ನನಗೆ 52 ವರ್ಷ, ಈಗಲೂ ಸ್ವಂತ ಮನೆಯೇ ಇಲ್ಲ: ರಾಹುಲ್‌ ಗಾಂಧಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

ಇದಾಗಿ ನನಗೆ52 ವರ್ಷ ಕಳೆದಿದೆ. ಈಗಲೂ ಸ್ವಂತ ಮನೆಯೇ ಇಲ್ಲ ಎಂದು ಕಾಂಗ್ರೆಸ್‌ (Congress) ನಾಯಕ ರಾಹುಲ್‌ ಗಾಂಧಿ (Rahul Gandhi) ಹೇಳಿದ್ದಾರೆ.

ರಾಯ್ಪುರದಲ್ಲಿ (Raipur) ನಡೆದ ಕಾಂಗ್ರೆಸ್‌ನ 85ನೇ ಸಂಪುಟ ಸಭೆಯಲ್ಲಿ ಮಾತನಾಡಿದ ಅವರು, ಮನೆಯಲ್ಲಿ ವಿಚಿತ್ರ ಪರಿಸ್ಥಿತಿ ಇತ್ತು. ನಾನು ಅಮ್ಮನ ಬಳಿಗೆ ಹೋಗಿ ಏನಾಯಿತು ಎಂದು ಕೇಳಿದೆ. ಅದಕ್ಕೆ ಅವರು, ನಾವು ಮನೆಯಿಂದ ಹೊರಡುತ್ತಿದ್ದೇವೆ ಎಂದರು. ಇದು ನನ್ನ ಮನೆ ಅಲ್ಲವೇ ಎಂದು ನಾನು ಕೇಳಿದೆ. ಆಗ ಅಮ್ಮ, ಇದು ನಮ್ಮ ಮನೆ ಅಲ್ಲ, ಸರ್ಕಾರದ್ದು ಎಂದರು ಎಂದು ರಾಹುಲ್‌ 1977 ರ ಘಟನೆಯ ಬಗ್ಗೆ ಮಾತನಾಡಿದರು.

1977ರ ವರ್ಷ. ನನಗೆ 6 ವರ್ಷವಿರಬೇಕು. ಚುನಾವಣೆ ನಡೆಯುತ್ತಿತ್ತು. ಅಂದು ಇದರ ಮಹತ್ವದ ಬಗ್ಗೆ ಯಾವುದೇ ಅರಿವಿರಲಿಲ್ಲ. ಆದರೆ, ಮನೆಯಲ್ಲಿ ಒಂಥರಾ ಭಿನ್ನ ವಾತಾವರಣ ನಿರ್ಮಾಣವಾಗಿತ್ತು. ನಾನು ನನ್ನ ತಾಯಿಯ ಬಳಿ, ‘ಏನಾಯ್ತು ಅಮ್ಮ’ ಎಂದು ಕೇಳಿದ್ದೆ. ನಾವು ಈ ಮನೆಯನ್ನು ಖಾಲಿ ಮಾಡಬೇಕು ಎಂದು ಹೇಳಿದ್ದರು. ಅಲ್ಲಿಯವರೆಗೂ, ಆ ಮನೆಯನ್ನು ನಮ್ಮದೇ ಎಂದು ಭಾವಿಸಿಕೊಂಡಿದ್ದೆ. ನಾವೇಕೆ ಈ ಮನೆಯನ್ನು ಖಾಲಿ ಮಾಡಬೇಕು ಎಂದು ತಾಯಿಗೆ ಕೇಳಿದ್ದೆ. ಅದೇ ಮೊದಲ ಬಾರಿಗೆ ನನ್ನ ತಾಯಿ ಇದು ನಮ್ಮ ಮನೆಯಲ್ಲ ಎಂದು ಹೇಳಿದ್ದರು. ಇದು ಸರ್ಕಾರಿ ಮನೆ ಎಂದಿದ್ದರು. ನಾವು ಎಲ್ಲಿಗೆ ಹೋಗೋದು ಎಂದು ಕೇಳಿದಾಗ, ಎಲ್ಲಿಗೆ ಹೋಗೋದು ಎನ್ನುವುದು ನಮಗೂ ಕೂಡ ತಿಳಿದಿಲ್ಲ ಎಂದಿದ್ದರು. ನನಗೆ ಇದರಿಂದ ಅಚ್ಚರಿಯಾಗಿತ್ತು. ಯಾಕೆಂದರೆ, ನನ್ನ ಮನೆ ಎಂದುಕೊಂಡಿದ್ದ ಸ್ಥಳವನ್ನು ನಾವು ಖಾಲಿ ಮಾಡುತ್ತಿದ್ದೆವು. ಇದಾಗಿ 52 ವರ್ಷವಾಗಿದೆ ಇಂದಿಗೂ ಕೂಡ ನನಗೆ ಸ್ವಂತ ಮನೆಯಿಲ್ಲ ಎಂದು ತಿಳಿಸಿದ್ದಾರೆ.

ನಾನು ಭಾರತ್ ಜೋಡೋ ಯಾತ್ರೆಯನ್ನು ಪ್ರಾರಂಭಿಸಿದಾಗ, ನನ್ನ ಜವಾಬ್ದಾರಿ ಏನು ಎಂದು ಪ್ರಶ್ನಿಸಿಕೊಂಡಿದ್ದೆ. ಯಾತ್ರೆಯಲ್ಲಿ ಪಾಲ್ಗೊಳ್ಳುವ ಎಲ್ಲಾ ಜನರಿಗೆ ನಾನಿದ್ದ ಕಚೇರಿ ಮನೆಯಂತೆಯೇ ಭಾಸವಾಗಬೇಕು ಎಂದುಕೊಂಡಿದ್ದೆ. ಯಾತ್ರೆಯೇ ನಮ್ಮ ಮನೆಯಾಗಿತ್ತು. ಈ ಮನೆಯ ಬಾಗಿಲು ಎಲ್ಲರಿಗೂ ತೆರೆದಿತ್ತು. ಶ್ರೀಮಂತರು, ಬಡವರು, ಪ್ರಾಣಿಗಳು ಎಲ್ಲರಿಗೂ ಎಂದು ಮಾತನಾಡಿದ್ದಾರೆ.

ಯಾತ್ರೆ ಒಂದು ಪುಟ್ಟ ಐಡಿಯಾ ಆಗಿತ್ತು. ಆದರೆ ನಂತರ ನಾನು ಅದರ ಆಳವನ್ನು ಅರ್ಥಮಾಡಿಕೊಂಡಿದ್ದೇನೆ. ಯಾತ್ರೆ ಮನೆಯಾದ ದಿನ ಯಾತ್ರೆಯೇ ಬದಲಾಯಿತು. ಜನರು ನನ್ನೊಂದಿಗೆ ರಾಜಕೀಯದ ಬಗ್ಗೆ ಮಾತನಾಡಲಿಲ್ಲ. ಕೊನೆಗೆ ನಮ್ಮ ಪುಟ್ಟ ಮನೆ ಕಾಶ್ಮೀರಕ್ಕೆ ಬಂದಾಗ, ನಾನು ನನ್ನ ಮನೆಗೆ ಬಂದೆ ಎನಿಸಿತು ಎಂದು ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!