Wednesday, June 7, 2023

Latest Posts

ನನಗೂ ಮಗು ಪಡೆಯುವ ಆಸೆ ಇದೆ, ಆದರೆ..: ನಟ ಸಲ್ಮಾನ್ ಖಾನ್ ಹೇಳಿದ್ದೇನು?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಬಾಲಿವುಡ್ (Bollywood) ನಟ ಸಲ್ಮಾನ್ ಖಾನ್ ಇತ್ತೀಚೆಗೆ ತಂದೆಯಾಗುವ ಆಸೆ ಬಗ್ಗೆ ಮಾತನಾಡಿದ್ದಾರೆ.

‘ಕಿಸಿ ಕಾ ಭಾಯ್ ಕಿಸಿ ಕಿ ಜಾನ್’ (Kisi Ka Bhai Kisi Ki Jaan) ಚಿತ್ರದ ಸೋಲಿನ ನಂತರ ಸಂದರ್ಶನವೊಂದರಲ್ಲಿ ಸಲ್ಮಾನ್ ಖಾನ್ ಪ್ರೀತಿ, ಮದುವೆ ಮತ್ತು ಮಗುವನ್ನು ಪಡೆಯುವ ಬಗ್ಗೆ ಮಾತನಾಡಿದ್ದಾರೆ. ಪ್ರೀತಿಯಲ್ಲಿ ಅನ್‌ಲಕ್ಕಿ ಎಂದಿರುವ ಸಲ್ಮಾನ್ ಇದೀಗ ಮಗುವನ್ನು ಪಡೆಯುವ ಆಸೆ ಇದೆ ಎಂದು ಹೇಳಿದ್ದಾರೆ. ‘ಮಗುವನ್ನು ಪಡೆಯಲು ಯೋಚಿಸಿದ್ದೆ ಆದರೆ ಭಾರತದ ಕಾನೂನು ಅವಕಾಶ ನೀಡುತ್ತಿಲ್ಲ’ ಎಂದು ಹೇಳಿದ್ದಾರೆ.

ಸಲ್ಮಾನ್‌ಗೆ ಮಕ್ಕಳೆಂದರೆ ತುಂಬಾ ಇಷ್ಟ. ಸಹೋದರ- ಸಹೋದರಿಯ ಮಕ್ಕಳ ಜೊತೆ ಫನ್ ಮಾಡುತ್ತಾರೆ. ಸಮಯ ಕಳೆಯುತ್ತಾರೆ. ಇದೀಗ ತಾವು ಮಗುವನ್ನು ಪಡೆಯುವ ಬಗ್ಗೆ ಯೋಚಿಸಿದ್ದೆ, ಮಕ್ಕಳು ಪಡೆಯಬೇಕು ಎಂಬುದು ನನ್ನಾಸೆಯಾಗಿತ್ತು. ಆದರೆ ಭಾರತದ ಕಾನೂನಿನ ಪ್ರಕಾರ ಅದು ಸಾಧ್ಯವಿಲ್ಲ. ಈಗ ಆ ಕಾನೂನು ಬದಲಾಗಿರಬಹುದು. ನನಗೆ ಮಕ್ಕಳೆಂದರೆ ಇಷ್ಟ ಎಂದು ಸಲ್ಮಾನ್ ಖಾನ್ ಹೇಳಿದ್ದಾರೆ.

ಕರಣ್ ಜೋಹರ್ ಇಬ್ಬರೂ ಮಕ್ಕಳ ತಂದೆಯಾಗಿದ್ದಾರೆ. ಆ ಬಗ್ಗೆ ಮಾತನಾಡಿದ ಸಲ್ಮಾನ್ ಖಾನ್, ‘ಅದನ್ನೇ ನಾನು ಮಾಡಲು ಪ್ರಯತ್ನಿಸುತ್ತಿದ್ದೆ. ಆದರೆ, ಆ ಕಾನೂನು ಬದಲಾಗಿರಬಹುದು, ನೋಡೋಣ. ನನಗೆ ಮಕ್ಕಳೆಂದರೆ ತುಂಬಾ ಇಷ್ಟ. ಆದರೆ ಮಕ್ಕಳು ಬಂದಾಗ ಅವರ ತಾಯಿ ಕೂಡ ಬರುತ್ತಾರೆ. ಅವರಿಗೆ ತಾಯಿ ಒಳ್ಳೆಯದು ಆದರೆ ನಮ್ಮ ಮನೆಯಲ್ಲಿ ಬಹಳಷ್ಟು ತಾಯಂದಿರಿದ್ದಾರೆ. ನಮಗೆ ಇಡೀ ಜಿಲ್ಲೆ, ಇಡೀ ಗ್ರಾಮವಿದೆ. ಅವರೇ ನೋಡಿಕೊಳ್ಳುತ್ತಾರೆ. ಆದರೆ ನನ್ನ ಮಗುವಿನ ನಿಜವಾದ ತಾಯಿ ನನ್ನ ಹೆಂಡತಿಯೂ ಆಗಿರುತ್ತಾರೆ’ ಎಂದು ಹೇಳಿದ್ದಾರೆ.

ಪ್ರೀತಿಯಲ್ಲಿ ನಾನು ಅನ್ ಲಕ್ಕಿ. ಈಗ ನಾನು ಕೇವಲ ಭಾಯಿ ಅಷ್ಟೇ ಸರ್’ ಎಂದು ಹೇಳಿದ ಸಲ್ಮಾನ್ ಖಾನ್, ‘ನನ್ನನ್ನು ಜಾನ್ ಎಂದು ಕರೆಯಲಿ ಅಂತ ನಾನು ಬಯಸಿದವಳು ಕೂಡ ನನ್ನನ್ನು ಭಾಯ್ ಎಂದು ಕರೆಯುತ್ತಾಳೆ. ನಾನೇನು ಮಾಡಲಿ?’ ಎಂದು ಸಲ್ಮಾನ್ ಖಾನ್ ಹೇಳಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!