Sunday, March 26, 2023

Latest Posts

ವರದಕ್ಷಿಣೆಯಾಗಿ ಹಳೆಯ ಬೆಡ್ ಕೊಟ್ಟ ವಧುವಿನ ಅಪ್ಪ: ಮದುವೆ ಕ್ಯಾನ್ಸಲ್ ಮಾಡ್ಕೊಂಡ ವರ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

ಇತ್ತೀಚಿನ ದಿನಗಳಲ್ಲಿ ಮದುವೆಗಳು ಮುರಿದು ಬೀಳುವುದು ಹೆಚ್ಚುತ್ತಿದೆ. ಇದೀಗ ಹೈದರಾಬಾದ್‍ನಲ್ಲಿ ವರನೊಬ್ಬ ತನಗೆ ವಧು ಕಡೆಯವರು ವರದಕ್ಷಿಣೆ ಎಂದು ಹಳೆಯ ಬೆಡ್ (Old Bed) ನೀಡಿದ್ದಕ್ಕೆ ಮದುವೆಯನ್ನೇ ಕ್ಯಾನ್ಸಲ್ (Marriage Cancel) ಮಾಡಿಕೊಂಡಿದ್ದಾನೆ.

ಬಸ್ ಚಾಲಕನಾಗಿ ಕೆಲಸ ಮಾಡುತ್ತಿದ್ದ ಯುವಕನ ಜೊತೆ ಬಂದ್ಲಗುಡ ನಿವಾಸಿ ಯುವತಿಯ ಮದುವೆ ನಿಶ್ಚಯವಾಗಿತ್ತು. ಫೆಬ್ರವರಿ 19 ಕ್ಕೆ ಮದುವೆ ದಿನಾಂಕವೂ ನಿಗದಿಯಾಗಿತ್ತು. ಇಬ್ಬರಿಗೂ ಇದು ಎರಡನೇ ಮದುವೆಯಾಗಿತ್ತು. ಈ ಹಿನ್ನೆಲೆಯಲ್ಲಿ ಹಳೆಯ ಪೀಠೋಪಕರಣಗಳನ್ನು ವರದಕ್ಷಿಣೆಯಾಗಿ ನೀಡುವುದಾಗಿ ವಧುವಿನ ತಂದೆ ಮೊದಲೇ ಹೇಳಿದ್ದಾರೆ. ಈ ಎಲ್ಲಾ ಷರತ್ತುಗಳನ್ನು ವರನೂ ಕೂಡ ಒಪ್ಪಿದ್ದು, ಬೆಡ್ ಮಾತ್ರ ಹೊಸದಾಗಿರಬೇಕು ಎಂದು ಹೇಳಿದ್ದನು.ಹೀಗಾಗಿ ಮದುವೆ ದಿನ ವಧುವಿನ ಮನೆಯವರು ಪೀಠೋಪಕರಣಗಳನ್ನು ವರನ ಮನೆಗೆ ಕಳುಹಿಸಿದ್ದಾರೆ. ಈ ವೇಳೆ ಬೆಡ್ ಸರಿಪಡಿಲು ಹೋದಾಗ ಅದು ಸ್ವಲ್ಪ ಹರಿದು ಹೋಯಿತು. ಮದುವೆಯ ದಿನದಂದು ವರ ಮತ್ತು ಅವರ ಮನೆಯವರು ಬರಲಿಲ್ಲ. ಇನ್ನು ವಧುವಿನ ಮನೆಯವರು ಅವರ ಮನೆಗೆ ಹೋದಾಗ, ಅವರು ಹಳೆಯ ಹಾಸಿಗೆಯ ಬಗ್ಗೆ ಆಕೆಯ ತಂದೆಗೆ ತಿಳಿಸಿ ಜಗಳವಾಡಿದರು. ಅಲ್ಲದೆ ಅನುಚಿತವಾಗಿ ವರ್ತಿಸಿದರು.

ವರನ ಬಳಿ ಮನವಿ ಮಾಡಿದರೂ ಆತ ಮದುವೆಗೆ ಬರಲು ನಿರಾಕರಿಸಿದ್ದಾನೆ. ಹಳೆಯ ಹಾಸಿಗೆಯನ್ನು ನೀಡಿದ್ದಕ್ಕಾಗಿ ವರ ಸಿಟ್ಟುಮಾಡಿಕೊಂಡಿದ್ದಾನೆ. ಅಲ್ಲದೆ ಹೊಸ ಹಾಸಿಗೆ ತರುವಂತೆ ತಾಕೀತು ಮಾಡಿದ್ದು, ಮದುವೆಯನ್ನೇ ಕ್ಯಾನ್ಸಲ್ ಮಾಡಿಕೊಂಡಿದ್ದಾನೆ.
ಇತ್ತ ವರ ವಿರುದ್ಧ ವಧುವಿನ ತಂದೆ ಪೊಲೀಸರಿಗೆ ವರ ಮೋಸ ಮಾಡಿರುವುದಾಗಿ ಕಂಪ್ಲೆಂಟ್ ಕೊಟ್ಟಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!