ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಖ್ಯಾತ ಗಾಯಕ ಅರಿಜಿತ್ ಸಿಂಗ್ ಹಿನ್ನೆಲೆ ಗಾಯನಕ್ಕೆ ವಿದಾಯ ಹೇಳುವ ಮೂಲಕ ಸಂಗೀತ ಪ್ರಿಯರಿಗೆ ಶಾಕ್ ನೀಡಿದ್ದರು. ಇದೀಗ ಬಹುಭಾಷಾ ಗಾಯಕಿ ಶ್ರೇಯಾ ಘೋಷಾಲ್ ಕೂಡ ಅದೇ ಹಾದಿಯಲ್ಲಿದ್ದಾರಾ ಎಂಬ ಪ್ರಶ್ನೆ ಹುಟ್ಟುಹಾಕಿದೆ. ಇದಕ್ಕೆ ಕಾರಣ ಅವರ ಈ ಮಾತುಗಳು.
ಇತ್ತೀಚೆಗೆ ಗಾಯಕಿ ಶ್ರೇಯಾ ಘೋಷಾಲ್ ನೀಡಿದ ಸಂದರ್ಶನದಲ್ಲಿ ತಮಗೂ ಅರಿಜಿತ್ ಸಿಂಗ್ ಅವರಂತೆ ಆಲೋಚನೆಗಳು ಬಂದಿತ್ತು ಎಂದು ಹೇಳಿಕೊಂಡಿದ್ದಾರೆ.
ಸಂಗೀತ ಕ್ಷೇತ್ರದಲ್ಲಿ ಅರಿಜಿತ್ ಸಿಂಗ್ ಅವರು ತುಂಬಾ ಸಾಧನೆ ಮಾಡಿದ್ದಾರೆ. ಅವರು ಮನಸ್ಸಿನಿಂದ ಹಾಡು ಹಾಡುತ್ತಾರೆ. ಅಲ್ಲಿ ಅವರು ಸಂತೋಷಕ್ಕೆ ಹಾಡುತ್ತಾರೆ ವಿನಃ ಯಾವುದೇ ರೀತಿಯ ಲಾಭಕ್ಕಾಗಿ ಅಲ್ಲ. ಅದಕ್ಕೆ ಜನರು ಅವರನ್ನು ತುಂಬಾ ಇಷ್ಟಪಡುತ್ತಾರೆ. ಆದರೆ ಅವರು ಖುದ್ದು ನಿರ್ಧಾರ ತೆಗೆಯುವ ಮೂಲಕ ಸಂಗೀತಕ್ಕೆ ವಿದಾಯ ಹೇಳಿದ್ದಾರೆ. ಅದೇ ರೀತಿ ನನಗೂ ತುಂಬಾ ಸಲ ಸಂಗೀತದಿಂದ ವಿರಾಮ ಪಡೆಯಬೇಕು ಅನಿಸುತ್ತದೆ. ವಿಶ್ರಾಂತಿ ಬೇಕು ಅನಿಸುತ್ತದೆ ಎಂದು ಶ್ರೇಯಾ ಹೇಳಿಕೊಂಡಿದ್ದಾರೆ.
ನನಗೆ ವೇದಿಕೆಯಲ್ಲಿ ಲಿಪ್-ಸಿಂಕ್ ಮಾಡುವುದು ಅಂದರೆ ಇಷ್ಟವಿಲ್ಲ. ಒಂದು ವೇಳೆ ಆ ರೀತಿಯ ಪರಿಸ್ಥಿತಿ ಬಂದರೆ ತಾನು ಹಾಡುವುದನ್ನು ನಿಲ್ಲಿಸುವೆ. ತಮ್ಮ ದ್ವನಿಯನ್ನು ಬೆಂಬಲಿಸುವವರೆಗೆ ನಾನು ಯಾವಾಗಲು ನೇರವಾಗಿ ಹಾಡಲು ಬಯಸುತ್ತೇನೆ ಎಂದು ಹೇಳಿದರು.
ಸಂಗೀತ ಎಂಬುದು ಕೇವಲ ಅಲ್ಲಿ ಹಾಡು ಮಾತ್ರವಲ್ಲ. ಅಲ್ಲಿ ಅಭಿಮಾನಿಗಳು ತಮ್ಮ ನೋವವನ್ನು ಮರೆಯಲು ಕೇಳಿಸಿಕೊಳ್ಳುತ್ತಾರೆ. ಅವರ ಬೇಸರಗಳನ್ನು ದೂರ ಮಾಡುತ್ತದೆ. ಹೀಗಾಗಿ ನನಗೆ ಜನರಿಗೆ ಸಿಗುವ ಪ್ರೀತಿಯು ಸಂಗೀತ ಪ್ರದರ್ಶನ ನೀಡಲು ಪ್ರೇರೇಪಿಸುತ್ತದೆ ಎಂದು ಶ್ರೇಯಾ ಹೇಳಿದರು.



