ್ಧ ಅಧ್ಯಕ್ಷ ಲೂಲಾ ಡಿಸಿಲ್ವಾ ನಿರ್ದಾಕ್ಷಿಣ್ಯವಾಗಿ ಹತ್ತಿಕ್ಕಬೇಕು ಆದೇಶಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ, ಅಮೆರಿಕ ಅಧ್ಯಕ್ಷ ಜೋ ಬೈಡನ್ ಸೇರಿ ವಿಶ್ವಸಮುದಾಯ ಈ ಘಟನೆಯನ್ನು ಖಂಡಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!