ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಳೆಯುಳಿಕೆ ಇಂಧನಗಳಮೇಲಿನ ಅವಲಂಬನೆ ತಪ್ಪಿಸಿ ಹಸಿರು ಇಂಧನಗಳನ್ನು ಬಳಸುವ ಕುರಿತು ದೇಶದಲ್ಲಿ ಅದಾಗಲೇ ಹಲವಾರು ಪ್ರಯತ್ನಗಳಾಗುತ್ತಿವೆ. ಈಗಾಗಲೇ ಹೈಡ್ರೋಜನ್ ಅನ್ನು ಇಂಧನವಾಗಿ ಬಳಸಿಕೊಳ್ಳುವಬ ಕಾರುಗಳು ಅಭಿವೃದ್ಧಿಯಾಗಿದೆ. ಇತ್ತೀಚೆಗಷ್ಟೇ ನಡೆದ ಇಂಧನ ಸಪ್ತಾಹದಲ್ಲಿ ರಿಲಯನ್ಸ್ ಹಾಗು ಅಶೋಕ್ ಲೇಲ್ಯಾಂಡ್ ಗಳ ಸಹಯೋಗದಲ್ಲಿ ಟ್ರಕ್ ಗಳಲ್ಲಿ ಬಳಸಬಹುದಾದ ಹೈಡ್ರೋಜನ್ ಚಾಲಿತ ತಂತ್ರಜ್ಞಾನ ಅನಾವರಣಗೊಂಡಿದೆ. ಇದೀಗ ಹೈಡ್ರೋಜನ್ ಚಾಲಿತ ಬಸ್ ಅನಾವರಣಗೊಂಡಿದ್ದು ಇನ್ನೊಂದೇ ವರ್ಷದಲ್ಲಿ ಇದು ರಸ್ತೆಗಳಲ್ಲಿ ಓಡಾಡಲಿದೆ.
Olectra Greentech ಹಾಗೂ ರಿಲಯನ್ಸ್‌ನೊಂದಿಗೆ ತಾಂತ್ರಿಕ ಸಹಭಾಗಿತ್ವದಲ್ಲಿ ಈ ಬಸ್ ಅನ್ನು ಅಭಿವೃದ್ಧಿಪಡಿಸಲಾಗಿದ್ದು ಇದು ಒಂದು ವರ್ಷದೊಳಗೆ ವಾಣಿಜ್ಯಿಕವಾಗಿ ಬಿಡುಗಡೆಯಾಗಲಿದೆ. ಇದು ಕಾರ್ಬನ್ ಮುಕ್ತ ಹೈಡ್ರೋಜನ್ ಮಹತ್ವಾಕಾಂಕ್ಷೆಗಳನ್ನು ಸಾಧಿಸಲು ಸರ್ಕಾರಕ್ಕೆ ಸಹಾಯ ಮಾಡುತ್ತದೆ. lectra ತನ್ನ ಹೈಡ್ರೋಜನ್ ಬಸ್‌ಗಳ ಮೂಲಕ ರಾಷ್ಟ್ರದ ಪರಿಸರ ಸುಸ್ಥಿರ ಇಂಧನ ಭದ್ರತೆಗೆ ಕೊಡುಗೆ ನೀಡುವ ಗುರಿಯನ್ನು ಹೊಂದಿದೆ ಎಂದು ಕಂಪನಿ ಹೇಳಿದೆ.
12 ಮೀಟರ್ ಉದ್ದವಾಗಿರುವ ಕೆಳಅಂತಸ್ತಿನ ಬಸ್ ಇದಾಗಿದ್ದು ಪ್ರಯಾಣಿಕರಿಗೆ ಅನುಕೂಲವಾಗಲು 32 ರಿಂದ 49 ಆಸನಗಳನ್ನು ಹೊಂದಿಸಬಹುದಾಗಿದೆ. ಒಂದು ಸಲ ಹೈಡ್ರೋಜನ್ ತುಂಬಿಸಿದರೆ 400 ಕಿಲೋಮೀಟರ್ ದೂರವನ್ನು ಕ್ರಮಿಸಬಲ್ಲುದು. ಕೇವಲ 15 ನಿಮಿಷದ ಅವಧಿಯಲ್ಲಿ ಪುನಃ ಇಂಧನ ತುಂಬಿಸಬಹುದಾಗಿದೆ. ಒಂದು ವರ್ಷದೊಳಗೆ ಈ ಬಸ್‌ಗಳನ್ನು ವಾಣಿಜ್ಯಿಕವಾಗಿ ಪ್ರಾರಂಭಿಸುವ ಗುರಿಯನ್ನು ಒಲೆಕ್ಟ್ರಾ ಹೊಂದಿದೆ.