ದಿನಭವಿಷ್ಯ| ಕೆಲವು ಕ್ಲಿಷ್ಟಕರ ವಿಚಾರದಲ್ಲಿ ಇತರರ ಸಲಹೆ ಪಡೆದು ಮುನ್ನಡೆಯಿರಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಮೇಷ
ನಿಮ್ಮ ಗುರಿ ಸಾಧಿಸಲು ಇಂದು ಕಠಿಣ ಶ್ರಮ ಪಡಬೇಕಾಗುವುದು. ಹಣದ ವಿಷಯದಲ್ಲಿ ಆತುರದ ತೀರ್ಮಾನ ಬೇಡ. ಖಾಸಗಿ ಸಂಬಂಧದಲ್ಲಿ ಬಿಕ್ಕಟ್ಟು.

ವೃಷಭ
ಕೆಲವು ಕ್ಲಿಷ್ಟಕರ ವಿಚಾರದಲ್ಲಿ ಇತರರ ಸಲಹೆ ಪಡೆದು ಮುನ್ನಡೆಯಿರಿ. ಆತುರದ ತೀರ್ಮಾನ ಹಾನಿ ತರಬಹುದು. ಕೌಟುಂಬಿಕ ಭಿನ್ನಮತ.

ಮಿಥುನ
ಹಳೆಯ ಸಂಬಂಧ ಮತ್ತೆ  ಚಿಗಿತುಕೊಳ್ಳಬಹುದು.ಸಂತೋಷದ ಮನಸ್ಥಿತಿ. ಹಾಗಾಗಿ ಎಲ್ಲ ಕಾರ್ಯಗಳಲ್ಲಿ ಉತ್ಸಾಹದಿಂದ ಪಾಲ್ಗೊಳ್ಳುವಿರಿ.

ಕಟಕ
ನಿಮ್ಮ ನೆಮ್ಮದಿ ಹಾಳು ಮಾಡುವಂತಹ ಸಂಬಂಧ ಬೇಕೆ ಎಂಬ ಕುರಿತು ಪರಾಮರ್ಷೆ ಮಾಡಿಕೊಳ್ಳಿ. ಹಗಲುಗನಸು ಕಾಣುತ್ತಾ ವಾಸ್ತವ ಮರೆಯದಿರಿ.

ಸಿಂಹ
ವೃತ್ತಿ ಮತ್ತು ಮೋಜಿನ ಮಧ್ಯೆ ಸಮತೋಲನ ಸಾಧಿಸಿ.ಮೋಜೇ ಅಧಿಕವಾಗದಿರಲಿ.ಕೆಲವು ಹೊಣೆಗಾರಿಕೆ ಮರೆಯದಿರಿ. ಆರ್ಥಿಕ ಒತ್ತಡ ಹೆಚ್ಚು.

ಕನ್ಯಾ
ಹಣಕಾಸು ವಿಚಾರಕ್ಕೆ ಸಂಬಂಧಿಸಿ  ಪ್ರಮುಖ ನಿರ್ಧಾರ ತಾಳಲು ಕಾಲ ಪಕ್ವವಾಗಿದೆ. ನಿಮಗೆ ಒಳಿತಾಗಲಿದೆ. ಹೊಟ್ಟೆ ಕೆಡಿಸುವಂತಹ ಆಹಾರ ಸೇವಿಸದಿರಿ.

ತುಲಾ
ಖಾಸಗಿ ಬದುಕಿನಲ್ಲಿ ಎಚ್ಚರದ ನಡೆ ಅವಶ್ಯ. ಸಂವಹನದ ಕೊರತೆ ಭಿನ್ನಾಭಿಪ್ರಾಯ ಮೂಡಿಸಬಹುದು. ಎಲ್ಲರ ಜತೆ ಹೊಂದಾಣಿಕೆಗೆ ಆದ್ಯತೆ ಕೊಡಿ.

ವೃಶ್ಚಿಕ
ಹಣ ಖರ್ಚು ಮಾಡುವಲ್ಲಿ ಎಚ್ಚರ ವಹಿಸಿ.ಅನವಶ್ಯ ಖರ್ಚು ಹೆಚ್ಚಬಹುದು. ನಿಮ್ಮ ಖುಷಿ ಕೆಡಿಸುವಂತಹ ಪ್ರಸಂಗ ಮನೆಯಲ್ಲಿ ಸಂಭವಿಸಬಹುದು.

ಮಕರ
ನಿಮ್ಮ ಕೆಲಸದಲ್ಲಿ ಹೆಚ್ಚು ಎಚ್ಚರಿಕೆಯಿಂದಿರಿ.ಹಲವರಿಗೆ ನಿಮ್ಮ ಕೆಲಸ ತೃಪ್ತಿ ತರಲಾರದು. ನಿರೀಕ್ಷಿತ ಫಲಿತಾಂಶ ವಿಳಂಬವಾದೀತು.ಆರ್ಥಿಕ ಒತ್ತಡ ಹೆಚ್ಚು.

ಕುಂಭ
ಆಪ್ತರ ಮೇಲೆ ನಿಮ್ಮ ಅಭಿಪ್ರಾಯ ಹೇರಬೇಡಿ. ಅವರ ಭಾವನೆಯನ್ನೂ ಗೌರವಿಸಿ. ಭಿನ್ನಮತ ನಿವಾರಿಸಲು ಆದ್ಯತೆ ಕೊಡಿರಿ.

ಮೀನ
ವೃತ್ತಿಪರವಾಗಿ ಮತ್ತು ಖಾಸಗಿಯಾಗಿ ಉನ್ನತಿ. ಬಂಧುತ್ವ ವೃದ್ಧಿ. ಹಣಕಾಸು ಪರಿಸ್ಥಿತಿ ಉತ್ತಮ. ಆತ್ಮೀಯರೊಂದಿಗೆ ಕಾಲಕ್ಷೇಪ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!